ಬೆಂಗಳೂರು: ಕೆಜಿಎಫ್ (KGF) ಸರಣಿಯ ಮೂಲಕ ಇಡೀ ವಿಶ್ವವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ರಾಕಿಂಗ್ ಸ್ಟಾರ್ ಯಶ್(Yash), ಈಗ ಮತ್ತೊಂದು ದಾಖಲೆ ಬರೆಯಲು ಸಜ್ಜಾಗಿದ್ದು, ಮುಂಬರುವ ಅವರ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾ ಬಿಡುಗಡೆಗೂ ಮುನ್ನವೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಹೌದು, ಗಾಂಧಿನಗರದ ಲೇಟೆಸ್ಟ್ ಮಾಹಿತಿಯ ಪ್ರಕಾರ, ನಟ ಯಶ್ ಸಿನಿಮಾ ಈಗ ಪ್ಯಾನ್ ಇಂಡಿಯಾ ದಾಟಿ ‘ಪ್ಯಾನ್ ವರ್ಲ್ಡ್’ (Pan-World) ಮಟ್ಟಕ್ಕೆ ಬೆಳೆದಿದೆ.
ಇದನ್ನೂ ಓದಿ: ಸಿನಿಮಾದಲ್ಲಿ ‘ಅಣ್ಣ-ತಂಗಿ’, ರಿಯಲ್ ಲೈಫ್‌ನಲ್ಲಿ ‘ಗಂಡ-ಹೆಂಡತಿ’: ಟಾಲಿವುಡ್‌ನ ಈ ಸ್ಟಾರ್ ಜೋಡಿ ಯಾರು ಗೊತ್ತಾ?
ವಿದೇಶದಲ್ಲಿ ಅಬ್ಬರಿಸಲು ರೆಡಿಯಾದ ‘ಟಾಕ್ಸಿಕ್’
ಸಾಮಾನ್ಯವಾಗಿ ಹಾಲಿವುಡ್ ಮತ್ತು ಬಾಲಿವುಡ್‌ನ ದೊಡ್ಡ ಸ್ಟಾರ್ ಸಿನಿಮಾಗಳನ್ನು ವಿತರಣೆ ಮಾಡುವ ಪ್ರಖ್ಯಾತ ಸಂಸ್ಥೆ ‘PHF’, ಇದೀಗ ಯಶ್ ನಟನೆಯ ಟಾಕ್ಸಿಕ್ ಸಿನಿಮಾದ ಓವರ್‌ಸೀಸ್ ಹಕ್ಕುಗಳನ್ನು (Overseas Rights) ಖರೀದಿಸಿದೆ ಎಂದು ವರದಿಯಾಗಿದೆ.
ಭಾರತದ ಎಲ್ಲಾ ಭಾಷೆಯ ಹಕ್ಕುಗಳನ್ನು ವಿದೇಶದಲ್ಲಿ ವಿತರಣೆ ಮಾಡಲು ಈ ಸಂಸ್ಥೆ ದೊಡ್ಡ ಮೊತ್ತಕ್ಕೆ ಡೀಲ್ ಕುದುರಿಸಿದೆ ಎನ್ನಲಾಗಿದ್ದು, ದಕ್ಷಿಣ ಭಾರತದ ಸಿನಿಮಾವೊಂದು ಇಷ್ಟು ದೊಡ್ಡ ಮಟ್ಟದ ವಿತರಣಾ ಸಂಸ್ಥೆಯ ಜೊತೆ ಕೈಜೋಡಿಸಿರುವುದು ಇದೇ ಮೊದಲು ಎನ್ನಬಹುದು.
ಇದನ್ನೂ ಓದಿ: ಲೇಬರ್ ಕಾರ್ಡ್ ಇದ್ರೆ ತಿಂಗಳಿಗೆ ₹3,000 ಫಿಕ್ಸ್! ಸರ್ಕಾರದ ಈ ಯೋಜನೆಗೆ ಇಂದೇ ಅರ್ಜಿ ಹಾಕಿ
₹1000 ಕೋಟಿ ಬ್ಯುಸಿನೆಸ್ ಪಕ್ಕಾ?
‘ಟಾಕ್ಸಿಕ್’ ಚಿತ್ರದ ಕ್ರೇಜ್ ನೋಡುತ್ತಿದ್ದರೆ ಬಾಕ್ಸ್ ಆಫೀಸ್ ಪಂಡಿತರು ದಂಗಾಗಿದ್ದಾರೆ. ಹೌದು, ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೂ ಮುನ್ನವೇ ಆಡಿಯೋ ರೈಟ್ಸ್, ಸ್ಯಾಟಲೈಟ್, ಒಟಿಟಿ (OTT) ಮತ್ತು ವಿತರಣಾ ಹಕ್ಕುಗಳಿಂದ ಬರೋಬ್ಬರಿ ₹1000 ಕೋಟಿ ಬ್ಯುಸಿನೆಸ್ ಮಾಡುವ ಅಂದಾಜಿದೆ. ನಟ ಯಶ್ ಅವರ ಬ್ರ್ಯಾಂಡ್ ವ್ಯಾಲ್ಯೂ ಮತ್ತು ನಿರ್ದೇಶಕಿ ಗೀತು ಮೋಹನ್ ದಾಸ್ ಅವರ ಮೇಕಿಂಗ್ ಮೇಲೆ ಇಡೀ ವಿಶ್ವವೇ ಕಣ್ಣಿಟ್ಟಿದೆ.
ಇದನ್ನೂ ಓದಿ: ದಿನಕ್ಕೆ 100 ರೂ ಉಳಿಸಿದರೆ ಕೈ ಸೇರುತ್ತೆ 2 ಲಕ್ಷ! ಅಂಚೆ ಕಚೇರಿಯ ಈ ಸ್ಕೀಮ್ ಬಗ್ಗೆ ನಿಮಗೆ ಗೊತ್ತಾ?
ಇದು ಬರೀ ಸಿನಿಮಾವಲ್ಲ, ‘ಎ ಫೇರಿ ಟೇಲ್’!
ಇನ್ನು, ‘ಟಾಕ್ಸಿಕ್’ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ (KVN Productions) ಅದ್ಧೂರಿಯಾಗಿ ನಿರ್ಮಿಸುತ್ತಿದ್ದು, ಡ್ರಗ್ ಮಾಫಿಯಾ ಹಿನ್ನೆಲೆಯಲ್ಲಿ ನಡೆಯುವ ಕಥೆ ಇದಾಗಿದ್ದು, ಯಶ್ ಅವರು ಹಿಂದೆಂದೂ ಕಾಣದ ಲುಕ್‌ನಲ್ಲಿ ಮಿಂಚಲಿದ್ದಾರೆ. ಒಟ್ಟಿನಲ್ಲಿ, ರಾಕಿ ಭಾಯ್ ಯಶ್ ಅಬ್ಬರಕ್ಕೆ ಬಾಕ್ಸ್ ಆಫೀಸ್ ಧೂಳೀಪಟ ಆಗುವುದು ಗ್ಯಾರಂಟಿ!




