ನಾಳೆ ವಿಶ್ವದಾದ್ಯಂತ ತೆರೆ ಮೇಲೆ ‘Pushpa-2: The Rule’ ಬಿಡುಗಡೆ

ಹೈದರಾಬಾದ್: ನಾಳೆ ವಿಶ್ವದಾದ್ಯಂತ ‘ಪುಷ್ಪ-2’ ಚಿತ್ರ ರಿಲೀಸ್‌ ಆಗುತ್ತಿದ್ದು, ಅಲ್ಲು ಅರ್ಜುನ್ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ‘ಪುಷ್ಪ: ದಿ ರೈಸ್‌’ ಚಿತ್ರದ ಬ್ಲಾಕ್‌ಬಸ್ಟರ್ ಯಶಸ್ಸಿನ ಮೂರು ವರ್ಷಗಳ ನಂತರ, ನಿರ್ದೇಶಕ ಸುಕುಮಾರ್ ಅದರ…

ಹೈದರಾಬಾದ್: ನಾಳೆ ವಿಶ್ವದಾದ್ಯಂತ ‘ಪುಷ್ಪ-2’ ಚಿತ್ರ ರಿಲೀಸ್‌ ಆಗುತ್ತಿದ್ದು, ಅಲ್ಲು ಅರ್ಜುನ್ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ.

‘ಪುಷ್ಪ: ದಿ ರೈಸ್‌’ ಚಿತ್ರದ ಬ್ಲಾಕ್‌ಬಸ್ಟರ್ ಯಶಸ್ಸಿನ ಮೂರು ವರ್ಷಗಳ ನಂತರ, ನಿರ್ದೇಶಕ ಸುಕುಮಾರ್ ಅದರ ಬಹು ನಿರೀಕ್ಷಿತ ಮುಂದುವರಿದ ಭಾಗವಾದ ಪುಷ್ಪ 2: ದಿ ರೂಲ್ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ.

ಈ ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಫಹಾದ್ ಫಾಸಿಲ್ ಕ್ರಮವಾಗಿ ಪುಷ್ಪಾ ರಾಜ್, ಶ್ರೀವಲ್ಲಿ ಮತ್ತು ಎಸ್ಪಿ ಭನ್ವ‌ರ್ ಸಿಂಗ್ ಶೇಖಾವತ್ ಐಪಿಎಸ್ ಪಾತ್ರಗಳನ್ನು ಮಾಡುತ್ತಿದ್ದಾರೆ. ಅಭಿಮಾನಿಗಳು ಮತ್ತು ಸಿನಿಪ್ರಿಯರಲ್ಲಿ ಸಿನಿಮಾ ಬಿಡುಗಡೆಯಾಗಿ ಕಾಯುತ್ತಿದ್ದಾರೆ.

Vijayaprabha Mobile App free

ಈ ಚಿತ್ರವು ಡಿಸೆಂಬರ್ 5, 2024 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಮತ್ತು 3 ಡಿ, ಐಮ್ಯಾಕ್ಸ್, 4 ಡಿಎಕ್ಸ್, ಡಿ-ಬಾಕ್ಸ್ ಮತ್ತು ಪಿವಿಆ‌ರ್ ಐಸಿಇ ಸೇರಿದಂತೆ ವಿವಿಧ ಸ್ವರೂಪಗಳಲ್ಲಿ ಲಭ್ಯವಿರುತ್ತದೆ.

ಪುಷ್ಪಾ 2 ಭಾರತೀಯ ಚಿತ್ರರಂಗದ ಅತ್ಯಂತ ದುಬಾರಿ ಚಿತ್ರಗಳಲ್ಲಿ ಒಂದಾಗಿದೆ, 200.38 ನಿಮಿಷಗಳ ರನ್ ಟೈಮ್ ಮತ್ತು ಯುಎ 16+ ಪ್ರಮಾಣಪತ್ರವನ್ನು ಹೊಂದಿದೆ. ದೆಹಲಿಯಲ್ಲಿ 1,800 ರೂ., ಮುಂಬೈನಲ್ಲಿ 1,600 ರೂ., ಬೆಂಗಳೂರಿನಲ್ಲಿ 1,000 ರೂ. ಇದೆ. ಆಂಧ್ರಪ್ರದೇಶ ಸರ್ಕಾರವು ಚಿತ್ರದ ಟಿಕೆಟ್ ದರವನ್ನು ಹೆಚ್ಚಿಸಲು ಅನುಮೋದನೆ ನೀಡಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.