UI Movie collection : ರಿಯಲ್ ಸ್ಟಾರ್ ಉಪೇಂದ್ರ (Upendra) ನಿರ್ದೇಶಿಸಿ, ನಟಿಸಿರುವ ‘UI’ ಸಿನಿಮಾ (UI Movie) ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸ್ತಿದ್ದು, 2 ದಿನದಲ್ಲಿ 37 ಕೋಟಿ ಬಾಚಿಕೊಂಡಿದೆ.
ಹೌದು, ಡಿಸೆಂಬರ್ 20 ರಂದು ಬಿಡುಗಡೆ ಕಂಡ ‘ಯುಐ’ ಸಿನಿಮಾ ಮೊದಲ ದಿನ 18, 2ನೇ ದಿನ 19 ಕೋಟಿ ಗಳಿಸಿದೆ. ಎರಡನೇ ದಿನದಲ್ಲಿ ಥಿಯೇಟರ್ ಸಂಖ್ಯೆ ಹೆಚ್ಚಾಗಿದ್ದು, ಶೋಗಳ ಸಂಖ್ಯೆ ಹೆಚ್ಚಿಸಲಾಗಿದೆ. ಬಹುತೇಕ ಕಡೆ ಯುಐ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.
ಇದನ್ನೂ ಓದಿ: UI Movie collection | ‘UI’ ದಾಖಲೆ, ಮೊದಲ ದಿನದ ಕಲೆಕ್ಷನ್ ಎಷ್ಟು?
ಕರ್ನಾಟಕದಲ್ಲಿ ಹತ್ತು ಕೋಟಿ, ಆಂಧ್ರ ಮತ್ತು ತೆಲಂಗಾಣದಲ್ಲಿ ನಾಲ್ಕು ಕೋಟಿ ರೂಪಾಯಿ ಹಾಗೂ ಉತ್ತರ ಭಾರತದಿಂದ 1.5 ಕೋಟಿ ರೂಪಾಯಿ ಗಳಿಸಿದ್ದು, ವಿದೇಶಗಳಲ್ಲೂ ಉತ್ತಮ ಪ್ರತಿಕ್ರಿಯೆ ಸಿಕ್ತಿದೆ. ಇಂದು ಯುಐ ಗಳಿಕೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.