ಖ್ಯಾತ ಬಹುಭಾಷಾ ನಟಿ ಶ್ರಿಯಾ ಶರಣ್ ಅವರು ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದು, ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದು, ಕನ್ನಡದಲ್ಲಿ ಕಬ್ಜ ಸಿನಿಮಾದಲ್ಲಿ ನಟಿಸುವ ಮೂಲಕ ಶ್ರಿಯಾ ಕನ್ನಡಿಗರ ಮನಗೆದ್ದಿದ್ದಾರೆ.
ಇದನ್ನು ಓದಿ: ಖ್ಯಾತ ನಟಿ ಪವಿತ್ರಾ ಲೋಕೇಶ್ ಎಷ್ಟು ಮದುವೆಯಾಗಿದ್ದಾರೆ? 1500 ಕೋಟಿ ಆಸ್ತಿ ಕಬಳಿಸಲು ಈ ಮದುವೆಯಾದ್ರಾ ಪವಿತ್ರಾ..!
ಹೌದು, ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ ಸಿನಿಮಾದಲ್ಲಿ ನಟಿ ಶ್ರಿಯಾ ಪಾತ್ರಕ್ಕೂ ಕೂಡ ಹೆಚ್ಚು ಪ್ರಾಮುಖ್ಯತೆ ಇದ್ದು, ನಿಮ್ಮ ಪಾತ್ರ ಕೂಡ ಸಿನಿಮಾದ ಬ್ಯಾಕ್ ಬೋನ್ ಎಂದು ಉಪೇಂದ್ರ ಹೇಳಿದರೆ, ಇಲ್ಲ ಇಲ್ಲ ನಿಮ್ಮ ಪಾತ್ರವೇ ಪ್ರಮುಖ ಅಕರ್ಷಣೆ ಎಂದು ನಟಿ ಶ್ರಿಯಾ ಹೇಳಿದ್ದಾರೆ.
ಇದನ್ನು ಓದಿ: ಕಬ್ಜ ಸಿನಿಮಾ ಮೂಲಕ ಗ್ರ್ಯಾಂಡ್ ಎಂಟ್ರೀ ಕೊಟ್ಟ ಉಪ್ಪಿ, ಸುದೀಪ್, ಶಿವಣ್ಣ; ಸಿನಿಮಾ ನೋಡಿ ಪ್ರೇಕ್ಷಕ ಪ್ರಭುಗಳು ಹೇಳಿದ್ದೇನು?
ನಟಿ ಶ್ರಿಯಾ ಶರಣ್ ಅವರಿಗೆ ‘ಕಬ್ಜ’ ಚಿತ್ರದಲ್ಲಿ ಮಹತ್ವದ ಪಾತ್ರ ಸಿಕ್ಕಿದ್ದು, ರಾಜಮನೆತನದ ಮಗಳಾಗಿ ಶ್ರಿಯಾ ಶರಣ್ ಮಿಂಚಿದ್ದು, ಕಬ್ಜ ಸಿನಿಮಾದಲ್ಲಿ ನಟಿ ಶ್ರಿಯಾ ನಟನೆ ನೋಡಿದ ಅಭಿಮಾನಿಗಳು ಕೂಡ ಫಿದಾ ಆಗಿದ್ದಾರೆ.
ಇದನ್ನು ಓದಿ: ʻವೀಕೆಂಡ್ ವಿಥ್ ರಮೇಶ್ ಸೀಸನ್ 5ʼಗೆ ದಿನಾಂಕ ಫಿಕ್ಸ್; ಈ ಸೀಸನ್ ಮೊದಲ ಅಥಿತಿ ಯಾರು ಗೊತ್ತಾ?
ಶ್ರಿಯಾ ಚಿತ್ರರಂಗಕ್ಕೆ ಕಾಲಿಟ್ಟು 2 ದಶಕಗಳೇ ಕಳೆದಿದ್ದು, ಇಲ್ಲಿಯವರೆಗೂ ಸುಮಾರು 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು, ತನ್ನ ಬ್ಯೂಟಿ ಹಾಗೂ ನಟನೆಯಿಂದ ಅಭಿಮಾನಿಗಳ ಮನ ಕದ್ದಿದ್ದಾರೆ. ಇನ್ನು, ನಟಿ ಶ್ರಿಯಾ ಶರಣ್ ಅವರು ಕನ್ನಡಲ್ಲಿ ಅರಸು, ಚಂದ್ರ, ಕಬ್ಜ ಸಿನಿಮಾಗಳಲ್ಲಿ ನಟಿಸಿದ್ದಾರೆ.
View this post on Instagram
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment