ಪ್ರೇಗ್ : ನಟಿ ಪ್ರಿಯಾಂಕಾ ಚೋಪ್ರಾ ಅವರ ಪತಿ, ಪಾಪ್ ಸ್ಟಾರ್ ನಿಕ್ ಜೋನಾಸ್ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತು.. ಸದ್ಯ ಇದೇ ವಿಚಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು, ಹೆಚ್ಚು ವೈರಲ್ ಆಗಿದೆ. ಇದರಲ್ಲಿ ನಿಕ್ ತನ್ನ ಅಂಗರಕ್ಷಕರಿಗೆ ಸೊನ್ನೆ ಮಾಡುತ್ತಾ ವೇದಿಕೆಯಿಂದ ಓಡಿಹೋಗುವುದನ್ನು ಕಾಣಬಹುದು…
ಪ್ರಿಯಾಂಕಾ ಪತಿ ನಿಕ್ ಜೋನಾಸ್ ತಮ್ಮ ಡೇಸ್ ವರ್ಲ್ಡ್ ಟೂರ್‌ನ ಭಾಗವಾಗಿ ಮಂಗಳವಾರ ಪ್ರೇಗ್‌ನಲ್ಲಿ ಸಹೋದರರಾದ ಕೆವಿನ್ ಹಾಗೂ ಜೋ ಜೋನಾಸ್ ಜೊತೆಗೂಡಿ ಪ್ರದರ್ಶನ ನೀಡುತ್ತಿದ್ದರು.
ಈ ವೇಳೆ ಅವರ ಹಣೆಗೆ ಲೇಸರ್ ಲೈಟ್ ಬಿತ್ತು.. ಅದು ಯಾರೋ ಗುರಿ ಇಟ್ಟು ಬಿಟ್ಟಂತಿತ್ತು.. ಇದರಿಂದ ಜೀವ ಉಳಿಸಿಕೊಳ್ಳಲು ನಿಕ್ ವೇದಿಕೆಯಿಂದ ಇಳಿದು ಹೋಗಿದ್ದಾಗಿ ಸುದ್ದಿಯಾಗಿದೆ..
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.