ಹೈದರಾಬಾದ್: ಟಾಲಿವುಡ್‌ನ ಅಗ್ರ ಶ್ರೇಯಾಂಕಿತ ನಾಯಕಿಯರಲ್ಲಿ ಒಬ್ಬರಾದ ಹಾಟ್ ಬ್ಯೂಟಿ ನಟಿ ಕಾಜಲ್ ಅಗರ್‌ವಾಲ್ ಅವರ ಮದುವೆ ವದಂತಿಗಳು ಬಾರಿ ಚರ್ಚೆಗೆ ಕಾರಣವಾಗಿದೆ. ನಟಿ ಕಾಜಲ್ ಅಗರ್ವಾಲ್ ಅವರು ಮುಂಬೈ ಮೂಲದ ಗೌತಮ್ ಕಿಚ್ಲು ಎಂಬ ದೊಡ್ಡ ಉದ್ಯಮಿಯನ್ನು ವಿವಾಹವಾಗಲಿದ್ದಾರೆ ಎಂಬ ವದಂತಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸ್ವಲ್ಪ ಸಮಯದ ಹಿಂದೆ ಇಬ್ಬರ ನಡುವೆ ಇದ್ದ ಸ್ನೇಹ, ಪ್ರೀತಿಯಾಗಿ ಬದಲಾಗಿದೆ ಎನ್ನಲಾಗಿದೆ.
ಬೀಟೌನ್ ಮೂಲಗಳ ಪ್ರಕಾರ, ನಿಶ್ಚಿತಾರ್ಥವು ಎರಡು ಕುಟುಂಬಗಳ ಹಿರಿಯರ ಒಪ್ಪಿಗೆಯೊಂದಿಗೆ ನಡೆದಿದೆ ಎಂದು ಹರಿದಾಡುತ್ತಿದೆ. ಆದರೆ ಈ ಹಿಂದೆ ಕೂಡ ನಟಿ ಕಾಜಲ್ ಅಗರ್ವಾಲ್ ವಿಷಯದಲ್ಲಿ ವಿವಾಹದ ವದಂತಿಗಳು ಹಲವಾರು ಬಾರಿ ಹಬ್ಬಿದ್ದು ಅದನ್ನು ಅಲ್ಲೆಗೆಳಿದಿದ್ದರು. ಆದರೆ, ಈಗ ಹಬ್ಬಿರುವ ಸುದ್ದಿಗಳ ಬಗ್ಗೆ ನಟಿ ಕಾಜಲ್ ಅಗರ್ವಾಲ್ ಯಾವುದೇ ಪ್ರತಿಕ್ರಿಯೆ ನೀಡದ ಕಾರಣ ಇದು ನಿಜವಿರಬಹುದು ಎಂದು ಅಭಿಮಾನಿಗಳು ಅಭಿಪ್ರಾಯಪಡುತ್ತಿದ್ದಾರೆ.
ನಟಿ ಕಾಜಲ್ ಅಗರ್ವಾಲ್ ಅವರು ಟಾಲಿವುಡ್, ಕಾಲಿವುಡ್ ನಲ್ಲಿ ರಾಮ್ ಚರಣ್, ಚಿರಂಜೀವಿ, ಪವನ್ ಕಲ್ಯಾಣ್, ಎನ್‌ಟಿಆರ್, ಪ್ರಭಾಸ್, ಅಲ್ಲು ಅರ್ಜುನ್, ತಮಿಳಿನ ಇಳಿಯದಳಪತಿ ವಿಜಯ್, ತಲಾ ಅಜಿತ್ ಅವರ ನಟಿಸಿ ಅಗ್ರಶ್ರೇಯಾಂಕಿತ ನಾಯಕಿಯರಲ್ಲಿ ಒಬ್ಬರಾಗಿದ್ದಾರೆ.
ನಟಿ ಕಾಜಲ್ ಅವರ ಕೈಯಲ್ಲಿ ಮೆಗಾಸ್ಟಾರ್ಸ್ ಚಿರಂಜೀವಿ ಅಭಿನಯದ ಆಚಾರ್ಯ ಮತ್ತು ಕಮಲ್ ಹಾಸನ್ ಅಭಿನಯದ ಇಂಡಿಯನ್ 2 ದೊಡ್ಡ ಸಿನಿಮಾಗಳಿವೆ. ಇವುಗಳಲ್ಲದೆ, ಬಾಲಿವುಡ್ ಜಾನ್ ಅಬ್ರಹಾಂ ಅವರೊಂದಿಗೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.