ಬಾಲಿವುಡ್ ಸ್ಟಾರ್ ಹೀರೋ ಸಲ್ಮಾನ್ ಖಾನ್ ಅವರ ಮಾಜಿ ಗೆಳತಿ ಸೋಮಿ ಅಲಿ ಸೆನ್ಸೇಷನಲ್ ಹೇಳಿಕೆ ನೀಡಿದ್ದು, ಇನ್ ಸ್ಟಾಗ್ರಾಮ್ ನಲ್ಲಿ ಸಲ್ಮಾನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಲ್ಮಾನ್ ಖಾನ್ ಮತ್ತು ಭಾಗ್ಯಶ್ರೀ ಅಭಿನಯದ ‘ಮೈನೆ ಪ್ಯಾರ್ ಕಿಯಾ’ ಚಿತ್ರದ ಪೋಸ್ಟರ್ ಹಂಚಿಕೊಂಡಿರುವ ಸೋಮಿ, ಸಲ್ಮಾನ್ ಓರ್ವ ಸ್ಯಾಡಿಸ್ಟ್. ನನ್ನನ್ನು ಅಷ್ಟೇ ಅಲ್ಲ, ಅನೇಕ ಮಹಿಳೆಯರನ್ನು ಥಳಿಸಿದ್ದಾನೆ. ದಯವಿಟ್ಟು ಅವನನ್ನು ಪೂಜಿಸುವುದನ್ನು ನಿಲ್ಲಿಸಿ ಎಂದು ಸಲ್ಮಾನ್ ಖಾನ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಸಲ್ಮಾನ್ ಖಾನ್ ಮಾನಸಿಕ ಅಸ್ವಸ್ಥ. ನಾನು ಅನಾರೋಗ್ಯದಿಂದ ಬಳಲಿದ್ದೇನೆ. ನಿಮಗೆ ಕಲ್ಪನೆಯೂ ಇಲ್ಲ ಎಂದು ಆರೋಪಿಸಿದ್ದು, ಸಲ್ಮಾನ್ ಕುರಿತ ಸೋಮಿ ಅವರ ಹೇಳಿಕೆ ವೈರಲ್ ಆಗಿದೆ. ಸೋಮಿ ಅವರು1991ರಲ್ಲಿ ಕಿಶನ್, ತೀಸ್ರಾ ಕೌನ್ ಚಿತ್ರಗಳಲ್ಲಿ ನಟಿಸಿದ್ದರು.