ಚೆನ್ನೈ : ದಕ್ಷಿಣ ಭಾರತದ ಬಹುಭಾಷಾ ನಟಿ, ಬಿಗ್ ಬಾಸ್ ಸ್ಪರ್ದಿ, ಕಸ್ತೂರಿ ಶಂಕರ್ ಅವರು ದೀಪಾವಳಿಗೆ ವಿರಾಟ್ ಕೊಹ್ಲಿ ನೀಡಿದ್ದ ಸಂದೇಶಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದಾರೆ.
ದೀಪಾವಳಿ ಹಬ್ಬಕ್ಕೆ ಪಟಾಕಿ ಹಚ್ಚಬೇಡಿ ಎಂದು ಹೇಳಿದ್ದ ವಿರಾಟ್ ಕೊಹ್ಲಿ ಅವರಿಗೆ ನಟಿ ಕಸ್ತೂರಿ ಶಂಕರ್ ಖಾರವಾಗಿ ಉತ್ತರಿಸಿದ್ದು, ಪಟಾಕಿ ಬೇಡ ದೀಪ ಸಾಕೇ? ಹಾಗಿದ್ದರೆ ನಿಮಗೆ 9 ಸ್ಪೋರ್ಟ್ಸ್ ಕಾರು ಏಕೆ? ಸುಮ್ಮನೆ ವಾಯುಮಾಲಿನ್ಯ ಒಂದು ಸೈಕಲ್ ತೆಗೆದುಕೊಳ್ಳಿ. ಡೆಸ್ಟಿನೇಶನ್ ವೆಡ್ಡಿಂಗ್ ಏಕಾದಿರಿ ಸುಮ್ಮನೆ ಇಲ್ಲೇ ರಿಜಿಸ್ಟರ್ ಮದುವೆಯಾಗಬಹುದಿತ್ತಲ್ಲಾ? ಎಂದು ಪ್ರಶ್ನಿಸಿದ್ದಾರೆ.
ತಮಿಳು, ತೆಲುಗು, ಕನ್ನಡ ಹಾಗು ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ಬಹುಭಾಷಾ ನಟಿ ಕಸ್ತೂರಿ ಶಂಕರ್ ಅವರು ಕನ್ನಡದ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ‘ಜಾಣ’, ‘ಪ್ರೇಮಕ್ಕೆ ಸೈ’, ‘ಹಬ್ಬ’, ಇಬ್ಬರ ನಡುವೆ ಮುದ್ದಿನ ಆಟ, ತುತ್ತ ಮುತ್ತ ಸೇರುದಂತೆ ಹಲವು ಸಿನಿಮಾಗಳಲ್ಲಿ ಕಸ್ತೂರಿ ಶಂಕರ್ ನಟಿಸಿದ್ದರು. ಇತ್ತೀಚಿಗೆ ತಮಿಳು ಬಿಗ್ ಬಾಸ್ ಶೋನಲ್ಲಿ ಭಾಗವಹಿಸಿದ್ದರು.