ಬೆಂಗಳೂರು: ನಟ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಮುದ್ದು ಮಗನಿಗೆ ‘ಜಾನಿ ಜಾನಿ ಎಸ್ ಪಪ್ಪಾ’ ಹೇಳಿಕೊಡುತ್ತಿರುವ ವಿಡಿಯೋ ಸದ್ಯ ವೈರಲ್ ಆಗಿದೆ.
ರಾಕಿಂಗ್ ಸ್ಟಾರ್ ಯಶ್ ಅವರು ಹೈದರಾಬಾದ್ ನಲ್ಲಿ ಕೆಜಿಎಫ್-2 ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈಗಿರುವಾಗ ಯಶ್ ತಮ್ಮ ಮಗನಿಗೆ ಪಾಠ ಹೇಳಿಕೊಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋವನ್ನು ಯಶ್ ಪತ್ನಿ ನಟಿ ರಾಧಿಕಾ ಪಂಡಿತ್ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ನಟ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಮಗ ಯಥರ್ವ್ ನಿಗೆ ‘ಜಾನಿ ಜಾನಿ ಎಸ್ ಪಪ್ಪಾ’ ಹೇಳಿಕೊಡುತ್ತಿದ್ದರೆ ಮಗ ಯಥರ್ವ್ ಅಪ್ಪನ ಜೊತೆ ಹಾಡುತ್ತಾ ಆಕ್ಷನ್ ಕೂಡ ಮಾಡುತ್ತಿದ್ದಾನೆ. ಸದ್ಯ ಈ ಕ್ಯೂಟ್ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
View this post on Instagram
Lockdown diaries : One Johnny and Another (a rather impatient one) 😁 #radhikapandit #nimmaRP