ವಿವಾದಗಳ ನಡುವೆ ಗೆದ್ದು ಐತಿಹಾಸಿಕ ಸಾಧನೆ ಮಾಡಿದ ‘ಪಠಾಣ್’; 8 ದಿನಗಳಲ್ಲಿ ಪಠಾಣ್ ಗಳಿಸಿದ್ದೆಷ್ಟು..?

4 ವರ್ಷಗಳ ನಂತರ ಕಿಂಗ್ ಶಾರುಖ್ ಆರ್ಭಟ: ನಟನೆಯಿಂದ ವಿರಾಮ ತೆಗೆದುಕೊಳ್ಳುವ ಮೊದಲು, ಶಾರುಖ್ ಖಾನ್ ಕೊನೆಯ ಬಾರಿಗೆ 2018 ರಲ್ಲಿ ‘ಜೀರೋ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದು ಭರ್ಜರಿಯಾಗಿ ಬಿಡುಗಡೆಯಾಗಿತ್ತು, ಆದರೆ ಗಲ್ಲಾ ಪೆಟ್ಟಿಗೆಯಲ್ಲಿ…

Pathan movie 1

4 ವರ್ಷಗಳ ನಂತರ ಕಿಂಗ್ ಶಾರುಖ್ ಆರ್ಭಟ:

ನಟನೆಯಿಂದ ವಿರಾಮ ತೆಗೆದುಕೊಳ್ಳುವ ಮೊದಲು, ಶಾರುಖ್ ಖಾನ್ ಕೊನೆಯ ಬಾರಿಗೆ 2018 ರಲ್ಲಿ ‘ಜೀರೋ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದು ಭರ್ಜರಿಯಾಗಿ ಬಿಡುಗಡೆಯಾಗಿತ್ತು, ಆದರೆ ಗಲ್ಲಾ ಪೆಟ್ಟಿಗೆಯಲ್ಲಿ ಯಾವುದೇ ಸದ್ದು ಮಾಡದೆ ವಿಫಲವಾಯಿತು. ಶಾರುಖ್ ಅವರಿಗೆ ಇದೀಗ 57 ವರ್ಷ ವಯಸ್ಸಾಗಿದ್ದು, ಈ ಚಿತ್ರದಲ್ಲಿ ಕಾಣುವ ಮೈಕಟ್ಟು ಅನ್ನು ಕಟ್ಟಿಕೊಳ್ಳಲು ಶಾರುಖ್ ಖಾನ್ ಎರಡು ವರ್ಷಗಳ ಕಾಲಾವಧಿ ತೆಗೆದುಕೊಂಡಿದ್ದಾರೆ .

Vijayaprabha Mobile App free

ಕಾಡಿನ ಸಿಂಹಿಣಿ ಅಂತೆ ಕಾಣುವ ದೀಪಿಕಾ ಪಡುಕೋಣೆ

ದೀಪಿಕಾ ಕೈಯಲ್ಲಿ ಅನೇಕ ಚಿತ್ರಗಳ ಚಿತ್ರೀಕರಣ ಇದ್ದರೂ ಸಹ, ‘ಪಠಾಣ್’ ಚಿತ್ರದ ಒಂದು ತರಬೇತಿ ಅವಧಿಯನ್ನು ತಪ್ಪಿಸಿಕೊಂಡಿಲ್ಲವಂತೆ. ದೀಪಿಕಾ ವಾರದಲ್ಲಿ 6 ದಿನಗಳ ಕಾಲ ಪ್ರತಿದಿನ 1.5 ಗಂಟೆಗಳ ಕಾಲ ವ್ಯಾಯಾಮಕ್ಕೆ ಮೀಸಲಿಟ್ಟಿದ್ದು, ವಿಶ್ರಾಂತಿ ಪಡೆಯುವುದಕ್ಕೆ ವಾರದಲ್ಲಿ ಒಂದು ದಿನದ ವಿರಾಮವನ್ನು ತೆಗೆದುಕೊಳ್ಳುತ್ತಿದ್ದರು. ತಮ್ಮ ದೈಹಿಕವಾಗಿ ಪರಿಪೂರ್ಣತೆಯನ್ನು ಪಡೆಯುದಕ್ಕೆ, ದೀಪಿಕಾ ಕಟ್ಟುನಿಟ್ಟಾದ ಆಹಾರ ಪದ್ಧತಿಯನ್ನು ಅನುಸರಿಸುತ್ತಿದ್ದರು.

