LPG Cylinder: ಗ್ಯಾಸ್ ಬೆಲೆ ಇಳಿಕೆ ಸೇರಿದಂತೆ ಈ ತಿಂಗಳು ಹಲವು ಮಹತ್ವದ ಬದಲಾವಣೆಗಳು!

Vijayaprabha

LPG Cylinder: ಕೇಂದ್ರ ಸರ್ಕಾರ ಘೋಷಣೆ ಮಾಡಿದಂತೆ ಗ್ಯಾಸ್ ಬೆಲೆಯಲ್ಲಿ ಇಂದಿನಿಂದ ಇಳಿಕೆಯಾಗಿದೆ. 10 ವರ್ಷದ ಹಳೆಯ ಆಧಾರ್ ಕಾರ್ಡ್ ಗಳನ್ನು ಉಚಿತವಾಗಿ ಅಪ್‍ಡೇಟ್ ಸೇರಿದಂತೆ ಇದಕ್ಕೆಲ್ಲಾ ಈ ತಿಂಗಳೇ ಕೊನೆ ಅವಕಾಶವಾಗಿದೆ.

ದಾಖಲೆ ಸೃಷ್ಟಿಸಿದ ನಯನತಾರ!

LPG Cylinder: ಗ್ಯಾಸ್ ಬೆಲೆ ಇಳಿಕೆ ಸೇರಿದಂತೆ ಈ ತಿಂಗಳು ಹಲವು ಮಹತ್ವದ ಬದಲಾವಣೆಗಳು

LPG Cylinder
  • ಕೇಂದ್ರ ಸರ್ಕಾರ ಗ್ಯಾಸ್ ಬೆಲೆಯಲ್ಲಿ 200 ರೂ. ಇಳಿಕೆ ಮಾಡಿರುವುದು ಇಂದಿನಿಂದ ಜಾರಿಗೆ ಬರಲಿದೆ.
  • ಕಸ್ಟಮ್ಸ್ ಬೂತ್ ಗಳಲ್ಲಿ ಟೋಲ್ ದರ ಹೆಚ್ಚಳವಾಗಲಿದೆ.
  • ಆಧಾರ್‌ ಕಾರ್ಡ್‌ ಉಚಿತ ನವೀಕರಣ ಸೆ. 14ರಂದು ಅಂತ್ಯವಾಗುತ್ತದೆ. ಸೆಪ್ಟಂಬರ್‌ 15ರಿಂದ ಮೈ ಆಧಾರ್‌ ಪೋರ್ಟಲ್‌ನಲ್ಲಿ ಆಧಾರ್‌ ನವೀಕರಣಕ್ಕೆ 50 ರೂಪಾಯಿ ಶುಲ್ಕವಿಧಿಸಲಾಗುತ್ತದೆ.
  • ಪ್ಯಾನ್ ಕಾರ್ಡ್-ಆಧಾರ್ ಲಿಂಕ್ ಮಾಡದಿರುವವರ ಬ್ಯಾಂಕ್ ಖಾತೆಗಳನ್ನು ಸೆ.30ರಂದು ಫ್ರೀಜ್ ಮಾಡಲಾಗುವುದು.
  • ಡಿಮ್ಯಾಟ್‌ & ಮತ್ತು ಟ್ರೇಡಿಂಗ್‌ ಖಾತೆಗಳು ಸೆ. 30ರ ಒಳಗೆ ನಾಮಿನಿಯನ್ನು ಹೊಂದಿರುವುದು ಕಡ್ಡಾಯ ಎಂದು SEBI ಆದೇಶಿಸಿದೆ.
  • 2024-25ರ ಆರ್ಥಿಕ ವರ್ಷದ 2ನೇ ಕಂತಿನ ಮುಂಗಡ ತೆರಿಗೆಯನ್ನು ಸೆ. 15ರ ಒಳಗೆ ಪಾವತಿಸಬೇಕು
  • 2,000 ರೂ. ನೋಟುಗಳನ್ನು ಬದಲಾಯಿಸಿಕೊಳ್ಳಲು ಸೆ.30 ಕೊನೆಯ ದಿನವಾಗಿದೆ.

