ನಟಿ ಸಾಯಿ ಪಲ್ಲವಿ ಭಾರತೀಯ ಸೇನೆ ಬಗ್ಗೆ ಮಾತನಾಡಿ ವಿವಾದಕ್ಕೆ ಗುರಿಯಾಗಿದ್ದಾರೆ. ಸಂದರ್ಶನದಲ್ಲಿ ಮಾತನಾಡಿದ ಅವರು, ‘ಪಾಕಿಸ್ತಾನದ ಜನ ಭಾರತೀಯ ಭದ್ರತಾ ಪಡೆಗಳನ್ನು ಭಯೋತ್ಪಾದಕರು ಎಂದು ಭಾವಿಸುತ್ತಾರೆ. ಅದೇ ರೀತಿ ನಾವು ಕೂಡಾ ಪಾಕಿಸ್ತಾನದ ಬಗ್ಗೆ ಯೋಚಿಸುತ್ತೇವೆ. ಏಕೆಂದರೆ 2 ಕಡೆ ಸಾವು-ನೋವು ಆಗುತ್ತಿದೆ’ ಎಂದಿದ್ದಾರೆ.
ಈ ಹೇಳಿಕೆಗೆ ಕೆಂಡಾಮಂಡಲವಾಗಿರುವ ನೆಟ್ಟಿಗರು, ರಕ್ಷಣಾತ್ಮಕ ತಂಡಕ್ಕೂ, ಆಕ್ರಮಣಕಾರಿ ತಂಡಕ್ಕೂ ವ್ಯತ್ಯಾಸವಿದೆ. ಮೊದಲು ಇತಿಹಾಸ ತಿಳಿದುಕೊಳ್ಳಿ ಎಂದು ಜರಿದಿದ್ದಾರೆ.
ನಟಿ ಸಾಯಿಪಲ್ಲವಿ ವಿರುದ್ಧ ಆಕ್ರೋಶ:
ಇನ್ನು, ಹಿಂದೂಗಳು ಮತ್ತು ಕಾಶ್ಮೀರಿ ಪಂಡಿತರನ್ನು ಅವಮಾನಿಸಿದ್ದಾರೆ ಎಂದು ನೆಟಿಜನ್‌ಗಳು ನಟಿ ಸಾಯಿಪಲ್ಲವಿ ವಿರುದ್ಧ ಆಕ್ರೋಶಗೊಂಡಿದ್ದಾರೆ. ಹೀಗಾಗಿ, ಅವರ ಅಭಿನಯದ ವಿರಾಟಪರ್ವಂ ಸಿನಿಮಾವನ್ನು ಬಹಿಷ್ಕರಿಸಲು #BoycottVirataParvam ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್ ಮಾಡುತ್ತಿದ್ದಾರೆ.
ಹೌದು, ‘ಜೈಶ್ರೀರಾಮ್ ಎಂದು ಕೂಗುತ್ತಾ ದನ ಸಾಗಿಸುತ್ತಿದ್ದ ವ್ಯಕ್ತಿಯನ್ನು ಮುಸ್ಲಿಂ ಎಂಬ ಕಾರಣಕ್ಕೆ ಹೊಡೆದು ಕೊಂದಿದ್ದು ಮತ್ತು ಕಾಶ್ಮೀರ ಪಂಡಿತರ ನರಮೇಧಕ್ಕೂ ಯಾವುದೇ ವ್ಯತ್ಯಾಸ ಇಲ್ಲ’ ಎಂದು ನಟಿ ಸಾಯಿಪಲ್ಲವಿ ಹೇಳಿದ್ದರು.