ಕನ್ನಡದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಐರಾವತ ಸಿನಿಮಾದ ನಾಯಕಿ, ಬಾಲಿವುಡ್ ನಟಿ ಮತ್ತು ಮಾಡೆಲ್ ಊರ್ವಶಿ ರೌಟೆಲಾ ಈ ಹಿಂದೆ ಕೂಡ ಕೊರೋನಾ ಸಂದರ್ಭದಲ್ಲಿ ಸಹಾಯ ಮಾಡಿದ್ದರು. ಈಗ ಮಕ್ಕಳ ಸೀಳು ತುಟಿ ಚಿಕಿತ್ಸೆಗಾಗಿ ಬರೋಬ್ಬರಿ 67 ಲಕ್ಷ ರೂಪಾಯಿಯನ್ನು ದಾನ ಮಾಡಿದ್ದಾರೆ.
ನಟಿ ಊರ್ವಶಿ ರೌಟೆಲಾ ಟ್ರೈನ್ ಹೆಸರಿನ ಎನ್.ಜಿ.ಓ ಗೆ ರಾಯಭಾರಿ ಆಗಿದ್ದು, ಇದೊಂದು ಸೀಳು ತುಟಿ ಹೊಂದಿರುವ ಮಕ್ಕಳಿಗೆ ಶಸ್ತ್ರ ಚಿಕಿತ್ಸೆ ಮಾಡಿಸುವ ಸಂಸ್ಥೆಯಾಗಿದೆ. ಎರಡು ದಶಕಗಳಿಂದಲೂ ಇದು ಈ ಕೆಲಸವನ್ನು ಮಾಡುತ್ತಿದೆ.
ಹಾಗಾಗಿ ಇದರೊಂದಿಗೆ ಕೈ ಜೋಡಿಸಿರುವ ನಟಿ ಊರ್ವಶಿ ರೌಟೆಲಾ ತನ್ನ ದುಡಿಮೆಯಿಂದ ಬಂದ ಹಣದಲ್ಲಿ 67 ಲಕ್ಷ ದೇಣಿಗೆ ನೀಡಿದ್ದಾರೆ. ನಟಿ ನೀಡಿದ ಈ ಹಣದಿಂದ ಇನ್ನೂರಕ್ಕೂ ಹೆಚ್ಚು ಮಕ್ಕಳಿಗೆ ಶಸ್ತ್ರ ಚಿಕಿತ್ಸೆ ಮಾಡಬಹುದಾಗಿದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.