ಇಂದಿನಿಂದ ಪ್ರಪಂಚದಾದ್ಯಂತ 9000 ಸ್ಕ್ರೀನ್ ಗಳಲ್ಲಿ ‘ವಿಕ್ರಾಂತ್ ರೋಣ’ ಕ್ರೇಜ್; ಆ ಕನಸು ನನಸಾಯಿತೆಂದ ಕಿಚ್ಚ ಸುದೀಪ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ವಿಕ್ರಾಂತ್ ರೋಣ’ ಕನ್ನಡ ಮಾತ್ರವಲ್ಲ ಭಾರತೀಯ ಸಿನಿಮಾ ರಂಗದಲ್ಲಿ ಅದ್ದೂರಿ ಮೇಕಿಂಗ್ ಹಾಗು ಟ್ರೈಲರ್​ನಿಂದ ಸುದ್ದಿಯಲ್ಲಿದ್ದು, ಇಂದು ಒಟ್ಟಾರೆ ಪ್ರಪಂಚದಾದ್ಯಂತ 9000 ಸ್ಕ್ರೀನ್…

Vikrant Rona vijayaprabha news

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ವಿಕ್ರಾಂತ್ ರೋಣ’ ಕನ್ನಡ ಮಾತ್ರವಲ್ಲ ಭಾರತೀಯ ಸಿನಿಮಾ ರಂಗದಲ್ಲಿ ಅದ್ದೂರಿ ಮೇಕಿಂಗ್ ಹಾಗು ಟ್ರೈಲರ್​ನಿಂದ ಸುದ್ದಿಯಲ್ಲಿದ್ದು, ಇಂದು ಒಟ್ಟಾರೆ ಪ್ರಪಂಚದಾದ್ಯಂತ 9000 ಸ್ಕ್ರೀನ್ ಗಳಲ್ಲಿ ವಿಕ್ರಾಂತ್ ರೋಣ ರಿಲೀಸಾಗಿದ್ದು, ಕರ್ನಾಟಕದಲ್ಲಿಯೇ ಸುಮಾರು 2500 ಸ್ಕ್ರೀನ್ ಗಳಲ್ಲಿ ಪ್ರದರ್ಶನ ಕಾಣಲಿದೆ.

ವಿಕ್ರಾಂತ್ ರೋಣ ಒಂದು ದೊಡ್ಡ ಆಕ್ಷನ್ ಭಾವನಾತ್ಮಕ ಫ್ಯಾಂಟಸಿ ಸಾಹಸ ಚಿತ್ರವಾಗಿದ್ದು, ಕಿಚ್ಚ ಸುದೀಪ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಗ್ಲಾಮರ್ ತಾರೆ ಜಾಕ್ವೆಲಿನ್ ಫರ್ನಾಂಡಿಸ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಅನುಪ್ ಭಂಡಾರಿ ನಿರ್ದೇಶನದ ಮತ್ತು ಮಂಜುನಾಥ್ ಗೌಡ್ ನಿರ್ಮಾಣದಲ್ಲಿ ಸುಮಾರು 95 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಈ ಪ್ಯಾನ್ ಇಂಡಿಯಾ ಚಿತ್ರವು ಇಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.

Vijayaprabha Mobile App free

ಇನ್ನುಳಿದಂತೆ ವಿಕ್ರಾಂತ್ ರೋಣ ಸಿನಿಮಾದಲ್ಲಿ ನಿರೂಪ್ ಬಂಡಾರಿ, ನೀತಾ ಅಶೋಕ್, ರವಿಶಂಕರ ಗೌಡ, ಮಧುಸೂದನ್ ರಾವ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ವಿಕ್ರಾಂತ್ ರೋಣದಿಂದ ಆ ಕನಸು ನನಸಾಯಿತು: ಕಿಚ್ಚ ಸುದೀಪ್

Kiccha sudeepa vijayaprabha

ವಿಕ್ರಾಂತ್ ರೋಣ ಸಿನಿಮಾ ಅದ್ಧೂರಿ ಆ್ಯಕ್ಷನ್ ಇರುವ ಭಾವನಾತ್ಮಕ, ಸಾಹಸ ಮತ್ತು ಫ್ಯಾಂಟಸಿ ಚಿತ್ರವಾಗಲಿದೆ. ಒಳ್ಳೆ ಇಂಟೆನ್ಸಿಟಿ ಇರುವ ಕಥೆಯ ಸಿನಿಮಾ ಮಾಡಬೇಕು ಎನ್ನುವುದು ನನ್ನ ಬಹುದಿನಗಳ ಆಸೆ. ವಿಕ್ರಾಂತ್ ರೋಣದಿಂದ ಆ ಕನಸು ನನಸಾಗಿದೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

ʻವಿಕ್ರಾಂತ್‌ ರೋಣ ವಿಕ್ಟರಿ ರೋಣ ಆಗಲಿದೆʼ: ಉಪೇಂದ್ರ

‘ವಿಕ್ರಾಂತ್ ರೋಣ’ ಮೂರು ವರ್ಷಗಳ ಪರಿಶ್ರಮವಾಗಿದ್ದು, ಸಿನಿಮಾ ನಿಜಕ್ಕೂ ಅದ್ಭುತವಾಗಿ ಮೂಡಿ ಬಂದಿದೆ. ಈ ಸಿನಿಮಾ ಪ್ಯಾನ್‌ ಇಂಡಿಯಾ ಅಲ್ಲ, ಪ್ಯಾನ್‌ ವರ್ಲ್ಡ್‌ ಎಂದು ರಿಯಲ್‌ ಸ್ಟಾರ್‌ ಉಪೇಂದ್ರ ಹೇಳಿದ್ದಾರೆ. ಕನ್ನಡಿಗರು ಯಾವುದಕ್ಕೂ ಕಡಿಮೆ ಇಲ್ಲ ಎಂದು ಯಶ್‌ ಸಾಬೀತುಪಡಿಸಿದರು. ಈಗ ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆಯಲು ಸುದೀಪ್‌ ಹೋಗುತ್ತಿದ್ದಾರೆ. ವಿಕ್ರಾಂತ್‌ ರೋಣ ವಿಕ್ಟರಿ ರೋಣ ಆಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.