Actor Kiran Raj car accident: ‘ಕನ್ನಡತಿ’ (Kannadati) ಧಾರಾವಾಹಿ ಖ್ಯಾತಿಯ ನಟ ಕಿರಣ್ ರಾಜ್ (Kiran Raj) ಕಾರು ಅವರಿದ್ದ ಬೆಂಝ್ ಕಾರು ಮಂಗಳವಾರ ರಾತ್ರಿ ಅಪಘಾತಕ್ಕಿಡಾಗಿದ್ದು (Accident), ನಟ ಕಿರಣ್ ರಾಜ್ ಗೆ ಎದೆ ಭಾಗಕ್ಕೆ ಪೆಟ್ಟು ಬಿದ್ದಿದೆ.
ಹೌದು, ‘ಕನ್ನಡತಿ’ ಧಾರಾವಾಹಿ ನಟ ಕಿರಣ್ ರಾಜ್ ಅವರು ಇದ್ದ ಬೆಂಝ್ ಕಾರು ಮಂಗಳವಾರ ರಾತ್ರಿ ಬೆಂಗಳೂರಿನ ಕೆಂಗೇರಿ ಬಳಿ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಕಾರು ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ನಟನ ಎದೆಯ ಭಾಗಕ್ಕೆ ಪೆಟ್ಟು ಬಿದ್ದಿದೆ. ಆ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸದ್ಯ ನಟ ಕಿರಣ್ ರಾಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರಿಂದ ಚಿಕಿತ್ಸೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.ಸೆಪ್ಟೆಂಬರ್ 12ರಂದು ಕಿರಣ್ ರಾಜ್ ನಟನೆಯ ‘ರಾನಿ’ ಸಿನಿಮಾ ಬಿಡುಗಡೆಯಾಗಲಿದ್ದು, ಕೆಲ ದಿನಗಳಿಂದ ಅವರು ಈ ಸಿನಿಮಾದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು.