ವಿಚ್ಛೇದನ ಪ್ರಕರಣ ನ್ಯಾಯಾಲಯದಲ್ಲಿರುವಾಗಲೇ ಇನ್ನೊಬ್ಬ ಮಹಿಳೆಯ ಜೊತೆ ಖ್ಯಾತ ನಟ!? ಸಂಚಲನ ಸೃಷ್ಟಿಸಿದ ಫೋಟೋ ವೈರಲ್!

Ravi Mohan and Kenisha : ತಮಿಳು ಚಿತ್ರರಂಗದ ಪ್ರಮುಖ ನಟರಲ್ಲಿ ಜಯಂ ಸಿನಿಮಾ ಖ್ಯಾತಿಯ ರವಿ ಮೋಹನ್ (Ravi Mohan) ಒಬ್ಬರು. ಪ್ರಸ್ತುತ ಅವರು ‘ಪರಾಶಕ್ತಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಸುಧಾ…

Ravi Mohan and Kenisha wedding news

Ravi Mohan and Kenisha : ತಮಿಳು ಚಿತ್ರರಂಗದ ಪ್ರಮುಖ ನಟರಲ್ಲಿ ಜಯಂ ಸಿನಿಮಾ ಖ್ಯಾತಿಯ ರವಿ ಮೋಹನ್ (Ravi Mohan) ಒಬ್ಬರು. ಪ್ರಸ್ತುತ ಅವರು ‘ಪರಾಶಕ್ತಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಸುಧಾ ಕೊಂಗರ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ರವಿ ಮೋಹನ್, ಶಿವಕಾರ್ತಿಕೇಯನ್ ಜೊತೆಗೆ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ, ಅವರು ‘ಕೈವಂ ಕರಾಟೆ ಬಾಬು’ ಎಂಬ ಚಿತ್ರದಲ್ಲೂ ನಟಿಸಲಿದ್ದಾರೆ. ಈ ಚಿತ್ರವನ್ನು ಗಣೇಶ್ ಕೆ ಬಾಬು ನಿರ್ದೇಶಿಸಿದ್ದಾರೆ. ಈ ಚಿತ್ರದ ಚಿತ್ರೀಕರಣವು ಸದ್ಯ ಭರದಿಂದ ಸಾಗುತ್ತಿದೆ.

ರವಿ ಮೋಹನ್(ಜಯಂ ರವಿ) 2009ರಲ್ಲಿ ಆರತಿ ಅವರನ್ನು ಮದುವೆಯಾದರು. ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಸುಮಾರು 15 ವರ್ಷಗಳ ಕಾಲ ಒಟ್ಟಿಗೆ ಜೀವಿಸಿದ ಈ ಜೋಡಿ, ಕಳೆದ ವರ್ಷ ವಿಚ್ಛೇದನ ಘೋಷಿಸಿತು. ಭಿನ್ನಾಭಿಪ್ರಾಯಗಳಿಂದಾಗಿ ಇಬ್ಬರೂ ಬೇರೆಯಾಗಲು ನಿರ್ಧರಿಸಿದ್ದಾರೆ. ಆದರೆ, ಅವರ ವಿಚ್ಛೇದನ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.

Ravi Mohan and Arthi

Vijayaprabha Mobile App free

ಇಸಾರಿ ಗಣೇಶ್ ತಮಿಳು ಚಿತ್ರರಂಗದ ಜನಪ್ರಿಯ ನಿರ್ಮಾಪಕರಾಗಿದ್ದಾರೆ. ಅವರ ಏಕೈಕ ಮಗಳು ಪ್ರೀತಾ ಅವರ ವಿವಾಹ ಚೆನ್ನೈನಲ್ಲಿ ನಡೆಡಿದ್ದು, ಈ ಮದುವೆಗೆ ತಮಿಳು ಚಿತ್ರರಂಗದ ಹಲವು ಗಣ್ಯರು ಆಗಮಿಸಿದ್ದರು. ಇಸಾರಿ ಗಣೇಶ್ ತಮ್ಮ ಏಕೈಕ ಮಗಳ ಮದುವೆಯನ್ನು ಅದ್ಧೂರಿಯಾಗಿ ಆಯೋಜಿಸಿದ್ದು, ಮದುವೆಯಲ್ಲಿ ಹಾಜರಿದ್ದ ಸೆಲೆಬ್ರಿಟಿಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿ, ಭಾರೀ ವೈರಲ್ ಆಗುತ್ತಿವೆ.

