ಮಾರ್ಚ್ 12, 2026ರ ಗುರುವಾರ ಶ್ರೀ ವಿಶ್ವಾವಸು ನಾಮ ಸಂವತ್ಸರದ ಪಾಲ್ಗುಣ ಮಾಸದ ಕೃಷ್ಣ ಪಕ್ಷದ ನವಮಿ ತಿಥಿಯ ಶುಭ ದಿನವಾಗಿದೆ. ಇಂದಿನ ಗ್ರಹಗತಿಗಳ ಆಧಾರದ ಮೇಲೆ ದ್ವಾದಶ ರಾಶಿಗಳ ಭವಿಷ್ಯ ಮತ್ತು ಇಂದಿನ ಪಂಚಾಂಗದ ಪೂರ್ಣ ವಿವರಗಳು ಇಲ್ಲಿವೆ.
ಇಂದಿನ ಪಂಚಾಂಗ ವಿಶೇಷತೆಗಳು
- ಸೂರ್ಯೋದಯ: ಬೆಳಿಗ್ಗೆ 6:30 | ಸೂರ್ಯಾಸ್ತ: ಸಂಜೆ 6:21
- ತಿಥಿ: ನವಮಿ (ನಂತರ ದಶಮಿ)
- ನಕ್ಷತ್ರ: ಮೂಲ (ನಂತರ ಪೂರ್ವಾಷಾಢ)
- ಯೋಗ: ಸಿದ್ಧಿ | ಕರಣ: ತೈತಲೆ
- ಶುಭ ಮುಹೂರ್ತಗಳು: ಬ್ರಹ್ಮ ಮುಹೂರ್ತ (4:54 – 5:42), ಅಭಿಸಿತ್ ಮುಹೂರ್ತ (12:02 – 12:49).
- ಅಶುಭ ಸಮಯ: ರಾಹು ಕಾಲ (1:30 – 3:00), ಯಮಗಂಡ ಕಾಲ (6:00 – 7:30).
ರಾಶಿಗಳ ಫಲಾಫಲಗಳು:
ಮೇಷ ಮತ್ತು ಕುಂಭ: ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ
ಮೇಷ ರಾಶಿಯವರು ಇಂದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅನಿರೀಕ್ಷಿತ ಯಶಸ್ಸನ್ನು ಕಾಣಲಿದ್ದಾರೆ. ಪ್ರತಿಷ್ಠಿತ ಕಂಪನಿಗಳಿಗೆ ಸೇರ್ಪಡೆಗೊಳ್ಳಲು ಮಿತ್ರರ ನೆರವು ಸಿಗಲಿದೆ. ಕುಂಭ ರಾಶಿಯವರಿಗೂ ಸಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯ ಲಭಿಸಲಿದ್ದು, ತಾಂತ್ರಿಕ ನೌಕರರಿಗೆ ಇದು ಉತ್ತಮ ದಿನ.
ಮಕರ ಮತ್ತು ವೃಷಭ: ಮನೆಮಂದಿಯಲ್ಲಿ ಸಂತಸದ ವಾತಾವರಣ
ಮಕರ ರಾಶಿಯವರ ಮನೆಯಲ್ಲಿ ದೀರ್ಘಕಾಲದ ವಿವಾಹದ ಮಾತುಕತೆಗಳು ಯಶಸ್ವಿಯಾಗಿ ನೆರವೇರಲಿದ್ದು, ಮದುವೆಯ ಸಡಗರ ಸಂಭ್ರಮ ಕಂಡುಬರಲಿದೆ. ವೃಷಭ ರಾಶಿಯವರಿಗೂ ವಿವಾಹ ಯೋಗ ಕೂಡಿಬರುವ ಸಾಧ್ಯತೆಗಳಿದ್ದು, ಕುಟುಂಬದಲ್ಲಿ ಹಿತಕರ ವಾತಾವರಣವಿರಲಿದೆ.
