ಇಂದಿನ ದಿನ ಭವಿಷ್ಯ : ಜಾತಕ ಇಂದು 25 ಫೆಬ್ರವರಿ 2026 ಬುಧವಾರ ಜ್ಯೋತಿಷ್ಯ ಶಾಸ್ತ್ರದ (Astrology), ಪ್ರಕಾರ 12 ರಾಶಿ ಸೇರಿದಂತೆ ಹೆಚ್ಚಿನ ಮಾಹಿತಿಗೆ ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು ಸೋಮಶೇಖರ್ ಗುರೂಜಿ (B.Sc) ನೀಡಿರುವ ಮಾಹಿತಿ ನೋಡಿ
ಬುಧವಾರದ ಪಂಚಾಂಗ (25 ಫೆಬ್ರವರಿ 2026)
ಸೂರ್ಯೋದಯ: 6:40 AM | ಸೂರ್ಯಾಸ್ತ: 6:17 PM
ತಿಥಿ: ನವಮಿ (ನಂತರ ದಶಮಿ) | ನಕ್ಷತ್ರ: ರೋಹಿಣಿ (ನಂತರ ಮೃಗಶಿರ)
ರಾಹುಕಾಲ: 12:00 PM ರಿಂದ 01:30 PM
ಯಮಗಂಡ: 07:30 AM ರಿಂದ 09:00 AM

♈ ಮೇಷ ರಾಶಿ
ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿದೆ. ವಿವಾಹಕ್ಕೆ ಕಲ್ಯಾಣ ಮಂಟಪ ಬುಕಿಂಗ್ ಅಥವಾ ಮಾತುಕತೆಗಳಿಗೆ ಶುಭ ದಿನ. ಕಚೇರಿಯಲ್ಲಿ ಸಹೋದ್ಯೋಗಿಗಳಿಂದ ಅಡ್ಡಿ ಎದುರಾಗಬಹುದು, ತಾಳ್ಮೆ ಇರಲಿ. ಕೋಪದಿಂದ ದುಡುಕಿ ಹಣ ಕಳೆದುಕೊಳ್ಳದಿರಿ. ಮಾನಸಿಕ ನೆಮ್ಮದಿಗಾಗಿ ದೂರ ಪ್ರಯಾಣ ಮಾಡುವಿರಿ.
ಅದೃಷ್ಟ ಸಂಖ್ಯೆ: 3 | ಶುಭ ಬಣ್ಣ: ಕೆಂಪು, ಕೇಸರಿ.
♉ ವೃಷಭ ರಾಶಿ
ಶತ್ರುಗಳ ಕಾಟವಿದ್ದರೂ ತಾಳ್ಮೆಯಿಂದ ವರ್ತಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ದಂಪತಿಗಳ ನಡುವೆ ಪ್ರೀತಿ, ವಾತ್ಸಲ್ಯ ಹೆಚ್ಚಲಿದೆ. ಉದ್ಯೋಗದಲ್ಲಿ ಸೂಕ್ತ ಸ್ಥಾನಮಾನ ಹಾಗೂ ಸಂಶೋಧನಾ ವಿಭಾಗದವರಿಗೆ ಪ್ರಗತಿ ಸಿಗಲಿದೆ.
ಅದೃಷ್ಟ ಸಂಖ್ಯೆ: 7 | ಶುಭ ಬಣ್ಣ: ಬಿಳಿ, ಹಸಿರು.
♊ ಮಿಥುನ ರಾಶಿ
ಕೆಲಸದಲ್ಲಿ ಮುಂಬಡ್ತಿ ಹಾಗೂ ಧನ ಲಾಭದ ಯೋಗವಿದೆ. ತಾಯಿಯ ಮಾತುಗಳಿಗೆ ಹೆಚ್ಚಿನ ಮಹತ್ವ ನೀಡಿ. ಕಚೇರಿಯಲ್ಲಿ ಅಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ಅತಿಯಾದ ಹಣದ ಆಸೆ ಸಂಕಷ್ಟ ತರಬಹುದು, ಎಚ್ಚರ. ಹಿತಶತ್ರುಗಳ ಬಗ್ಗೆ ಜಾಗರೂಕರಾಗಿರಿ.
ಅದೃಷ್ಟ ಸಂಖ್ಯೆ: 6 | ಶುಭ ಬಣ್ಣ: ಕೆಂಪು.
♋ ಕರ್ಕಾಟಕ ರಾಶಿ
ಉದ್ಯೋಗಕ್ಕಾಗಿ ವಿದೇಶ ಪ್ರಯಾಣದ ಯೋಗವಿದೆ. ಕಚೇರಿ ಕೆಲಸಗಳು ಸುಗಮವಾಗಿ ಸಾಗಲಿವೆ. ಸಂಗಾತಿಗೆ ನೂತನ ಉದ್ಯೋಗ ಲಭಿಸುವ ಸಾಧ್ಯತೆ. ರೈತರಿಗೆ ಆರ್ಥಿಕ ಲಾಭದ ನಿರೀಕ್ಷೆ ಇದೆ. ವಿವಾಹ ಮಾತುಕತೆಗಳಲ್ಲಿ ಪ್ರಗತಿ ಕಂಡುಬರಲಿದೆ.
