ಮುಂಬೈ : ಬಾಲಿವುಡ್ ಖ್ಯಾತ ನಟಿ ಬೇಬೋ ಕರೀನಾ ಕಪೂರ್ ಎರಡನೇ ಬಾರಿಗೆ ಮತ್ತೆ ಗಂಡು ಜನ್ಮ ನೀಡಿದ್ದು, ನಟ ಸೈಫ್ ಅಲಿ ಖಾನ್ ಅವರ ಕುಟುಂಬದಲ್ಲಿ ಸಂಭ್ರಮದ ವಾತಾವರಣ ಸೃಷ್ಟಿಯಾಗಿದೆ.
ಹೌದು ಈಗಾಗಲೇ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ದಂಪತಿಗೆ ಒಂದು ಗಂಡು ಮಗುವಿದ್ದು, ಇಂದು ಬೆಳಿಗ್ಗೆ ನಟಿ ಕರೀನಾ ಕಪೂರ್ ಎರಡನೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಡಿಸೈನರ್ ಮನೀಶ್ ಮಲ್ಹೋತ್ರಾ ಅವರು ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಕರೀನಾಗೆ ಕಳೆದ ರಾತ್ರಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 2012ರಲ್ಲಿ ವಿವಾಹವಾಗಿದ್ದ ಸೈಫ್ ಅಲಿ ಖಾನ್ -ಕರೀನಾ ಕಪೂರ್ ದಂಪತಿ, 2016 ರಲ್ಲಿ ಮೊದಲು ಮಗುವಿಗೆ ಜನ್ಮ ನೀಡಿದ್ದರು. ಈಗ ಆ ಮಗು ನಾಲ್ಕು ವರ್ಷವನಾಗಿದ್ದು ತೈಮೂರ್ ಅಲಿ ಖಾನ್ ಎಂಬ ಹೆಸರಿಟ್ಟಿದ್ದಾರೆ.