ಸಲ್ಮಾನ್ ಖಾನ್ ಈ ಸಿನಿಮಾದಲ್ಲಿ ಹತ್ತು ನಾಯಕಿಯರು: ದಕ್ಷಿಣದ ನಟಿಯರಿಗೂ ಸಿಗುತ್ತಾ ಅವಕಾಶ..?

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ಇತರರು ಸೇರಿ ನಟಿಸಿ 2005ರಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿದ್ದ ‘ನೋ ಎಂಟ್ರಿ’ ಸಿನಿಮಾದ ಮುಂದುವರಿದ ಭಾಗವನ್ನು ಇದೀಗ ಮತ್ತೆ ತೆರೆ ಮೇಲೆ ತರಲು ಹೊರಟಿದ್ದಾರೆ…

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ಇತರರು ಸೇರಿ ನಟಿಸಿ 2005ರಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿದ್ದ ‘ನೋ ಎಂಟ್ರಿ’ ಸಿನಿಮಾದ ಮುಂದುವರಿದ ಭಾಗವನ್ನು ಇದೀಗ ಮತ್ತೆ ತೆರೆ ಮೇಲೆ ತರಲು ಹೊರಟಿದ್ದಾರೆ ನಿರ್ದೇಶಕರು.

ಹೌದು, 2005ರಲ್ಲಿ ತೆರೆಕಂಡ ಈ ಸಿನಿಮಾದಲ್ಲಿ ನಟ ಸಲ್ಮಾನ್ ಖಾನ್, ಅನಿಲ್ ಕಪೂರ್, ಫರ್ದೀನ್ ಖಾನ್ ನಟಿಸಿದ್ದರು. ಈ ಸಿನಿಮಾದ ಮುಂದುವರೆದ ಭಾಗವಾಗಿ, ಈ ಬಾರಿ ಅಷ್ಟೂ ಪಾತ್ರಗಳು ತ್ರಿಪಾತ್ರಗಳು ಎನ್ನಲಾಗುತ್ತಿದ್ದು, ಪ್ರತಿ ಪಾತ್ರಕ್ಕೂ ಒಬ್ಬೊಬ್ಬ ಹಿರೋಯಿನ್ ಇರಲಿದ್ದಾರೆ ಎನ್ನಲಾಗಿದೆ. ಅಲ್ಲಿಗೆ ಒಂಬತ್ತು ನಾಯಕಿಯರು ಈ ಸಿನಿಮಾದಲ್ಲಿ ನಟಿಸುತ್ತಿದ್ದು, ಮತ್ತೋರ್ವ ನಟಿ ಕೂಡ ವಿಶೇಷ ಪಾತ್ರ ಮಾಡಲಿದ್ದಾರೆ ಎನ್ನಲಾಗುತ್ತಿದೆ.

 

Vijayaprabha Mobile App free

ಇನ್ನು, ಈ ಸಿನಿಮಾದ ನಿರ್ದೇಶಕ ಅನೀಸ್ ಬಾಜ್ಮಿ ಹೇಳುವಂತೆ ಈ ಹಿಂದೆ ನೋ ಎಂಟ್ರಿ ಸಿನಿಮಾದಲ್ಲಿ ನಟಿಸಿದ್ದ, ಅಷ್ಟೂ ಕಲಾವಿದರು ಸಿಕ್ವೆಲ್‌ನಲ್ಲಿ ನಟಿಸಲು ಉತ್ಸುಕರಾಗಿದ್ದು, ಶೀಘ್ರದಲ್ಲೇ ಹಲವು ವಿಚಾರಗಳನ್ನು ಹಂಚಿಕೊಳ್ಳುವುದಾಗಿ, ಆದಷ್ಟು ಬೇಗ ಶೂಟಿಂಗ್ ಶುರು ಮಾಡುವುದಾಗಿಯೂ ಅವರು ಹೇಳಿದ್ದಾರೆ. ಈ ಕುರಿತು, ಈಗಾಗಲೇ ಹಲವರೊಂದಿಗೆ ಮಾತುಕತೆ ಕೂಡ ನಡೆಸಿದ್ದು, ಈ ಹೊಸ ಚಿತ್ರಕ್ಕೆ ‘ನೋ ಎಂಟ್ರಿ ಮೇ ಎಂಟ್ರಿ’ ಎಂದು ಹೆಸರಿಡಲಾಗಿದೆ ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೆ, ಇಶಾ ಡಿಯೋಲ್, ಬಿಪಾಶಾ ಬಸು, ಸೆಲಿನಾ ಜೇಟ್ಲಿ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದು, ಸ್ಯಾಂಡಲ್‌ವುಡ್ ನಾಯಕಿಯೊಬ್ಬರೊಂದಿದೆ ಮಾತುಕತೆ ನಡೆಸಲಾಗುತ್ತಿದ್ದು, ದಕ್ಷಿಣದ ಕೆಲವು ತಾರೆಯರು ಕೂಡ ಈ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂದು ಹೇಳಿದ್ದಾರೆ.

ಆದರೆ, ಅವರು ಯಾರು ಎನ್ನುವುದನ್ನು ಅವರು ಬಹಿರಂಗಪಡಿಸಿಲ್ಲ. ಸದ್ಯ ಸಲ್ಮಾನ್ ಖಾನ್ ಕಭಿ ಈದ್ ಕಭಿ ದೀವಾಲಿ ಚಿತ್ರೀಕರಣದಲ್ಲಿದ್ದು, ಈ ಸಿನಿಮಾದ ಶೂಟಿಂಗ್ ಹೈದರಾಬಾದ್‌ನಲ್ಲಿ ನಡೆಯುತ್ತಿದ್ದು, ದಕ್ಷಿಣದ ತಾರೆಯರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.