ನಟ ನಾಗ ಚೈತನ್ಯ ಮತ್ತು ನಟಿ ಸಮಂತಾ ಒಂದು ಕಾಲದಲ್ಲಿ ಟಾಲಿವುಡ್‌ನ ನೆಚ್ಚಿನ ಜೋಡಿ. ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ಇಬ್ಬರೂ ಹಿರಿಯರನ್ನು ಒಪ್ಪಿಸಿ ಮದುವೆಯಾದರು. ಎಲ್ಲರೂ ಒಳ್ಳೆಯ ಜೋಡಿ ಎಂದು ಭಾವಿಸಿದ್ದರು. ಆದರೆ ಇವರಿಬ್ಬರೂ ಎಲ್ಲರನ್ನೂ ಆಶ್ಚರ್ಯಾ ಪಡುವಂತೆ ಮಾಡಿ ಬೇರ್ಪಡುವುದಾಗಿ ಘೋಷಿಸಿದ್ದಾರೆ. ಇಬ್ಬರೂ ಬೇರ್ಪಟ್ಟು ಸುಮಾರು ಒಂದು ವರ್ಷ ಕಳೆದಿದೆ. ಈಗಲೂ ಇಬ್ಬರಿಗೂ ಸಂಬಂಧಿಸಿದ ಕೆಲವು ಸುದ್ದಿಗಳು ಹೊರಬರುತ್ತಲೇ ಇವೆ.
ಆದರೆ ಇವರಿಬ್ಬರು ಜೊತೆಯಾದ ದಿನಗಳನ್ನು ಅಭಿಮಾನಿಗಳು ಮರೆಯಲು ಸಾಧ್ಯವಾಗುತ್ತಿಲ್ಲ. ಅದರಲ್ಲೂ ಸಮಂತಾ ಕುಟುಂಬದವರು ಮರೆಯಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಸಮಂತಾ ತಂದೆ ಜೋಸೆಫ್ ಪ್ರಭು ಇತ್ತೀಚೆಗೆ ನಾಗ ಚೈತನ್ಯ ಜೊತೆಗಿನ ಒಡನಾಟವನ್ನು ಸ್ಮರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. “ಬಹಳ ಹಿಂದೆ ಒಂದು ಕಥೆ ಇತ್ತು. ಆ ಕಥೆ ಇನ್ನು ಮುಂದೆ ಇಲ್ಲದಿರಬಹುದು. ಹೊಸ ಕಥೆ, ಹೊಸ ಅಧ್ಯಾಯ ಶುರು ಮಾಡೋಣ” ಎಂಬ ಸಂದೇಶದ ಜೊತೆಗೆ ಆರತಕ್ಷತೆ ಹಾಗೂ ಮದುವೆ ಸಂದರ್ಭದಲ್ಲಿ ನಾಗ ಚೈತನ್ಯ ಜೊತೆಗಿರುವ ಫೋಟೋಗಳನ್ನು ಕುಟುಂಬ ಸದಸ್ಯರೊಂದಿಗೆ ಹಂಚಿಕೊಂಡಿದ್ದಾರೆ.
ಇನ್ನು, ಸಮಂತಾ ತಂದೆ ಜೋಸೆಫ್ ಪ್ರಭು ಇದ್ದಕ್ಕಿದ್ದಂತೆ ಈ ಪೋಸ್ಟ್ ಮಾಡಿದ್ದು ಯಾಕೆ? ಅವರು ಇಷ್ಟೊಂದು ಭಾವುಕರಾಗಲು ಕಾರಣಗಳೇನು ಎಂಬುದು ತಿಳಿದಿಲ್ಲ. ವಿಚ್ಛೇದನ ಮುಗಿದ ಅಧ್ಯಾಯ ಎಂದು ನಾಗ ಚೈತನ್ಯ ಮತ್ತು ಸಮಂತಾ ಪ್ರತಿಕ್ರಿಯಿಸಿದ್ದಾರೆ. ಅವರು ತಮ್ಮ ತಮ್ಮ ಕೆಲಸದಲ್ಲಿ ನಿರತರಾಗಿದ್ದಾರೆ.