ಮುಂಬೈ: ಬಾಲಿವುಡ್‌ನ ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಫೋಟೋವೊಂದನ್ನು ಪೋಸ್ಟ್ ಮಾಡಿದ್ದೂ ಬಾಲಿವುಡ್‌ನ ನಟಿ ಕತ್ರಿನಾ ಕೈಫ್ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.
ಬಿಗ್ ಬಿ ಅಮಿತಾಬ್ ಅವರು ಕತ್ರಿನಾ ಜೊತೆ ಒಟ್ಟಿಗೆ ಮಾಡಿದ ಜಾಹೀರಾತಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅಮಿತಾಬ್ ಬಚ್ಚನ್ ಮತ್ತು ಕತ್ರಿನಾ ಸಾಂಪ್ರದಾಯಿಕ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ‘ನಾನು ಆಕಸ್ಮಿಕವಾಗಿ ಫೋಟೋವೊಂದನ್ನು ನೋಡಿದೆ. ಆದರೆ ನಾನು ಅದನ್ನು ಹುಡುಕಲಿಲ್ಲ. ಈ ಫೋಟೋ ದೇವಿ ಜಿ ಆಭರಣಗಳೊಂದಿಗೆ ತುಂಬಾ ಸುಂದರವಾಗಿ ಕಾಣಿಸಿದ್ದಾರೆ, ಇಲ್ಲಿ ಕೆಳಗೆ ಕುಳಿತಿರುವುದು ನಾನೆ ‘ಎಂದು ಬಿಗ್‌ಬಿ ಫನ್ನಿ ಎಮೋಜಿಗಳನ್ನು ಹಾಕಿ ಪೋಸ್ಟ್ ಮಾಡಿದ್ದಾರೆ.
ಬಿಗ್‌ಬಿ ದಂಪತಿಗಳ ಜೊತೆ ಮದುವೆ ಹೆಣ್ಣುಮಗಳಾಗಿ(ವಧುವಾಗಿ ) ಕತ್ರಿನಾ ಕೈಫ್ ಆಭರಣ ಕಂಪನಿಗೆ ಮಾಡಿದ ಜಾಹೀರಾತಿನಿಂದ ತೆಗೆದ ಫೋಟೋ ಇದು. ಆದರೆ ಇದಕ್ಕೂ ಮುಂಚೆ ಅಮಿತಾಬ್ ಮತ್ತು ಕತ್ರಿನಾ ಒಟ್ಟಿಗೆ ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರದಲ್ಲಿ ನಟಿಸಿದ್ದಾರೆ. ಬಿಗ್ ಬಿ ಅಮಿತಾಬ್ ಬಚ್ಚನ್ ಮಾಡಿರುವ ಈ ಪೋಸ್ಟ್ ಗೆ ಕತ್ರಿನಾ ಕೈಫ್ ಅಭಿಮಾನಿಗಳು ಫಿದಾ ಆಗಿದ್ದು ಸಾಕಷ್ಟು ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ.