Raghavendra Swami Aradhana Mahotsava: ಮಂತ್ರಾಲಯದಲ್ಲಿ ರಾಯರ 353ನೇ ಆರಾಧನಾ ಮಹೋತ್ಸವ ನಡೆಯುತ್ತಿದೆ. ಶ್ರೀ ಮಠದಲ್ಲಿಬೆಳಗ್ಗೆಯಿಂದಲೇ ವಿಶೇಷ ಪೂಜಾ ಕಾರ್ಯಗಳು ಜೊತೆ ಉತ್ಸವಗಳು ನಡೆದಿದೆ.
ಇನ್ನೂ ಇವತ್ತು ರಾಯರ ಮಠದಲ್ಲಿ ಮಧ್ಯಾರಾಧನೆ ನಡೆಯಲಿದೆ. ಮಂತ್ರಾಲಯ ಸೇರಿದಂತೆ ದೇಶದ ಎಲ್ಲಾ ರಾಯರ ಮಠಗಳಲ್ಲಿ ಸಂಭ್ರಮದಿಂದ ಪೂಜಿಸಲಾಗುತ್ತದೆ. ನಿರ್ಮಾಲ್ಯ ವಿಸರ್ಜನೆ, ಉತ್ಸವರಾಯರ ಪಾದಪೂಜೆ, ಪಂಚಾಮೃತ ಅಭಿಷೇಕ, ರಜತ ಸಿಂಹವಾಹನೋತ್ಸವ ಕಾರ್ಯಕ್ರಮ ನಡೆದಿವೆ.
ರಾಘವೇಂದ್ರ ಸ್ವಾಮಿ ಆರಾಧನೆ ಎಂದರೇನು? ಇಲ್ಲಿದೆ ಮಾಹಿತಿ
ರಾಯರ ಆರಾಧನೆ ಎಂದರೆ ರಾಘವೇಂದ್ರ ಸ್ವಾಮಿ ಅವರು ಜೀವಂತವಾಗಿ ಬೃಂದಾವನವನ್ನು ಪ್ರವೇಶಿಸಿರುವ ದಿನವಾಗಿದೆ. ಈ ದಿನವನ್ನು ದೇಶ ವಿದೇಶಗಳಲ್ಲಿ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಮಠಗಳು ಮತ್ತು ಸಂಸ್ಥೆಗಳಲ್ಲಿ ಪೂರ್ವಾರಾಧನೆಯಿಂದ ಈ ದಿನ ಪ್ರಾರಂಭವಾಗುತ್ತದೆ.
ಇದನ್ನು ವಾರ್ಷಿಕವಾಗಿ ಶ್ರಾವಣ ಕೃಷ್ಣ ಪಕ್ಷ ದ್ವಿತೀಯ ಅಥವಾ ಹಿಂದೂ ಕ್ಯಾಲೆಂಡರ್ ಪ್ರಕಾರ ಶ್ರಾವಣ ಮಾಸದಲ್ಲಿ ಚಂದ್ರನ ಕ್ಷೀಣಿಸುತ್ತಿರುವ ಎರಡನೇ ದಿನದಂದು ಎಲ್ಲಾ ಕಡೆ ಆಚರಿಸಲಾಗುತ್ತದೆ. ಈ ದಿನ ರಾಯರ ಆರಾಧನೆ ಮಾಡಿದರೆ ಉತ್ತಮ.
ಕಡು ಬಡತನದಲ್ಲೇ ಜೀವನ ನಡೆಸಿದ ರಾಯರು!
ಭಗವಂತನ ಮೇಲೆ ಅಚಲವಾದ ನಂಬಿಕೆ ಇಟ್ಟಿದ್ದ ರಾಯರು ನುರಿತ ಸಂಗೀತಗಾರ ಮತ್ತು ಶ್ರೇಷ್ಠ ವಿದ್ವಾಂಸರೂ ಆಗಿದ್ದರು. ಆದರೆ ಇವರು ತಾವು ನೀಡುವ ಸೇವೆಗಳಿಗೆ ಎಂದಿಗೂ ಹಣ ಪಡೆದಯುತ್ತಿರಲಿಲ್ಲ. ಈ ಕಾರಣದಿಂದಲೇ ಅವರು ಕಡು ಬಡತನದಲ್ಲೇ ಜೀವನ ಸಾಗಿಸಬೇಕಾಯಿತು.
ರಾಘವೇಂದ್ರರ ಜ್ಞಾನದ ಬಗ್ಗೆ ಸಂತೋಷಗೊಂಡ ಸುಧೀಂದ್ರ ತೀರ್ಥರು ಅವರಿಗೆ “ಮಹಾಭಾಷ್ಯಾಚಾರ್ಯ” ಎಂಬ ಬಿರುದನ್ನು ನೀಡಿದರು. ಮುಂದೆ ರಾಘವೇಂದ್ರ ಅವರಿಗೆ ಸರಸ್ವತಿ ಎಂಬ ಮಹಿಳೆಯೊಂದಿಗೆ ವಿವಾಹವಾಗುತ್ತದೆ. ಇವರಿಗೆ ಒಬ್ಬ ಮಗ ಜನಿಸುತ್ತಾನೆ.
ಪವಾಡ ಪುರುಷ ಶ್ರೀ ರಾಘವೇಂದ್ರ ಸ್ವಾಮಿ!
ಶ್ರೀ ರಾಘವೇಂದ್ರ ಸ್ವಾಮಿಗಳು ತನ್ನ ನಂಬಿ ಬಂದ ಭಕ್ತರನ್ನು ಸದಾ ಕಾಲ ಕಾಯುತ್ತಾ ನೆಲೆಸಿರುವ ದೇವರು. ಇವರು ತಮ್ಮ ಕಾಲದಲ್ಲಿ ಲಕ್ಷಾಂತರ ಜನರಿಗೆ ಸಾಂತ್ವನ ಮತ್ತು ಜೀವನದ ಸರಿಯಾದ ದಿಕ್ಕನ್ನು ನೀಡಿದರು.
ಅವರು ಪವಾಡ ಪುರುಷ. ಒಮ್ಮೆ ಶ್ರೀ ರಾಘವೇಂದ್ರ ಸ್ವಾಮಿಗಳು ದೇಸಾಯಿ ಎಂಬ ವ್ಯಕ್ತಿಯ ಮನೆಯಲ್ಲಿ ಶ್ರೀರಾಮನ ಪೂಜೆಯನ್ನು ಮಾಡಬೇಕಾಗಿತ್ತು. ಆದರೆ, ದೇಸಾಯಿ ಎಂಬುವವರ ಮಗು ಆಕಸ್ಮಿಕವಾಗಿ ಸಾವನ್ನಪ್ಪಿತು. ಆಗ ರಾಯರು ಶ್ರೀರಾಮ ಮತ್ತು ಹನುಮಂತನನ್ನು ಪ್ರಾರ್ಥಿಸಿ ತಕ್ಷಣವೇ ಮಗುವಿಗೆ ಜೀವ ನೀಡಿದರು.