ಬೆಂಗಳೂರು: ಸ್ಯಾಂಡಲ್‌ವುಡ್‌ನ ಖ್ಯಾತ ಪೋಷಕ ನಟ ರಾಕ್‌ಲೈನ್ ಸುಧಾಕರ್ ವಿಧಿವಶರಾಗಿದ್ದಾರೆ. ಇಂದು ಸಿನಿಮಾ ಶೂಟಿಂಗ್‌ನಲ್ಲಿ ತೊಡಗಿದ್ದ ವೇಳೆ, ಸ್ಪಾಟ್‌ನಲ್ಲೇ ಹೃದಯಾಘಾತದಿಂದ ರಾಕ್‌ಲೈನ್ ಸುಧಾಕರ್ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಕೆಲವು ದಿನಗಳ ಹಿಂದೆ ಹಿರಿಯ ನಟ ರಾಕ್‌ಲೈನ್ ಸುಧಾಕರ್ ಅವರಿಗೆ ಕರೋನ ಪಾಸಿಟಿವ್ ದೃಢಪಟ್ಟಿತ್ತು. ನಂತರ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿ ಸಿನಿಮಾ ಶೂಟಿಂಗ್ ಭಾಗಿಯಾಗಿದ್ದು, ಚಿತ್ರೀಕರಣ ಸ್ಪಾಟ್ ನಲ್ಲೆ ರಾಕ್‌ಲೈನ್ ಸುಧಾಕರ್ ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.
ಪೋಷಕ ನಟ ರಾಕ್‌ಲೈನ್ ಸುಧಾಕರ್ ಪಂಚರಂಗಿ, ಪರಮಾತ್ಮ, ಟೋಪಿವಾಲಾ, ವಾಸ್ತು ಪ್ರಕಾರ, ಲವ್ ಇನ್ ಮಂಡ್ಯ, ಮಿಸ್ಟರ್ ಆ್ಯಂಡ್ ಮಿಸಸ್ ರಾಮಾಚಾರಿ, ಅಧ್ಯಕ್ಷ ಸಿನಿಮಾ ಸೇರಿದಂತೆ 50ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಹಿರಿಯ ನಟ ರಾಕ್‌ಲೈನ್ ಸುಧಾಕರ್ ಅವರ ಸಾವಿಗೆ ಕನ್ನಡ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.