ಐಪಿಎಲ್‌ ಸಂಸ್ಥಾಪಕ ಲಲಿತ್‌ ಮೋದಿ ಜೊತೆ ವಿಶ್ವ ಸುಂದರಿ ಸುಶ್ಮಿತಾ ಸೇನ್!; ಏನಿದು ಇವರಿಬ್ಬರ ಡೇಟಿಂಗ್ ಪುರಾಣ..?

ಐಪಿಎಲ್ ಸಂಸ್ಥಾಪಕ,ಮಾಜಿ ಅಧ್ಯಕ್ಷ, ಹಗರಣಗಳಿಂದಾಗಿ ತಲೆ ಮರೆಸಿಕೊಂಡಿರುವ ಲಲಿತ್ ಮೋದಿ ಬಾಲಿವುಡ್ ತಾರೆ, ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಅವರ ಜತೆ ಕಾಣಿಸಿಕೊಂಡಿದ್ದಾರೆ. ಈ ಕುರಿತು ಟ್ವೀಟ್‌ ಮಾಡಿರುವ ಲಲಿತ್ ಮೋದಿ ಅವರು,…

ಐಪಿಎಲ್ ಸಂಸ್ಥಾಪಕ,ಮಾಜಿ ಅಧ್ಯಕ್ಷ, ಹಗರಣಗಳಿಂದಾಗಿ ತಲೆ ಮರೆಸಿಕೊಂಡಿರುವ ಲಲಿತ್ ಮೋದಿ ಬಾಲಿವುಡ್ ತಾರೆ, ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಅವರ ಜತೆ ಕಾಣಿಸಿಕೊಂಡಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಲಲಿತ್ ಮೋದಿ ಅವರು, ಸುಶ್ಮಿತಾ ಸೇನ್‌ ಮತ್ತು ತಾವು ಜೊತೆಗಿರುವ ಕೆಲವೊಂದು ಭಾವಚಿತ್ರಗಳನ್ನು ಹಂಚಿಕೊಂಡು, ʻಬೆಟರ್‌ ಹಾಫ್‌ʼ ಮತ್ತು `ನ್ಯೂ ಬಿಗಿನಿಂಗ್‌’ ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಇದು ಮದುವೆಯಲ್ಲ; ಬರೀ ಡೇಟಿಂಗ್‌, ಅದು ಒಂದು ದಿನ ಎಂದಿರುವ ಮೋದಿ ಈಗ ಮಾಲ್ಡೀವ್ಸ್‌ನಿಂದ ಲಂಡನ್‌ಗೆ ವಾಪಾಸ್ಸಾಗಿರುವುದಾಗಿ ಹೇಳಿದ್ದಾರೆ.

Vijayaprabha Mobile App free

ಲಲಿತ್ ಮೋದಿ ಅಂದರೆ ಐಪಿಎಲ್!

ಕ್ರಿಕೆಟ್ ಲೋಕಕ್ಕೆ ಲೀಗ್ ಮಾದರಿಯ ಟೂರ್ನಿಯನ್ನು ಪರಿಚಯಿಸಿದ್ದೆ ಲಲಿತ್ ಮೋದಿ. 2008ರಲ್ಲಿ ಲಲಿತ್ ಮೋದಿ ಆರಂಭಿಸಿದ IPL, ಇಂದು ವಿಶ್ವದ ಜನಪ್ರಿಯ ಟೂರ್ನಿಗಳಲ್ಲಿ ಒಂದಾಗಿದ್ದು, ಶ್ರೀಮಂತ ಕ್ರಿಕೆಟ್ ಟೂರ್ನಿ ಅಂತಾನೂ ಖ್ಯಾತಿ ಪಡೆದಿದೆ.

ಆದರೆ, IPLನಲ್ಲಿ ಹಣಕಾಸಿನ ಹಗರಣದ ಆರೋಪ ಎದುರಿಸುತ್ತಿರುವ ಲಲಿತ್ 2010ರಲ್ಲಿ ಭಾರತ ತೊರೆದು ಓಡಿಹೋಗಿದ್ದರು. ಅಂದಿನಿಂದ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ ಎಂದು ಯಾರಿಗೂ ಗೊತ್ತಿಲ್ಲ. ಆದರೀಗ, ನಟಿ ಸುಶ್ಮಿತಾ ಸೆನ್ ಜೊತೆ ಕಾಣಿಸಿಕೊಂಡಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ಸುಶ್ಮಿತಾ ಸೇನ್ ಬ್ರೇಕಪ್‌!

ಐಪಿಎಲ್‌ ಸಂಸ್ಥಾಪಕ ಲಲಿತ್‌ ಮೋದಿ, ಬಾಲಿವುಡ್‌ ನಟಿ ಸುಶ್ಮಿತಾ ಸೇನ್‌ ಅವರೊಂದಿಗೆ ಡೇಟಿಂಗ್‌ನಲ್ಲಿರುವುದಾಗಿ ಘೋಷಿಸಿಕೊಂಡಿದ್ದು, ಮುಂದೊಂದು ದಿನ ಮದುವೆ ಆಗುವುದಾಗಿಯೂ ಹೇಳಿಕೊಂಡಿದ್ದಾರೆ.

ಸುಶ್ಮಿತಾ ಸೇನ್ ಈ ಮೊದಲು ರೋಹ್ಮನ್‌ ಶಾವ್ಲ್‌ ಅವರೊಂದಿಗೆ ಬ್ರೇಕಪ್‌ ಮಾಡಿಕೊಂಡಿದ್ದು, ಸ್ನೇಹಿತರಾಗಿಯೇ ಇದ್ದು, ಮುಂದೆಯೂ ಸ್ನೇಹಿತರಾಗಿಯೇ ಇರುತ್ತೇವೆ ಎಂದಿದ್ದರು. ಸುಶ್ಮಿತಾ ಸೇನ್ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಂಡಿದ್ದು, ಈಗ ಲಲಿತ್‌ ಮೋದಿ ಅವರೊಂದಿಗೆ ಡೇಟಿಂಗ್‌ನಲ್ಲಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.