ಬೆಂಗಳೂರು : ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಬಹುನಿರೀಕ್ಷಿತ “ಯುವರತ್ನ” ಸಿನಿಮಾದ ಶೂಟಿಂಗ್ ಮುಕ್ತಾಯವಾಗಿದೆ.
ಈ ಬಗ್ಗೆ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಅವರು ಚಿತ್ರೀಕರಣ ಮುಕ್ತಾಯದ ಫೋಟೋಗಳನ್ನು ಅಪ್ಲೋಡ್ ಮಾಡಿ ಟ್ವೀಟ್ ಮಾಡಿದ್ದೂ, ಯುವರತ್ನ ಚಿತ್ರೀಕರಣ ನಿನ್ನೆ ಮುಕ್ತಾಯವಾಯಿತು. ನನ್ನ ಬೆನ್ನುತಟ್ಟಿ ಸಿನಿಮಾವನ್ನು ಯಶಸ್ವಿಯಾಗಿ ಮುಗಿಸಿಕೊಟ್ಟ ಪುನೀತ್ ಸರ್‌ಗೆ, ವಿಜಯ್ ಸರ್‌ಗೆ, ವೆಂಕಟ್ ಸರ್‌ಗೆ, ಶಿವು ಸರ್‌ಗೆ, ನನ್ನ ಡೈರೆಕ್ಷನ್ ಟೀಮ್‌ಗೆ &’ ಹೊಂಬಾಳೆ’ ಕುಟುಂಬಕ್ಕೆ ಹೃದಯ ಪೂರ್ವಕ ಧನ್ಯವಾದಗಳು. ನನ್ನ ತಂಡ ನನ್ನ ಶಕ್ತಿ ಎಂದು ಹೇಳಿದ್ದಾರೆ.
ಯುವರತ್ನ ಸಿನಿಮಾದ ಶೂಟಿಂಗ್ ಮುಕ್ತಾಯವಾಗಿದ್ದು,ಇನ್ನೇನು ಬರಲು ಸಿದ್ಧವಾಗುತ್ತಿದೆ. ಈ ಸಿನಿಮಾವನ್ನು ನಿರ್ದೇಶಕ ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡುತ್ತಿತ್ತು, ಹೊಂಬಾಳೆ ಫಿಲಂ ಬ್ಯಾನರ್ ನಲ್ಲಿ ವಿಜಯ್ ಕಿರಗಂದೂರ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ಯುವರತ್ನ ಸಿನಿಮಾಕ್ಕೆ ತೆಲುಗು ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಎಸ್ ತಮನ್ ಸಂಗೀತ ಸಂಯೋಜನೆ ಮಾಡಲಿದ್ದಾರೆ.
ಈ ಸಿನಿಮಾದಲ್ಲಿ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸೇರಿದಂತೆ ಸಯೇಶಾ ಸೈಗಲ್, ಸೋನು ಗೌಡ, ಡಾಲಿ ಧನಂಜಯ್, ಪ್ರಕಾಶ್ ರಾಜ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇದನ್ನು ಓದಿ: ಖ್ಯಾತ ನಟಿ ಸೌಂದರ್ಯ ‘ಬಯೋಪಿಕ್’ ನಲ್ಲಿ ಪ್ರೇಮಂ, ಫಿದಾ ಖ್ಯಾತಿಯ ಸಾಯಿ ಪಲ್ಲವಿ..?
ಯುವರತ್ನ ಚಿತ್ರೀಕರಣ ನಿನ್ನೆ ಮುಕ್ತಾಯವಾಯಿತು.ನನ್ನ ಬೆನ್ನುತಟ್ಟಿ ಸಿನಿಮಾವನ್ನ ಯಶಸ್ವಿ ಆಗಿ ಮುಗಿಸಿಕೊಟ್ಟ ಪುನೀತ್ ಸರ್ ಗೆ,ವಿಜಯ್ ಸರ್ ಗೆ,ವೆಂಕಟ್ ಸರ್ ಗೆ,ಶಿವು ಸರ್ ಗೆ ನನ್ನ ಡೈರೆಕ್ಷನ್Team ಗೆ ಹಾಗು ಹೊಂಬಾಳೆ ಕುಟುಂಬಕ್ಕೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ನನ್ನ ತಂಡ ನನ್ನ ಶಕ್ತಿ@PuneethRajkumar @hombalefilms @VKiragandur pic.twitter.com/sF1FtJ0hnG
— Santhosh Ananddram (@SanthoshAnand15) October 13, 2020