ಇತ್ತೀಚೆಗೆ ಟಾಲಿವುಡ್ ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ಸಂಬಂಧ ಭಾರೀ ಚರ್ಚೆಯಾಗಿತ್ತು. ಇದೀಗ ಇವರಿಬ್ಬರ ಡೇಟಿಂಗ್ ಅನಿರೀಕ್ಷಿತ ತಿರುವು ಸಿಕ್ಕಿದ್ದು, ವಿಡೇಟಿಂಗ್ ವಿಚಾರವಾಗಿ ಇಬ್ಬರೂ ‘ಅಗ್ರಿಮೆಂಟ್’ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.
ಹೌದು, ಸದ್ಯ ಹೊರಬಿದ್ದಿರುವ ಮಾಹಿತಿ ಪ್ರಕಾರ, ಒಪ್ಪಂದದನ್ವಯ ತಿಂಗಳಿಗೆ ನರೇಶ್ ಅವರು ಪವಿತ್ರಾಗೆ 25 ಲಕ್ಷ ನೀಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಒಂದು ವೇಳೆ ನಟ ನರೇಶ್, ಪವಿತ್ರಾಳನ್ನು ಬಿಟ್ಟು ಬೇರೆ ಹುಡುಗಿ ಜೊತೆ ಸಂಬಂಧ ಹೊಂದಿದ್ರೆ ಕೋಟಿ ಕೋಟಿ ಹಣ ಕೊಡ್ಬೇಕು.
ಹೌದು, ಒಂದು ವೇಳೆ ಪವಿತ್ರಾಗೆ ನರೇಶ್ ಕೈಕೊಟ್ಟು ಬೇರೆ ಸಂಬಂಧ ಹೊಂದಿದ್ರೆ ನರೇಶ್ ಪವಿತ್ರಾ ಅವರಿಗೆ 50 ಕೋಟಿ ಹಣ ನೀಡುವ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂಬ ಮಾತು ಕೇಳಿಬಂದಿದ್ದು, ಇದರ ಸತ್ಯಾಸತ್ಯತೆ ಬಹಿರಂಗವಾಗಬೇಕಿದೆ.