ಖ್ಯಾತ ನಟಿ ಸೌಂದರ್ಯ ‘ಬಯೋಪಿಕ್’ ನಲ್ಲಿ ಪ್ರೇಮಂ, ಫಿದಾ ಖ್ಯಾತಿಯ ಸಾಯಿ ಪಲ್ಲವಿ..?

ಹೈದರಾಬಾದ್ : ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಅಗ್ರಶ್ರೇಯಾಂಕಿತ ನಾಯಕಿಯಾರಲ್ಲಿ ಒಬ್ಬರಾಗಿದ್ದ ಖ್ಯಾತ ನಟಿ ಸೌಂದರ್ಯ ಅವರು 1992 ರಿಂದ 2004 ರವರೆಗೆ ಅವರು ಬಿಡುವಿಲ್ಲದ ನಾಯಕಿಯಾಗಿದ್ದರು. ಮತ್ತು ಅವರ ಅಭಿನಯದಿಂದ ಪ್ರೇಕ್ಷಕರ ಹೃದಯದಲ್ಲಿ…

ಹೈದರಾಬಾದ್ : ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿ ಅಗ್ರಶ್ರೇಯಾಂಕಿತ ನಾಯಕಿಯಾರಲ್ಲಿ ಒಬ್ಬರಾಗಿದ್ದ ಖ್ಯಾತ ನಟಿ ಸೌಂದರ್ಯ ಅವರು 1992 ರಿಂದ 2004 ರವರೆಗೆ ಅವರು ಬಿಡುವಿಲ್ಲದ ನಾಯಕಿಯಾಗಿದ್ದರು. ಮತ್ತು ಅವರ ಅಭಿನಯದಿಂದ ಪ್ರೇಕ್ಷಕರ ಹೃದಯದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದರು.

ಸೌಂದರ್ಯ ಅವರು ಕನ್ನಡ ಸೇರಿದಂತೆ ದಕ್ಷಿಣ ಭಾರತದ 5 ಭಾಷೆಗಳಲ್ಲಿ ಅಭಿನಯಿಸಿದ್ದು, ಸೂಪರ್ ಸ್ಟಾರ್ ರಜನೀಕಾಂತ್, ಸಾಹಸಸಿಂಹ ವಿಷ್ಣುವರ್ಧನ್, ರವಿಚಂದ್ರನ್, ಕಮಲ್ ಹಾಸನ್, ಮೋಹನ್ ಲಾಲ್, ಚಿರಂಜೀವಿ ಸೇರಿದಂತೆ ಅನೇಕ ಸ್ಟಾರ್ ನಟರೊಂದಿಗೆ ಸಿನಿಮಾ ಮಾಡಿದ್ದಾರೆ. ಸೌಂದರ್ಯ ಅವರು ಏಪ್ರಿಲ್ 17, 2004 ರಂದು ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದರು.

ಈಗ ನಟಿ ಸೌಂದರ್ಯ ಅವರ ಜೀವನಾಧಾರಿತ (ಬಯೋಪಿಕ್) ಸಿನಿಮಾ: 

Vijayaprabha Mobile App free

ಮಲಯಾಳಂ ಚಿತ್ರರಂಗದ ದೊಡ್ಡ ನಿರ್ಮಾಣ ಸಂಸ್ಥೆಯೊಂದು ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ನಟಿ ಸೌಂದರ್ಯ ಅವರ ಜೀವನಾಧಾರಿತ ಸಿನಿಮಾ ಮಾಡಲು ತಯಾರಿ ನಡೆಸುತ್ತಿದೆ ಎಂದು ವರದಿಯಾಗಿದೆ.

ಸೌಂದರ್ಯದ ಜೀವನಚರಿತ್ರೆಯ ಸ್ಕ್ರಿಪ್ಟ್ ಈಗಾಗಲೇ ಪೂರ್ಣಗೊಂಡಿದೆ ಎಂದು ಹೇಳಲಾಗುತ್ತಿದೆ. ಈ ಪಾತ್ರಕ್ಕಾಗಿ ಪ್ರೇಮಂ, ಫಿದಾ ಸಿನಿಮಾ ಖ್ಯಾತಿಯ ಸಾಯಿ ಪಲ್ಲವಿ ಅವರನ್ನು ಸಂಪರ್ಕಿಸಲಾಗಿದೆ ಎಂದು ಸುದ್ದಿ ಹರಿದಾಡುತ್ತಿದೆ.

ಸಾಯಿ ಪಲ್ಲವಿಗೆ ಮಲಯಾಳಂ, ತೆಲುಗು, ತಮಿಳಿನಲ್ಲಿ ತನ್ನ ಸಹಜ ನಟನೆಯಿಂದ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದು, ಸೌಂದರ್ಯ ಪಾತ್ರಕ್ಕೆ ಇವರು ನ್ಯಾಯ ಒದಗಿಸಬಹುದು ಎನ್ನಲಾಗಿದೆ.

ವಿಶೇಷವಾಗಿ ಅನೇಕ ಪ್ರೇಕ್ಷಕರ ಮನಸ್ಸಿನಲ್ಲಿ ಸುಸ್ಥಿರ ಸ್ಥಾನವನ್ನು ಗಳಿಸಿರುವ ಸೌಂದರ್ಯ ಅವರಂತಹ ಉತ್ತಮ ನಟಿಯ ಪಾತ್ರವನ್ನು ಸಾಯಿ ಪಲ್ಲವಿ ಮಾಡುತ್ತಾರಾ? ಕಾದು ನೋಡಬೇಕಿದೆ.

ಇದನ್ನು ಓದಿ: ರಶೀದ್ ಖಾನ್ ಅವರ ಪತ್ನಿ ಅನುಷ್ಕಾ ಶರ್ಮಾ..? ಏನಿದರ ಒಳಮರ್ಮ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.