ಜೂನ್ 9ರಂದು ತಮಿಳಿನ ನಿರ್ದೇಶಕ ವಿಘ್ನೇಶ್ ಶಿವನ್ ಮತ್ತು ಖ್ಯಾತ ನಟಿ, ಲೇಡಿ ಸೂಪರ್ ಸ್ಟಾರ್ ನಯನತಾರಾ ಹಸೆಮಣೆ ಏರಿದ್ದು ಎಲ್ಲರಿಗು ತಿಳಿದ ವಿಷಯ. ಇವರಿಬ್ಬರ ಮದುವೆ ಸಮಾರಂಭದ ವಿಡಿಯೋವನ್ನು ನೆಟ್ ಫ್ಲಿಕ್ಸ್ ಸಂಸ್ಥೆ ಬರೋಬ್ಬರಿ 25 ಕೋಟಿ ರುಪಾಯಿಗೆ ಖರೀದಿಸಿತ್ತು.
ವಿಘ್ನೇಶ್ ಶಿವನ್ ಮತ್ತು ನಯನತಾರಾ ಇಬ್ಬರು ಮದುವೆಯಾಗಿ ಸುಖ ಸಂಸಾರ ನಡೆಸುತ್ತಿದ್ದಾರೆ. ಆದರೆ ಈಗ ಇದ್ದಕ್ಕಿದಂತೆ ನಯನತಾರಾ ವಾಂತಿ ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದು, ಇದಕ್ಕೆಲ್ಲಾ ಕಾರಣ ನಯನತಾರಾ ಗಂಡ ವಿಘ್ನೇಶ್ ಅಂತೆ.
ಹೌದು..ಮಡದಿ ನಯನತಾರಾಗೆ ವೀಕೆಂಡ್‌ನಲ್ಲಿ ವಿಘ್ನೇಶ್ ಶಿವನ್ ಸ್ಪೆಷಲ್ ಅಡುಗೆ ಮಾಡಿ ಬಡಿಸಿದ್ದಾರೆ. ಆದರೆ ಆ ಆಡುಗೆ ತಿಂದು ನಯನತಾರಾ ವಾಂತಿ ಮಾಡಿಕೊಳ್ಳಲು ಶುರು ಮಾಡಿದ್ದಾರೆ. ನಂತರ ಕೂಡಲೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ನಟಿ ಮನೆಗೆ ವಾಪಸ್ಸಾಗಿದ್ದಾರೆ.