ಕುರುಬನ ರಾಣಿ ಸಿನಿಮಾದ ಮೂಲಕ ಕನ್ನಡಿಗರ ಮನೆಮಾತಾಗಿದ್ದ ಖ್ಯಾತ ನಟಿ ನಗ್ಮಾ ವಂಚನೆಗೊಳಗಾಗಿ 1 ಲಕ್ಷ ರೂಪಾಯಿ ಹಣ ಕಳೆದುಕೊಂಡಿರುವ ಘಟನೆ ನಡೆದಿದೆ .
ಹೌದು, ನಟಿ ನಗ್ಮಾ ಫೋನ್‌ಗೆ ಥೇಟ್ ಬ್ಯಾಂಕ್ ಥರಹದ ಮೆಸೇಜ್ ಬಂದಿದ್ದು, ಅದರಲ್ಲಿನ ಲಿಂಕ್ ಅನ್ನು ನಗ್ಮಾ ಕ್ಲಿಕ್ ಮಾಡಿದ್ದಾರೆ. ಕೂಡಲೇ ಆಕೆಯ ಫೋನ್‌ಗೆ ಕರೆಯೊಂದು ಬಂದಿದೆ. ಬ್ಯಾಂಕ್ ಉದ್ಯೋಗಿ ಎಂದು ಪರಿಚಯಿಸಿಕೊಂಡ ವಂಚಕ, KYC ಕಂಪ್ಲಿಟ್ ಮಾಡುವಂತೆ ಹೇಳಿ, ಓಟಿಪಿ ಪಡೆದುಕೊಂಡು 1 ಲಕ್ಷ ರೂಪಾಯಿ ಎಗರಿಸಿದ್ದಾರೆ.
ಇನ್ನು, ಕೇವಲ ಒಂದು ಲಕ್ಷ ಕಳೆದುಕೊಂಡಿದ್ದಕ್ಕೆ ಬೇಸರದಲ್ಲೂ ನಟಿ ನಗ್ಮಾ ಖುಷಿ ಪಟ್ಟಿದ್ದಾರೆಂದು ವರದಿಯಾಗಿದೆ. ಬಹುಭಾಷಾ ನಟಿಯಾಗಿರುವ ನಟಿ ನಗ್ಮಾ ತಮಿಳು, ತೆಲುಗು, ಹಿಂದಿ, ಬೋಜ್ ಪುರಿ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದು, ಕನ್ನಡದಲ್ಲಿ ಕುರುಬನ ರಾಣಿ, ಹೃದಯವಂತ, ರವಿಮಾಮ ಸಿನಿಮಾಗಳಲ್ಲಿ ನಟಿಸಿದ್ದಾರೆ.