Gruhalakshmi: ನಿಮಗೆ ₹2000 ಹಣ ಬಂದಿಲ್ವಾ? ಬರದಿದ್ದರೆ ಈಗಲೇ ಈ ಕೆಲಸ ಮಾಡಿ

ಗ್ಯಾಸ್ ಬೆಲೆ ಇಳಿಕೆ-LPG Cylinder price drop

ರಕ್ಷಾ ಬಂಧನಕ್ಕೂ ಮೊದಲು ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಘೋಷಿಸಿದ್ದ 200 ರೂ. ಸಬ್ಸಿಡಿ ಇಂದಿನಿಂದ ಅನ್ವಯವಾಗಲಿದೆ. ಇನ್ನು ಕೇಂದ್ರ ಸರ್ಕಾರದ ಉಜ್ವಲ ಯೋಜನೆಯಡಿ ಗ್ಯಾಸ್ ಸಿಲಿಂಡರ್ ಗ್ರಾಹಕರಿಗೆ ಈ ಮೊದಲಿಗೆ ಸಿಗುತ್ತಿದ್ದ 200 ರೂ. ಸಬ್ಸಿಡಿ ಮತ್ತು ಹೊಸ ಸಬ್ಸಿಡಿ 200 ರೂ. ಸೆರಿ ಒಟ್ಟು 400 ರೂ. ಸಬ್ಸಿಡಿ ಸಿಗಲಿದೆ. ಮಾರ್ಚ್ 2023 ರಲ್ಲಿ, ಉಜ್ವಲ ಯೋಜನೆಯ ಫಲಾನುಭವಿಗಳಿಗೆ 200 ರೂ.ಗಳ ಸಬ್ಸಿಡಿ ಪ್ರಯೋಜನವನ್ನು ವಿಸ್ತರಿಸುವುದಾಗಿ ಸರ್ಕಾರ ಘೋಷಿಸಿತ್ತು.

ಆಧಾರ್ ಕಾರ್ಡ್.. ಸೆ. 14ರ ತನಕ ಗಡುವು!

10 ವರ್ಷದ ಹಳೆಯ ಆಧಾರ್ ಕಾರ್ಡ್ ಗಳನ್ನು ಕಡ್ಡಾಯವಾಗಿ ಅಪ್‍ಡೇಟ್ ಮಾಡಬೇಕು ಎಂದು UIDAI ಹೇಳಿದೆ. ಸೆಪ್ಟೆಂಬರ್ 14ರ ತನಕ ಉಚಿತವಾಗಿ ಅಪ್‍ಡೇಟ್ ಮಾಡಲು ಅವಕಾಶ ನೀಡಿದೆ. ಹಳೆಯ ಆಧಾರ್ ಇದ್ದಲ್ಲಿ ವಿಳಾಸ, ಇಮೇಲ್, ಫೋನ್ ನಂಬರ್ & ಇತರ ಮಾಹಿತಿಗಳನ್ನು ಅಪ್‍ಡೇಟ್ ಮಾಡಲೇಬೇಕು ಎಂದಿದೆ. ಅದರಲ್ಲಿ ಮಕ್ಕಳ ಆಧಾರ್ ಕಾರ್ಡ್ 5 ವರ್ಷಕ್ಕೊಮ್ಮೆ ಕಡ್ಡಾಯವಾಗಿ ಅಪ್‍ಡೇಟ್ ಮಾಡಿಸಬೇಕು. ಈ ಹಿಂದೆ ಆಧಾರ್ ಅಪ್‍ಡೇಟ್ ಮಾಡಿಕೊಳ್ಳಲು ₹50 ಶುಲ್ಕ ಪಾವತಿಸಬೇಕಿತ್ತು. ಉಚಿತ ಅಪ್‍ಡೇಟ್ ಗಾಗಿ ಸಮಯ ಕೊಟ್ಟಿದೆ.

LPG Cylinder: ಗ್ಯಾಸ್ ಬೆಲೆ ಇಳಿಕೆಯ ಹೊರೆ ಅವರ ಮೇಲೆಯೇ.. ಸಬ್ಸಿಡಿ ಸಿಗದೇ ಇರಬಹುದು!

ಪ್ರಮುಖ ಲಿಂಕುಗಳು/ Important links

ವಾಟ್ಸಾಪ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ ಇಲ್ಲಿ ಕ್ಲಿಕ್ ಮಾಡಿ
ಶೇರ್ ಚಾಟ್ ಇಲ್ಲಿ ಕ್ಲಿಕ್ಮಾಡಿ
Share This Article
Follow:
Kannada news - Vijayaprabha is a live Kannada news portal offering Kannada news online, Movie News in Kannada, Sports News in Kannada, Business News in Kannada & all Kannada Newspaper updates, Current Affairs in Karnataka & around the India in Kannada language.
Leave a comment

Leave a Reply

Your email address will not be published. Required fields are marked *

Exit mobile version