ಬೆಂಗಳೂರು: ಕರುನಾಡಿನ ಬೆಳಕು ನಟ ದಿ।। ಪುನೀತ್ ರಾಜ್ ಕುಮಾರ್ ಅವರ ನಿಧನವನ್ನು ಇಂದಿಗೂ ಯಾರು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೇ ವೇಳೆ ನಟ ಪುನೀತ್ ಸಹೋದರ ನಟ ಶಿವರಾಜ್ ಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ನಟ ಶಿವರಾಜ್ ಕುಮಾರ್ ಅವರು, ‘ಅಪ್ಪು ಹಾಗೂ ನಾನು ಇಬ್ಬರೂ ಒಟ್ಟಾಗಿ ಡಾನ್ಸ್ ಮಾಡಿದ ದಿನವೇ ಅಪ್ಪು ಡಲ್ ಆಗಿದ್ದ’ ಅಂತ ಗೀತಾ ಹೇಳಿದ್ರು. ಏನೋ ಸುಸ್ತು ಆಗಿರ್ಬೇಕು ಅಂತ ಅದ್ಕೊಂಡ್ವಿ. ಯಾರಿಗೂ ಒಂಚೂರು ಇಂಟ್ ಇರಲಿಲ್ಲ. ಹಾಗೇ ಗೊತ್ತಾಗಿದ್ರೆ ಬಿಡ್ತಾ ಇದ್ವಾ? ಅವತ್ತು ವಿಧಿ ಅಪ್ಪುಗೆ ಇನ್ನೊಂದು ಹತ್ತು ನಿಮಿಷ ಟೈಂ ಕೊಡಬೇಕಿತ್ತು ಎಂದು ಹೇಳುತ್ತಾ ಅಪ್ಪು ನೆನೆದು ಶಿವಣ್ಣ ಭಾವುಕರಾಗಿದ್ದಾರೆ.
ಅಕ್ಟೊಬರ್ 27ರಂದು ಶಿವಣ್ಣ ಅಭಿನಯದ ಭಜರಂಗಿ 2 ಸಿನಿಮಾ ಫ್ರೀ ರಿಲೀಸ್ ಕಾರ್ಯಕ್ರಮ ನಡೆದಿತ್ತು. ಅಂದು ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ಯಶ್ ಸೇರಿ ಒಟ್ಟಾಗಿ ವೇದಿಕೆಯಲ್ಲಿ ಡಾನ್ಸ್ ಮಾಡಿದ್ದರು. ಆ ದಿನ ಅಪ್ಪು ಡಲ್ ಆಗಿದ್ದರು ಎಂದು ಗೀತಾ ಶಿವರಾಜ್ ಕುಮಾರ್ ಹೇಳಿದ್ದನ್ನು ಶಿವಣ್ಣ ನೆನಪಿಸಿಕೊಂಡರು.
ಅಪ್ಪು ನಿಧನದ ನೋವಿಂದ ನಾವೆಲ್ಲ ಹೇಗೆ ಸುಧಾರಿಸಿಕೊಳ್ತೀವಿ ಅಂತ ಗೊತ್ತಿಲ್ಲ. ಅಪ್ಪು ಇಲ್ಲದ ನೋವು ಕಾಡ್ತಾನೇ ಇರುತ್ತೆ. ಅಭಿಮಾನಿಗಳು, ಸಿನಿಮಾ ಇಂಡಸ್ಟ್ರಿಗೂ ತುಂಬಾ ನೋವಾಗಿದೆ. ನಮ್ಮನ್ನ ಬಿಟ್ಟು ಅಪ್ಪು ಹೇಗೆ ಹೋದ್ರು? ಅಂತ ಎಲ್ಲರೂ ಕೇಳ್ತಾ ಇದ್ದಾರೆ. ಅಪ್ಪು ಚಿಕ್ಕ ವಯಸ್ಸಿನಲ್ಲಿಯೇ ಸೂಪರ್ ಸ್ಟಾರ್ ಆಗಿದ್ದವನು. ಅಪ್ಪು ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ತುಂಬಾ ಚೆನ್ನಾಗಿ ಬೆಳೆಸಿದ್ದಾರೆ. ಅವರಿಬ್ಬರೂ ತುಂಬಾ ಬುದ್ಧಿವಂತರು. ಎಲ್ಲಾ ಕೊಟ್ಟು ಹೋಗಿದ್ದಾನೆ, ನಾವು ಅವರ ಜತೆಯಲ್ಲೇ ಇರ್ತೇವೆ ಎಂದು ಅಪ್ಪು ನೆನೆದು ಶಿವಣ್ಣ ಕಣ್ಣೀರಿಟ್ಟಿದ್ದಾರೆ.