ಅದೃಷ್ಟ ಸಂಖ್ಯೆ: 8 | ಶುಭ ಬಣ್ಣ: ಬಿಳಿ, ಹಳದಿ.
♌ ಸಿಂಹ ರಾಶಿ
ವಿವಾಹಾಕಾಂಕ್ಷಿಗಳಿಗೆ ಕಂಕಣಬಲ ಕೂಡಿಬರಲಿದೆ. ವ್ಯಾಪಾರಸ್ಥರಿಗೆ ಲಾಭ. ಹೊಸ ಯೋಜನೆಗಳಿಗೆ ನಾಂದಿ ಹಾಡಲಿದ್ದೀರಿ. ಗೃಹದಲ್ಲಿ ನೆಮ್ಮದಿ ನೆಲೆಸಲಿದೆ. ಆತುರದ ನಿರ್ಧಾರಗಳನ್ನು ಕೈಗೊಳ್ಳಬೇಡಿ, ಸ್ನೇಹಿತರ ಸಲಹೆ ಪಡೆದು ಮುನ್ನಡೆಯಿರಿ.
ಅದೃಷ್ಟ ಸಂಖ್ಯೆ: 4 | ಶುಭ ಬಣ್ಣ: ಕೆಂಪು, ಹಳದಿ.
♍ ಕನ್ಯಾ ರಾಶಿ
ಕೊಟ್ಟಿರುವ ಹಣ ಮರಳಿ ಕೈಸೇರಲಿದೆ. ಉದ್ಯೋಗದಲ್ಲಿ ಮಹತ್ತರ ಬದಲಾವಣೆಗಳು ಕಂಡುಬರಲಿವೆ. ರಾಜಕೀಯ ವ್ಯಕ್ತಿಗಳು ಇಂದು ಸ್ವಲ್ಪ ಅಂತರ ಕಾಯ್ದುಕೊಳ್ಳುವುದು ಒಳಿತು. ರೈತರಿಗೆ ಸಿಹಿ ಸುದ್ದಿ ಸಿಗಲಿದೆ. ಉತ್ತಮ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ.
ಅದೃಷ್ಟ ಸಂಖ್ಯೆ: 2 | ಶುಭ ಬಣ್ಣ: ಕೆಂಪು.
♎ ತುಲಾ ರಾಶಿ
ಇತರರ ಸಹಾಯಕ್ಕೆ ನಿಲ್ಲುವಿರಿ. ಸಮಾಜದಲ್ಲಿ ಉತ್ತಮ ಗೌರವ, ಪ್ರಶಸ್ತಿ ಲಭಿಸುವ ಸಾಧ್ಯತೆ. ಮಾನಸಿಕ ನೆಮ್ಮದಿಗಾಗಿ ದೇವಾಲಯಗಳಿಗೆ ಭೇಟಿ ನೀಡಿ. ಹೊಸ ಒಪ್ಪಂದಗಳಿಗೆ ಸಹಿ ಹಾಕಲಿದ್ದೀರಿ. ಸ್ನೇಹಿತರೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯುವಿರಿ.
ಅದೃಷ್ಟ ಸಂಖ್ಯೆ: 9 | ಶುಭ ಬಣ್ಣ: ಬಿಳಿ, ಹಸಿರು.
♏ ವೃಶ್ಚಿಕ ರಾಶಿ
ಮೇಲಧಿಕಾರಿಗಳೊಂದಿಗೆ ಸಂಯಮದಿಂದ ವರ್ತಿಸಿ. ವ್ಯಾಪಾರದಲ್ಲಿ ಅಲ್ಪ ಲಾಭ ಸಿಗಲಿದೆ. ಭೂ ವ್ಯವಹಾರದಲ್ಲಿ ಮೋಸ ಹೋಗುವ ಸಾಧ್ಯತೆ ಇದೆ, ದಾಖಲೆಗಳ ಬಗ್ಗೆ ಗಮನವಿರಲಿ. ದಾಂಪತ್ಯದಲ್ಲಿ ಪ್ರೀತಿ ಹೆಚ್ಚಲಿದೆ. ಶತ್ರುಗಳ ಒಳಸಂಚಿನ ಬಗ್ಗೆ ಜಾಗೃತಿ ವಹಿಸಿ.
ಅದೃಷ್ಟ ಸಂಖ್ಯೆ: 4 | ಶುಭ ಬಣ್ಣ: ಕೆಂಪು, ಕೇಸರಿ.
