ಬೆಂಗಳೂರು : ಶೀಘ್ರದಲ್ಲೇ ಕನ್ನಡದ ಬಹು ನಿರೀಕ್ಷಿತ ‘ಕೆಜಿಎಫ್ -2’ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವುದಾಗಿ ಬಾಲಿವುಡ್ ನಟ ಸಂಜಯ್ ದತ್ ಅವರು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ಇದಕ್ಕೆ ರಾಕ್ ಸ್ಟಾರ್ ಯಶ್ ಪ್ರತಿಕ್ರಿಯಿಸಿದ್ದಾರೆ.
ಇತ್ತೀಚೆಗೆ ಕ್ಯಾನ್ಸರ್ ಇರುವುದು ಪತ್ತೆಯಾದ ನಂತರ ಸಂಜಯ್ ದತ್ ಅವರು ದುಬೈನಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಚಿಕಿತ್ಸೆಯ ನಂತರ ಅವರು ದುಬೈ ನಿಂದ ಮುಂಬೈಗೆ ಬಂದಿರುವ ತಮ್ಮ ಫೋಟೋಗಳನ್ನು ಹಂಚಿಕೊಂಡಿದ್ದು, ನವೆಂಬರ್‌ನಲ್ಲಿ ನಡೆಯಲಿರುವ ‘ಕೆಜಿಎಫ್ -2’ ಶೂಟಿಂಗ್‌ನಲ್ಲಿ ಭಾಗವಹಿಸಲು ಹೋಗುವುದಾಗಿ ಹೇಳಿದ್ದರು.
ನಟ ಸಂಜಯ್ ದತ್ ಈ ಪೋಸ್ಟ್ ಗೆ ರಾಕಿಂಗ್ ಸ್ಟಾರ್ ಯಶ್ ಪ್ರತಿಕ್ರಿಯಿಸಿದ್ದು ಅವರನ್ನು ಸೆಟ್‌ಗೆ ಸ್ವಾಗತಿಸಿ, ಅವರು ನಿಜವಾದ ಯೋಧ ಎಂದು ಹೇಳಿದ್ದಾರೆ. ನಿಜವಾದ ಯೋಧನ ಸಂಕಲ್ಪ ಮತ್ತು ಆತ್ಮವಿಶ್ವಾಸವನ್ನು ಯಾರು ತಡೆಯಲು ಸಾಧ್ಯವಿಲ್ಲ. ನೀವು ಮತ್ತೆ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುತ್ತಿರುವುದು ತುಂಬಾ ಸಂತೋಷವಾಗಿದೆ. “ನಾನು ಕಾಯಲು ಸಾಧ್ಯವಿಲ್ಲ,” ಎಂದು ಯಶ್ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.
ಯಶ್ ಹೀರೋ ಆಗಿ ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜೆಎಫ್ 2’ ಚಿತ್ರದಲ್ಲಿ ಸಂಜಯ್ ದತ್ ಮುಖ್ಯ ಖಳನಾಯಕ ಅಧೀರನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಖ್ಯಾತ ನಟಿ ರವೀನಾ ಟಂಡನ್ ಅವರು ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ ನಾಡಿಸಲಿದ್ದಾರೆ. ಕೆಜೆಎಫ್ 2 ಸಿನಿಮಾ ಮುಂದಿನ ವರ್ಷ ಸಂಕ್ರಾಂತಿಗೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನು ಓದಿ: ಸರ್ಜಾ ಕುಟುಂಬದಿಂದ ಸರ್ಪ್ರೈಜ್; ‘ಹಾರ್ಟ್ಲಿ ವೆಲ್ಕಮ್ ಡಿಯರ್ ಚಿರು’…!