Ravi Mohan and Kenisha wedding

ಈ ಮದುವೆಯಲ್ಲಿ ರವಿ ಮೋಹನ್ ಕೂಡ ಭಾಗವಹಿಸಿದ್ದು, ಅವರ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿವೆ. ರವಿ ಮೋಹನ್ ಒಬ್ಬ ಮಹಿಳೆಯೊಂದಿಗೆ ಮದುವೆಗೆ ಆಗಮಿಸಿದ್ದು, ಇಬ್ಬರೂ ಒಂದೇ ಬಣ್ಣದ ಬಟ್ಟೆ ಧರಿಸಿ ಒಟ್ಟಿಗೆ ಕುಳಿತಿರುವ ಫೋಟೋಗಳು ಸಹ ವೈರಲ್ ಆಗುತ್ತಿವೆ. ಈ ಮಹಿಳೆ ಯಾರು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಆ ಮಹಿಳೆ ಬೇರೆ ಯಾರೂ ಅಲ್ಲ, ಗಾಯಕಿ ಕೆನಿಶಾ. ರವಿ ಮೋಹನ್ ಮತ್ತು ಆರತಿಯ ವಿಚ್ಛೇದನಕ್ಕೆ ಕೆನಿಶಾ ಕಾರಣ ಎಂಬ ಮಾತು ಈ ಹಿಂದೆ ಕೇಳಿಬಂದಿತ್ತು. ಆದರೆ, ನಂತರ ಅವರು ಕೇವಲ ಸ್ನೇಹಿತರು ಎಂದು ಸ್ಪಷ್ಟಪಡಿಸಿದ್ದರು.

Ravi Mohan-arthi- singer-Kenisha-photos

ಆದರೆ, ರವಿ ಮೋಹನ್ ಮತ್ತು ಕೆನಿಶಾ ಒಟ್ಟಿಗೆ ಕುಳಿತಿರುವ ಫೋಟೋಗಳನ್ನು ನೋಡಿದ ನೆಟ್ಟಿಗರು, ರವಿ ಮೋಹನ್ ಎರಡನೇ ಮದುವೆಯಾಗಿದ್ದಾರಾ ಎಂದು ಪ್ರಶ್ನಿಸುತ್ತಿದ್ದಾರೆ. ಕೆಲವರು ಹೇಳುವ ಪ್ರಕಾರ, ಇವರಿಬ್ಬರು ತಮ್ಮ ಸಂಬಂಧವನ್ನು ಜೋಡಿಯಾಗಿ ಘೋಷಿಸಿದ್ದಾರೆ ಎನ್ನಲಾಗಿದೆ. ಆದರೆ, ರವಿ ಮೋಹನ್ ಆರತಿಗೆ ಅಧಿಕೃತವಾಗಿ ವಿಚ್ಛೇದನ ನೀಡದಿರುವುದರಿಂದ, ಅವರು ಕೆನಿಶಾ ಜೊತೆಗೆ ಲಿವ್-ಇನ್ ಸಂಬಂಧದಲ್ಲಿದ್ದಾರೆ ಎಂಬ ಊಹಾಪೋಹವನ್ನು ನೆಟ್ಟಿಗರು ವ್ಯಕ್ತಪಡಿಸುತ್ತಿದ್ದಾರೆ.

 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.