ಮುಂಬೈ : ಬಾಲಿವುಡ್ನ ಹ್ಯಾಂಡ್ಸಮ್ ನಟ ಜಾನ್ ಅಬ್ರಹಾಂ ಸಿನಿಮಾ ಪಾತ್ರಕ್ಕೆ ತಕ್ಕಂತೆ ಬದಲಾಗುತ್ತಾರೆ. ಇದೀಗ ಆ ಪ್ರಕ್ರಿಯೆ ಸತ್ಯಮೇವ ಜಯತೇ-2 ಚಿತ್ರದಲ್ಲೂ ಮುಂದುವರಿದಿದೆ. ಸತ್ಯಮೇವ ಜಯತೇ 2 ಚಿತ್ರದ ಮೊದಲ ಪೋಸ್ಟರ್ ಅನ್ನು ನಟ ಜಾನ್ ಅಬ್ರಹಾಂ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಚಿತ್ರ ಬಿಡುಗಡೆ ದಿನಾಂಕವನ್ನೂ ಘೋಷಿಸಿಕೊಂಡಿದ್ದಾರೆ. ಫಸ್ಟ್‌ಲುಕ್‌ನಲ್ಲಿ ಜಾನ್ ಅಬ್ರಹಾಂ ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ರಕ್ತದ ಕಣಕಣದಲ್ಲೂ ಭಾರತ ಎಂಬರ್ಥದ ಪೋಸ್ಟರ್ ವಿನ್ಯಾಸ ಮಾಡಲಾಗಿದೆ.
ಸತ್ಯಮೇವ ಜಯತೇ 2 ಸಿನಿಮಾದಲ್ಲಿ ನಟ ಜಾನ್ ಅಬ್ರಹಾಂ ನಾಯಕನಾಗಿ ನಟಿಸುತ್ತಿದ್ದು, ಮಿಲಾಪ್ ಮಿಲನ್ ಜಾವೇರಿ ಅವರು ನಿರ್ದೇಶನ ಮಾಡುತ್ತಿದ್ದು, ಮೋನಿಶಾ ಅಡ್ವಾಣಿ, ಮಧು ಭೋಜ್ವಾನಿ, ಭೂಷಣ್ ಕುಮಾರ್, ನಿಖಿಲ್ ಅಡ್ವಾಣಿ, ಕ್ರಿಶನ್ ಕುಮಾರ್ ಅವರು ಸೇರಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಸತ್ಯಮೇವ ಜಯತೇ 2 ಸಿನಿಮಾದಲ್ಲಿ ದಿವ್ಯಾ ಖೋಸ್ಲಾ ಕುಮಾರ್, ಮನೋಜ್ ಬಾಜಪೇಯಿ, ನೋರಾ ಫತೇಹಿ, ದಯಾ ಶಂಕರ್ ಪಾಂಡೆ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದು, ಈ ಸಿನಿಮಾ 2021 ರ ಮೇ ತಿಂಗಳಲ್ಲಿ ಪ್ರೇಕ್ಷಕರ ಎದುರು ಬರಲಿದೆ ಎಂದು ಜಾನ್ ಅಬ್ರಹಾಂ ಟ್ವೀಟ್ ಮಾಡಿದ್ದಾರೆ.
Jis desh ki maiyya Ganga hai, wahan khoon bhi Tiranga hai! #SatyamevaJayate2 in cinemas on 12th May, EID 2021. #SMJ2EID2021#DivyaKhoslaKumar #MilapZaveri @monishaadvani @madhubhojwani @nikkhiladvani #BhushanKumar #KrishanKumar @TSeries @EmmayEntertain @dabbooratnani pic.twitter.com/YRCaRV257i
— John Abraham (@TheJohnAbraham) September 21, 2020