ಡೇಟಿಂಗ್ ಅಪ್ಲಿಕೇಶನ್ ನಲ್ಲಿ ಖ್ಯಾತ ನಟಿ, ಸಂಸದೆ ಫೋಟೋ; ಕಿಡಿಕಾರಿದ ಖ್ಯಾತ ನಟಿ..!

Nusrat Jahan vijayaprabha Nusrat Jahan vijayaprabha

ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಸಂಸದೆ, ನಟಿ, ನುಸ್ರತ್ ಜಹಾನ್ ಅವರ ಫೋಟೋವನ್ನು ಡೇಟಿಂಗ್ ಆ್ಯಪ್‌ನಲ್ಲಿ ನೋಡಿದ ಭಾಸ್ವತಿ ಎಂಬ ನೆಟ್ಟಿಜನ್ ಅದನ್ನು , ಸ್ಕ್ರೀನ್‌ಶಾಟ್ ತೆಗೆದುಕೊಂಡು ಟ್ವೀಟ್ ಮಾಡಿದ್ದಾರೆ. ಸಂಸದೆ ನುಸ್ರತ್ ಅವರ ಫೋಟೋ ಚಾಟಿಂಗ್ಗಾಗಿ ಫೋಟೋವನ್ನು ಹೇಗೆ ಬಳಸುತ್ತಿದ್ದಾರೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಈ ವಿಷಯವು ನಟಿ, ಸಂಸದೆ ನುಸ್ರತ್ ಜಹಾನ್ ಅವರ ಗಮನಕ್ಕೆ ಬಂದಿದ್ದು, ಅವರು ಬಲವಾಗಿ ಪ್ರತಿಕ್ರಿಯಿಸಿದ್ದಾರೆ. “ನನ್ನ ಅನುಮತಿಯಿಲ್ಲದೆ ವೀಡಿಯೊ ಚಾಟಿಂಗ್ ಮತ್ತು ಆನ್‌ಲೈನ್ ಡೇಟಿಂಗ್ ಅಪ್ಲಿಕೇಶನ್‌ನಲ್ಲಿ ನನ್ನ ಫೋಟೋ ಹಾಕಲಾಗಿದ್ದು, ಅಪ್ಲಿಕೇಶನ್‌ನಲ್ಲಿ ಜಾಹೀರಾತುಗಾಗಿ ಬಳಸುವ ನನ್ನ ಫೋಟೋ ಸ್ಕ್ರೀನ್ ಶಾಟ್ ಅನ್ನು ತೆಗೆದು ಹಂಚುತ್ತಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ”ಎಂದು ನುಸ್ರತ್ ಟ್ವೀಟ್ ಮಾಡಿದ್ದು, ಕೋಲ್ಕತಾ ಪೊಲೀಸ್ ಆಯುಕ್ತ ಅನುಜ್ ಶರ್ಮಾ ಅವರಿಗೆ ಟ್ವೀಟ್ ಟ್ಯಾಗ್ ಮಾಡಿದಾಗ ಪೊಲೀಸರು ತಕ್ಷಣ ಪ್ರತಿಕ್ರಿಯಿಸಿದ್ದು, ಡೇಟಿಂಗ್ ಅಪ್ಲಿಕೇಶನ್‌ನ ಕುರಿತು ಶೀಘ್ರದಲ್ಲೇ ವಿಚಾರಣೆಯನ್ನು ಪ್ರಾರಂಭಿಸಲಾಗುವುದು ಎಂದರು.

ನುಸ್ರತ್ ಜಹಾನ್ ಮಾಡೆಲ್ ಆಗಿ ವೃತ್ತಿಜೀವನವನ್ನು ಪ್ರಾರಂಭಿಸಿ ನಂತರ ಬಂಗಾಳಿ ಚಿತ್ರಗಳಲ್ಲಿ ದೊಡ್ಡ ನಟಿಯಾಗಿ ಬೆಳೆದರು. ಮಮತಾ ಬ್ಯಾನರ್ಜಿ ಅವರ ಕರೆಗೆ ಓಗೊಟ್ಟು ನುಸ್ರತ್ ಜಹಾನ್ ರಾಜಕೀಯ ಪ್ರವೇಶಿಸಿ 2019 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ, ಬಸಿರ್ಹತ್ ಕ್ಷೇತ್ರದಿಂದ ಸಂಸದರಾಗಿ ಗೆದ್ದರು. ಅವರು ಪ್ರಸಿದ್ಧ ಉದ್ಯಮಿ ನಿಖಿಲ್ ಜೈನ್ ಅವರನ್ನು ಪ್ರೀತಿಸಿ ಟರ್ಕಿಯಲ್ಲಿ ವಿವಾಹವಾದರು.

Advertisement

ಈ ಕುರಿತು ಡೇಟಿಂಗ್ ಆ್ಯಪ್‌ನಲ್ಲಿ ಫೋಟೋ ಬಳಸುತ್ತಿರವ ಬಗ್ಗೆ ತಮ್ಮ ಗಮನಕ್ಕೆ ತಂದ ಭಾಸ್ವತಿ, ಈ ಸ್ವಾಮಿ ಎಂಬುವರಿಗೆ ನಟಿ, ಸಂಸದೆ ನುಸ್ರತ್ ಜಹಾನ್ ಅವರು ಕೃತಜ್ಞತೆಗಳನ್ನು ತಿಳಿಸಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement