Pushpa-2 movie collection : ತೆಲುಗಿನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ಪುಷ್ಪ 2’ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದು, ಇದೀಗ 1000 ಕೋಟಿ ರೂ. ಕಲೆಕ್ಷನ್‌ನತ್ತ ಮುನ್ನುಗ್ಗತ್ತಿದೆ.
ಹೌದು, ‘ಪುಷ್ಪ 2’ ಚಿತ್ರ ವಿಶ್ವಾದ್ಯಂತ 922 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ನಿರ್ಮಾಣ ಸಂಸ್ಥೆ ತಿಳಿಸಿದೆ. ಅಲ್ಲು ಅರ್ಜುನ್ ನಟನೆ ಮತ್ತು ಆ್ಯಕ್ಷನ್ ಸೀಕ್ವೆನ್ಸ್ ಫ್ಯಾನ್ಸ್‌ಗೆ ಇಷ್ಟವಾಗಿದೆ. ಶ್ರೀವಲ್ಲಿಯಾಗಿ ರಶ್ಮಿಕಾ ನಟನೆಯನ್ನು ಅಭಿಮಾನಿಗಳು ಕೊಂಡಾಡಿದ್ದಾರೆ. ಇನ್ನು, ನಟಿ ಶ್ರೀಲೀಲಾ ಕಿಸ್ಸಿಕ್ ಸಾಂಗ್, ಪುಷ್ಪರಾಜ್ ಜೊತೆಗಿನ ತಾರಕ್ ಪೊನ್ನಪ್ಪ ಸಂಘರ್ಷ, ಫಹಾದ್ ಫಾಸಿಲ್ ನಟನೆ ಇವೆಲ್ಲವೂ ಸಿನಿಮಾದಲ್ಲಿ ಹೈಲೆಟ್ ಆಗಿದೆ.
ಇದನ್ನೂ ಓದಿ: Pushpa-2 | ಇತಿಹಾಸ ನಿರ್ಮಿಸಿದ ಪುಷ್ಪ-2 ಚಿತ್ರ; ‘ಪುಷ್ಪ 2’ ಚಿತ್ರದ ಗಳಿಕೆ ಅಬ್ಬರಕ್ಕೆ ಎಲ್ಲಾ ದಾಖಲೆಗಳೂ ಉಡೀಸ್
Pushpa-2 movie collection : ತೆಲುಗಿಗಿಂತ ಹಿಂದಿಯಲ್ಲಿ 3 ಪಟ್ಟು ಹೆಚ್ಚು ಕಲೆಕ್ಷನ್
‘ಪುಷ್ಪ 2’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸುತ್ತಿದ್ದು, ‘ಪುಷ್ಪ 2’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಮೊದಲ ದಿನದಿಂದಲೂ ಅಬ್ಬರದ ಗಳಿಕೆ ಮಾಡುತ್ತಾ ಬಂದಿದೆ. ಸೋಮವಾರ (ಡಿಸೆಂಬರ್ 9) ಈ ಸಿನಿಮಾ ತೆಲುಗು ವರ್ಷನ್ನಿಂದ 14 ಕೋಟಿ ರೂಪಾಯಿ ಗಳಿಕೆ ಆಗಿದ್ದು, ಕನ್ನಡ ಹಾಗೂ ಮಲಯಾಳಂ ಸೇರಿ 1 ಕೋಟಿ ರೂಪಾಯಿ ಆಗಿದೆ. ತಮಿಳು ವರ್ಷನ್ 3 ಕೋಟಿ ರೂಪಾಯಿ ಗಳಿಸಿದೆ. ಹಿಂದಿ ವರ್ಷನ್ನಿಂದ ಒಂದೇ ದಿನ 46 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಗಳಿಕೆ ಅನೇಕರಿಗೆ ಅಚ್ಚರಿ ತಂದಿದೆ.