ಅಲ್ಲು ಸಿರೀಶ್ ಅಭಿನಯದ ʻಪ್ರೇಮ ಕಾದಂಟʼ ಚಿತ್ರದ ಎರಡು ಫಸ್ಟ್ ಲುಕ್ ಗಳನ್ನ ಒಂದೇ ದಿನ ಬಿಡುಗಡೆ ಮಾಡಲಾಗಿದ್ದು, ಇದರೊಂದಿಗೆ ಟಾಲಿವುಡ್ನಲ್ಲಿ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದ್ದಾರೆ.
ಅಲ್ಲು ಸಿರೀಶ್ ಬರ್ತ್ ಡೇ ದಿನವೇ ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿರೋದು ವಿಶೇಷವಾಗಿದ್ದು, ಇದೇ ಚಿತ್ರದ ಎರಡು ಪ್ರೀ-ಲುಕ್ ಗಳನ್ನ ರಿಲೀಸ್ ಮಾಡೋ ಮೂಲಕ ಹೊಸ ಟ್ರೆಂಡ್ ಸೆಟ್ ಮಾಡಿತ್ತು. ಇದೀಗ ಒಂದೇ ದಿನ ಎರಡು ಫಸ್ಟ್ ಲುಕ್‌ಗಳು ಚಿತ್ರತಂಡ ಬಿಡುಗಡೆಯಾಗಿದ್ದು, ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಮತ್ತಷ್ಟ ಕುತೂಹಲ ಹೆಚ್ಚುವಂತೆ ಮಾಡಿದೆ.
ʻಪ್ರೇಮ ಕಾದಂಟ’ ಚಿತ್ರದ ಫಸ್ಟ್ ಲುಕ್ಸ್ ಗಳಲ್ಲಿ ಗಳಲ್ಲಿ ಒಂದರಲ್ಲಿ ನವಯುಗದ ಪ್ರೇಮ ಜೋಡಿಯ ಚಿತ್ರವಿದ್ದು, ಇನ್ನೊಂದರಲ್ಲಿ ಪ್ರೇಮಿಗಳು ರೋಮ್ಯಾಂಟಿಕ್ ಆಗಿ ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಕಾಣಿಸುತ್ತದೆ. ಚಿತ್ರದ ಫಸ್ಟ್ ಲುಕ್ಸ್ ಗಳು ಈಗಾಗಲೇ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗುತ್ತಿವೆ.
ಅಲ್ಲು ಅರವಿಂದ್ ಅರ್ಪಿಸುವ, ಜಿಎ 2 ಪಿಕ್ಚರ್ಸ್ ನಿರ್ಮಾಣದಲ್ಲಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ಅಲ್ಲು ಸಿರೀಶ್, ನಟಿ ಅನು ಎಮಾನ್ಯುಯಲ್ ಅಭಿನಯಿಸುತ್ತಿದ್ದು ರಾಕೇಶ್ ಶಶಿ ನಿರ್ದೇಶನ ಮಾಡುತ್ತಿದ್ದಾರೆ.