ಕರ್ಕಾಟಕ ಮತ್ತು ಸಿಂಹ: ಆರ್ಥಿಕ ಪ್ರಗತಿ ಮತ್ತು ಆಸ್ತಿ ಖರೀದಿ
ಕರ್ಕಾಟಕ ರಾಶಿಯ ಮಹಿಳಾ ಉದ್ಯಮಿಗಳಿಗೆ ಇಂದು ಬಹಳ ಶುಭದಾಯಕವಾಗಿದೆ. ಸಿಂಹ ರಾಶಿಯವರು ಇಂದು ಹೊಸ ಮನೆ ಅಥವಾ ಕೃಷಿ ಭೂಮಿಯನ್ನು ಖರೀದಿಸುವ ಯೋಗ ಹೊಂದಿದ್ದಾರೆ. ಹಳೆಯ ಹೂಡಿಕೆಗಳಿಂದ ಈ ಎರಡೂ ರಾಶಿಯವರಿಗೆ ಧನ ಲಾಭವಾಗಲಿದೆ.
ಮಿತ್ತುನ ಮತ್ತು ಕನ್ಯಾ: ಕಲಾ ಮತ್ತು ವೃತ್ತಿ ಕ್ಷೇತ್ರದಲ್ಲಿ ಮುನ್ನಡೆ
ಮಿಥುನ ರಾಶಿಯ ಕಲಾ ತರಬೇತುಗಾರರು ಮತ್ತು ಸಂಗೀತಗಾರರಿಗೆ ಉನ್ನತ ಸ್ಥಾನಮಾನ ಸಿಗುವ ಸಾಧ್ಯತೆಯಿದೆ. ಕನ್ಯಾ ರಾಶಿಯವರಿಗೆ ಮಕ್ಕಳಿಂದ ಆರ್ಥಿಕ ಸಹಾಯ ಮತ್ತು ಗೌರವ ಸಿಗಲಿದ್ದು, ಹೋಟೆಲ್ ಹಾಗೂ ಬೇಕರಿ ಉದ್ಯಮಿಗಳಿಗೆ ಹೆಚ್ಚಿನ ಲಾಭ ದೊರೆಯಲಿದೆ.
ತುಲಾ ಮತ್ತು ವೃಶ್ಚಿಕ: ವ್ಯವಹಾರದಲ್ಲಿ ತಾಳ್ಮೆ ಅಗತ್ಯ
ತುಲಾ ರಾಶಿಯವರು ಇಂದು ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ; ವಿಶೇಷವಾಗಿ ಷೇರು ಮಾರುಕಟ್ಟೆಯಿಂದ ದೂರವಿರಿ. ವೃಶ್ಚಿಕ ರಾಶಿಯವರಿಗೆ ಉದ್ಯೋಗದಲ್ಲಿ ಮೇಲಾಧಿಕಾರಿಗಳಿಂದ ಒತ್ತಡ ಉಂಟಾಗಬಹುದು, ಆದರೆ ಅಜ್ಞಾತ ಮೂಲಗಳಿಂದ ಹಣದ ಹರಿವು ನಿಮ್ಮ ಸಮಸ್ಯೆಯನ್ನು ನೀಗಿಸಲಿದೆ.
ಧನಸ್ಸು ಮತ್ತು ಮೀನ: ದೈವಬಲ ಮತ್ತು ಕುಟುಂಬ ಸೌಖ್ಯ
ಧನಸ್ಸು ರಾಶಿಯವರಿಗೆ ದೈವಾನುಗ್ರಹದಿಂದ ಸಂತಾನ ಭಾಗ್ಯದ ಸುದ್ಧಿ ಸಿಗಲಿದೆ. ಮೀನ ರಾಶಿಯ ಪತ್ರಿಕಾ ವರದಿಗಾರರಿಗೆ ಮತ್ತು ಕಲಾ ನಿರ್ಮಾಪಕರಿಗೆ ಇಂದು ಅದೃಷ್ಟದ ಬಾಗಿಲು ತೆರೆಯಲಿದೆ. ರಾಜಕೀಯ ವ್ಯಕ್ತಿಗಳಿಗೂ ಸಮಾಜದಲ್ಲಿ ಮನ್ನಣೆ ಸಿಗಲಿದೆ.
ಗಮನಿಸಿ: ಈ ಭವಿಷ್ಯವು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜನ್ಮ ಕುಂಡಲಿ ಮತ್ತು ಹಸ್ತಸಾಮುದ್ರಿಕೆ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಜ್ಯೋತಿಷ್ಯ ಶಾಸ್ತ್ರ ಪರಿಣಿತರಾದ ಸೋಮಶೇಖರ್ ಗುರೂಜಿ (93534 88403) ಅವರನ್ನು ಸಂಪರ್ಕಿಸಬಹುದು.