♐ ಧನುಸ್ಸು ರಾಶಿ
ನಿಮ್ಮ ಬಹುದಿನಗಳ ಕೋರಿಕೆ ಈಡೇರಲಿದೆ. ಕೃಷಿಕರಿಗೆ ಸಂತಸದ ದಿನ. ತಾಳ್ಮೆ ಅತ್ಯಗತ್ಯ. ಹಿತಶತ್ರುಗಳಿಂದ ಅಂತರ ಕಾಯ್ದುಕೊಳ್ಳಿ. ಸಂಯಮದಿಂದಾಗಿ ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ. ಕಷ್ಟದಲ್ಲಿರುವವರಿಗೆ ನೆರವಾಗುವಿರಿ.
ಅದೃಷ್ಟ ಸಂಖ್ಯೆ: 6 | ಶುಭ ಬಣ್ಣ: ಹಳದಿ, ಕೇಸರಿ.
♑ ಮಕರ ರಾಶಿ
ಸ್ವಂತ ಉದ್ಯೋಗದಲ್ಲಿರುವವರಿಗೆ ಉತ್ತಮ ಲಾಭ. ಹಣಕಾಸಿನ ವ್ಯವಹಾರದಲ್ಲಿ ಜಾಗರೂಕತೆ ಇರಲಿ. ಶೀತ ಸಂಬಂಧಿ ಆರೋಗ್ಯ ಸಮಸ್ಯೆಗಳು ಕಾಡಬಹುದು. ಪರಸ್ಥಳ ವಾಸ ಹಾಗೂ ಅಧಿಕ ಖರ್ಚಿನ ಸಾಧ್ಯತೆ. ಪ್ರಯಾಣದಲ್ಲಿ ಎಚ್ಚರಿಕೆ ವಹಿಸಿ.
ಅದೃಷ್ಟ ಸಂಖ್ಯೆ: 1 | ಶುಭ ಬಣ್ಣ: ನೀಲಿ, ಪಚ್ಚೆ.
♒ ಕುಂಭ ರಾಶಿ
ನಿಮ್ಮ ಕಠಿಣ ಪರಿಶ್ರಮದಿಂದ ಬಹುದಿನಗಳ ಕನಸು ನನಸಾಗಲಿದೆ. ವಿದ್ಯಾರ್ಥಿಗಳಲ್ಲಿನ ಗೊಂದಲ ನಿವಾರಣೆಯಾಗಿ ಸ್ಪಷ್ಟತೆ ಮೂಡಲಿದೆ. ದಾಯಾದಿ ಕಲಹ ಮತ್ತು ಮಕ್ಕಳಿಗೆ ಸಣ್ಣಪುಟ್ಟ ಅನಾರೋಗ್ಯ ಕಾಡಬಹುದು. ಹಿರಿಯರ ಆಶೀರ್ವಾದ ಪಡೆದು ದಿನ ಆರಂಭಿಸಿ.
ಅದೃಷ್ಟ ಸಂಖ್ಯೆ: 9 | ಶುಭ ಬಣ್ಣ: ಹಸಿರು, ಹಳದಿ.
♓ ಮೀನ ರಾಶಿ
ಅದೃಷ್ಟ ನಿಮ್ಮ ಪರವಾಗಿದೆ. ಕೃಷಿ ಕೆಲಸಗಳು ಸುಗಮವಾಗಿ ಸಾಗಲಿವೆ. ಉನ್ನತ ಹುದ್ದೆಯಲ್ಲಿರುವವರು ಜವಾಬ್ದಾರಿಯಿಂದ ವರ್ತಿಸಿ. ವಾಹನ ಚಾಲನೆಯಲ್ಲಿ ಎಚ್ಚರ. ದುಷ್ಟ ಜನರಿಂದ ದೂರವಿರಿ. ಗೋಮಾತೆಗೆ ಅಕ್ಕಿ ಮತ್ತು ಬೆಲ್ಲವನ್ನು ನೀಡುವುದರಿಂದ ಶುಭವಾಗಲಿದೆ.
ಅದೃಷ್ಟ ಸಂಖ್ಯೆ: 1 | ಶುಭ ಬಣ್ಣ: ನೀಲಿ, ಹಸಿರು.
ಜ್ಯೋತಿಷ್ಯ ಸಮಾಲೋಚನೆಗಾಗಿ: ವಿವಾಹ, ಪ್ರೇಮ ವಿವಾಹ, ದಾಂಪತ್ಯ ಕಲಹ, ಸಾಲ ಬಾಧೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ಉದ್ಯೋಗ ಸಮಸ್ಯೆ ಸೇರಿದಂತೆ ಮುಂತಾದ ಸಮಸ್ಯೆಗಳಿಗೆ ಜಾತಕ ಹಾಗೂ ಹಸ್ತಸಾಮುದ್ರಿಕೆ ಆಧಾರದ ಮೇಲೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ಸಂಪರ್ಕಿಸಿ: ಜ್ಯೋತಿಷಿ ಸೋಮಶೇಖರ್ B.Sc (ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು) ಮೊಬೈಲ್: 93534 88403