ಚಿತ್ರದಲ್ಲಿ ಹೆಚ್ಚು ಸದ್ದು ಮಾಡಿರುವ ಹಾಡು – ‘ಬೇಷರಂ ರಂಗ್’ ನಲ್ಲಿ ನೃತ್ಯದಿಂದ ಹಿಡಿದು ಆಕರ್ಷಕಣಿಯವಾಗಿ ಕಾಣುವಂತೆ ಜೊತೆಗೆ ಆಕ್ಷನ್-ವಾಕ್ ದೃಶ್ಯಗಳನ್ನು ಮಾಡುವವರೆಗೆ, ನಟಿ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಚಿತ್ರದ ‘ಭಯಂಕರ ವೀಲನ್’ ಜಾನ್ ಅಬ್ರಾಹಂ:

John Abraham

ಯಾವಾಗಲೂ ತಮ್ಮ ಫಿಟಿಸ್ ಮತ್ತು ಸಿಕ್ಸ್ ಪ್ಯಾಕ್” ಎಬಿಎಸ್‌ಗೆ ಹೆಸರುವಾಸಿಯಾಗಿರುವ ಜಾನ್ ಅಬ್ರಾಹಂ ಈ ಚಿತ್ರದಲ್ಲಿ ಪ್ರತಿಸ್ಪರ್ಧಿಯಾಗಿ (ಖಳನಾಯಕ) ನಟಿಸಿದ್ದು, ಈ ಚಿತ್ರದ ಪಾತ್ರಕ್ಕೆ ಹೊಂದಿಕೊಳ್ಳಲು ಜಿಮ್ ನಲ್ಲಿ ಇನ್ನೂ ಹೆಚ್ಚು ಕಠಿಣವಾದ ವರ್ಕೌಟ್ ಮಾಡಿದ್ದಾರೆ.

ಜಾನ್ ಅಬ್ರಾಹಂ ಬಗ್ಗೆ, ಪೋಸ್ಟರ್ ರಿವೀಲ್ ಮಾಡುವಾಗ ಶಾರುಖ್ , “ಜಾನ್ ಕಠಿಣ ಮತ್ತು ಒರಟಾಗಿ ಆಡುತ್ತಾನೆ!” ಹೇಳಿದರೆ, ಜಾನ್ ಅಬ್ರಹಾಂ ತಮ್ಮ ಅದ್ಭುತ ನಟನೆಯಿಂದ ತೆರೆಯ ಮೇಲೆ ಸಾಬೀತುಪಡಿಸಿದ ಅತಿ ದೊಡ್ಡ ಸಾಹಸಮಯ ಚಿತ್ರ ‘ಪಠಾಣ್’ ಎಂದು ನಿರ್ದೇಶ ಸಿದಾರ್ಥ್ ಆನಂದ್ ಹೇಳಿದ್ದಾರೆ.

ವಿವಾದ ಹುಟ್ಟು ಹಾಕಿದ “ಬೇಷರಂ ರಂಗ್” ಹಾಡು:

ಈ ಹಾಡಿಗೆ ಬಲಪಂಥೀಯ ಹಿಂದು ಗುಂಪುಗಳು ಇಡೀ ದೇಶದಲ್ಲಿ ಈ ಹಾಡಿನ ವಿರುದ್ಧ ಒಂದು ಹೋರಾಟದ ರೀತಿಯಲ್ಲಿ ವಿರೋಧಿಸಿದರು. “ಬೇಷರಂ ರಂಗ್” ಹಾಡು ಅಶ್ಲೀಲತೆಯನ್ನು ಉತ್ತೇಜಿಸುತ್ತದೆ ಮತ್ತು ದೀಪಿಕಾ ಪಡುಕೋಣೆ ಈ ಹಾಡಿನಲ್ಲಿ ಕೇಸರಿ ಬಿಕಿನಿಯನ್ನು ಧರಿಸಿದ್ದರಿಂದ ಕೇಸರಿ ಬಣವನ್ನು ಅಗೌರವಿಸುತ್ತದೆ ಎಂದು ಆರೋಪಿಸಿದರು.

ಹಲವು ರಾಜ್ಯದಲ್ಲಿನ ಸಚಿವರಿಂದ ಹಿಡಿದು ನಟರವರೆಗೂ ಹಲವರು ಈ ಹಾಡನ್ನು ಆಕ್ಷೇಪಾರ್ಹ ಎಂದು ಕರೆದಿದ್ದು, ಈ ಹಾಡಿನಲ್ಲಿರುವ ವೇಷಭೂಷಣಗಳನ್ನು ಬದಲಾಯಿಸದಿದ್ದರೆ, ತಮ್ಮ ರಾಜ್ಯಗಳಲ್ಲಿ ಈ ಸಿನಿಮಾವನ್ನು ನಿಷೇಧಿಸುತ್ತೇವೇ ಎಂದು ಎಚ್ಚರಿಕೆಯನ್ನು ನೀಡಿದ್ದರು.

