ಸದ್ದಿಲ್ಲದೇ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಕನ್ನಡದ ಕಿರಿಕ್ ಹುಡುಗಿ!

ಕನ್ನಡದ “ಕಿರಿಕ್ ಪಾರ್ಟಿ” ಸಿನಿಮಾದ ಮೂಲಕ ಖ್ಯಾತಗಳಿಸಿದ್ದ ನಟಿ ಸಂಯುಕ್ತಾ ಹೆಗ್ಡೆ ಇದೀಗ ಸದ್ದಿಲ್ಲದೇ ಬಾಲಿವುಡ್​ ನತ್ತ ಹಾರಿದ್ದು ಹಿಂದಿಯಲ್ಲಿ ತಯಾರಾಗಿರುವ ‘ಪಂಚ್​ ಬೀಟ್​’ ವೆಬ್​ ಸಿರೀಸ್ ​ನ ಸೀಸನ್​ 2ರಲ್ಲಿ ವಿಶೇಷ ಪಾತ್ರವೊಂದನ್ನು…

ಕನ್ನಡದ “ಕಿರಿಕ್ ಪಾರ್ಟಿ” ಸಿನಿಮಾದ ಮೂಲಕ ಖ್ಯಾತಗಳಿಸಿದ್ದ ನಟಿ ಸಂಯುಕ್ತಾ ಹೆಗ್ಡೆ ಇದೀಗ ಸದ್ದಿಲ್ಲದೇ ಬಾಲಿವುಡ್​ ನತ್ತ ಹಾರಿದ್ದು ಹಿಂದಿಯಲ್ಲಿ ತಯಾರಾಗಿರುವ ‘ಪಂಚ್​ ಬೀಟ್​’ ವೆಬ್​ ಸಿರೀಸ್ ​ನ ಸೀಸನ್​ 2ರಲ್ಲಿ ವಿಶೇಷ ಪಾತ್ರವೊಂದನ್ನು ಸಂಯುಕ್ತಾ ಮಾಡಿದ್ದು, ಈ ಚಿತ್ರದ ಟ್ರೇಲರ್​ ಕೂಡ ಬಿಡುಗಡೆ ಆಗಿದೆ.

‘ಪಂಚ್​ ಬೀಟ್​’ ಇದೊಂದು ವೆಬ್​ ಸಿರೀಸ್​ ಆಗಿದ್ದು, ಬಾಲಿವುಡ್​ ನ ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್​ ತಮ್ಮದೇ ಆಲ್ಟ್​ ಬಾಲಾಜಿ ಒಟಿಟಿಗಾಗಿ ಈ ಸರಣಿಯನ್ನು ನಿರ್ಮಾಣ ಮಾಡಿದ್ದು, ಹದಿಹರೆಯದವರನ್ನೇ ಗಮನದಲ್ಲಿಟ್ಟುಕೊಂಡು, ಅವರ ಆಸೆ, ಆಕಾಂಶೆ, ತುಡಿತ ಹೀಗೆ ಹಲವು ಅಂಶಗಳನ್ನು ಆಧರಿಸಿ ಆಕಾಶ್​ ಚೌಬೇ ಈ ಸರಣಿಯನ್ನು ನಿರ್ದೇಶನ ಮಾಡಿದ್ದಾರೆ.

Vijayaprabha Mobile App free

ಅಂದಹಾಗೆ, ಈ ವೆಬ್​ ಸಿರೀಸ್​ ನಲ್ಲಿ ನಟಿ ಸಂಯುಕ್ತಾ ಹೆಗ್ಡೆ ವಿಶೇಷ ಪಾತ್ರವೊಂದನ್ನು ನಿಭಾಯಿಸಿದ್ದು, ಜೀವ ರಕ್ಷಕ ಕಲೆಗಳನ್ನು ಕಲಿತು, ಅಪ್ಪನ ಜಿಮ್​ ನಡೆಸುವ ಮಿಶಾ ಹೆಸರಿನ ಯುವತಿಯ ಪಾತ್ರ ಮಾಡಿದ್ದಾರೆ. ಅಷ್ಟೇ ಅಲ್ಲ “ನಿಜ ಜೀವನದಲ್ಲಿ ನಟಿ ಸಂಯುಕ್ತಾ ಏನೆಲ್ಲ ಕಲಿತಿದ್ದಾರೋ ಆ ಎಲ್ಲವೂ ಅಂಶಗಳು ಈ ಸಿನಿಮಾದಲ್ಲಿ ಕಾಣಬಹುದಂತೆ, ಒಂದರ್ಥದಲ್ಲಿ ಈ ಪಾತ್ರ ತನ್ನನ್ನೇ ಹೋಲುತ್ತದೆಯೆಂದು” ಎಂದು ನಟಿ ಸಂಯುಕ್ತಾ ಹೇಳಿಕೊಂಡಿದ್ದಾರೆ. ಇನ್ನು, ಈ ವೆಬ್​ ಸಿರೀಸ್ ಇದೆ ಜೂನ್​ 27 ರಿಂದ ಪ್ರಸಾರವಾಗಲಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.