ಅಷ್ಟೇ ಅಲ್ಲ, ದೇಶದ ವಿವಿಧ ನಗರಗಳಲ್ಲಿ ಶಾರುಖ್ ಖಾನ್ ಅವರ ಪ್ರತಿಕೃತಿ ಮತ್ತು ಪೋಸ್ಟರ್‌ಗಳನ್ನು, ದಹಿಸಿ ಆಕ್ರೋಶ ಹೊರಹಾಕಿದರು. ಈ ಚಿತ್ರದ ವಿವಾದದ ನಡುವೆಯೇ ದೇಶದಲ್ಲಿ ‘ಬಹಿಷ್ಕಾರ’ ಎನ್ನುವ ಪದ ಕೂಡ ಟ್ರೆಂಡ್ ಆಗಿ ಮಾರ್ಪಟ್ಟಿತ್ತು.

ಬಾಕ್ಸ್ ಆಫೀಸ್‌ನಲ್ಲಿ ದೂಳೆಬ್ಬಿಸಿದ ಪಠಾಣ್ :

Pathan

ಜಗತ್ತಿನಾದ್ಯಂತ ಬಿಡುಗಡೆಯಾಗಿದ್ದ ಈ ಚಿತ್ರ ಮೊದಲ 6 ದಿನಗಳಲ್ಲಿ ಪ್ರತಿ ದಿನ 100 ಕೋಟಿ ರೂ (US$13 ಮಿಲಿಯನ್) ಗಳಿಸಿದ ಹಿಂದಿ ಭಾಷೆಯ ಮೊದಲ ಸಿನಿಮಾವಾಗಿದೆ. ಕನ್ನಡದ ಚಲನಚಿತ್ರ KGF ಭಾಗ 2 (2022) ರ ಹಿಂದಿ ಆವೃತ್ತಿಯ ಈ ಹಿಂದಿನ ದಾಖಲೆಯನ್ನು’ಪಠಾಣ್’ ಮುರಿದಿದೆ.

ಉತ್ತರ ಅಮೇರಿಕಾ ಮತ್ತು ಕೆನಡಾದಲ್ಲಿ, ಪಠಾಣ್ ತನ್ನ ಆರಂಭಿಕ ವಾರಾಂತ್ಯದಲ್ಲಿ 695 ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡಿತ್ತು, ಅದರಿಂದ ಬರೋಬ್ಬರಿ 56 ಕೋಟಿ (US$6,88 ಮಿಲಿಯನ್) ಗಳಿಸಿದೆ.

ಯುಕೆ ಮತ್ತು ಐರ್ಲೆಂಡ್ ಬಾಕ್ಸ್‌ ಆಫೀಸ್‌ನಲ್ಲಿ ಪಠಾಣ್ ಚಿತ್ರವು ವಾರಾಂತ್ಯದಲ್ಲಿ 14 ಕೋಟಿಗಳಷ್ಟು (£1.4 ಮಿಲಿಯನ್) ಗಳಿಸಿದ್ದು, ‘ಅವತಾರ’ ದಿ ವೇ ಆಫ್ ವಾಟರ್’ ನಂತರ ಎರಡನೇ ಸ್ಥಾನದಲ್ಲಿ ಪಠಾಣ ಚಿತ್ರ ಇದೆ.

8 ದಿನಗಳಲ್ಲಿ 675 ಕೋಟಿ ರೂ ಗಳಿಸಿದ ಪಠಾಣ್:

ಶಾರುಖ್ ಖಾನ್ ಅಭಿನಯದ ‘ಪಠಾಣ್’ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸೌಂಡ್‌ ಮಾಡುತ್ತಿದ್ದು, ಕೇವಲ 8 ದಿನಗಳಲ್ಲಿ ವಿಶ್ವದಾದ್ಯಂತ 675 ಕೋಟಿ ಗಳಿಸುವ ಮೂಲಕ ದಾಖಲೆ ನಿರ್ಮಿಸಿದ್ದು, ನಿನ್ನೆ ಒಂದೇ ದಿನ 17.50 ಕೋಟಿ ಕಲೆಹಾಕಿದೆ. ಶನಿವಾರ 51.50 ಕೋಟಿ, ಭಾನುವಾರ 58.50 ಕೋಟಿ, ಸೋಮ 25.50 ಕೋಟಿ, ಮಂಗಳವಾರ 22 ಕೋಟಿ ಗಳಿಸಿತ್ತು. ಇದರೊಂದಿಗೆ ಸಲ್ಮಾನ್ ಖಾನ್ ಅಭಿನಯದ ಟೈಗರ್ ಜಿಂದಾ ಹೈ ಚಿತ್ರದ 339.16 ಕೋಟಿ ನೆಟ್ ಬಾಕ್ಸ್ ಆಫೀಸ್ ಕಲೆಕ್ಷನ್ ಅನ್ನು ಹಿಂದಿಕ್ಕಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.