ಎರಡನೇ ಮದುವೆಗೆ ಸಿದ್ದವಾದ ಖ್ಯಾತ ನಿರ್ದೇಶಕನ ಮಾಜಿ ಸೊಸೆ

ಹೈದರಾಬಾದ್: ತೆಲುಗಿನ ಖ್ಯಾತ ಹಿರಿಯ ನಿರ್ದೇಶಕ ಕೆ. ರಾಘವೇಂದ್ರರಾವ್ ಅವರ ಮಗ ಪ್ರಕಾಶ್ ಕೋವೆಲಮುಡಿ ಅವರ ಮಾಜಿ ಪತ್ನಿ, ಪ್ರಮುಖ ರೈಟರ್ ಕನಿಕಾ ಧಿಲ್ಲೋನ್ ಎರಡನೇ ಮದುವೆ ಮಾಡಿಕೊಳ್ಳಲು ಸಿದ್ಧವಾಗಿದ್ದಾರೆ. ಕನಿಕಾ ಧಿಲ್ಲೋನ್ ಸೋಮವಾರ…

ಹೈದರಾಬಾದ್: ತೆಲುಗಿನ ಖ್ಯಾತ ಹಿರಿಯ ನಿರ್ದೇಶಕ ಕೆ. ರಾಘವೇಂದ್ರರಾವ್ ಅವರ ಮಗ ಪ್ರಕಾಶ್ ಕೋವೆಲಮುಡಿ ಅವರ ಮಾಜಿ ಪತ್ನಿ, ಪ್ರಮುಖ ರೈಟರ್ ಕನಿಕಾ ಧಿಲ್ಲೋನ್ ಎರಡನೇ ಮದುವೆ ಮಾಡಿಕೊಳ್ಳಲು ಸಿದ್ಧವಾಗಿದ್ದಾರೆ. ಕನಿಕಾ ಧಿಲ್ಲೋನ್ ಸೋಮವಾರ ಬಾಲಿವುಡ್ ಖ್ಯಾತ ಬರಹಗಾರ ಮತ್ತು ನಿರ್ಮಾಪಕ ಹಿಮಾಂಶು ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ವಿಷಯವನ್ನು ಸ್ವತಃ ಕನಿಕಾ ಧಿಲ್ಲೋನ್ ಅವರು ಸಾಮಾಜಿಕ ಮಾಧ್ಯಮಗಳ ಮೂಲಕ ಬಹಿರಂಗಪಡಿಸಿದ್ದು, ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ.

ಹಿರಿಯ ನಿರ್ದೇಶಕ ಕೆ. ರಾಘವೇಂದ್ರರಾವ್ ಅವರ ಮಗ ಪ್ರಕಾಶ್ ಕೋವೆಲಮುಡಿ ಹಾಗು ಕನಿಕಾ ಧಿಲ್ಲೋನ್ ಅವರು ಆಗಸ್ಟ್, 2014 ರಲ್ಲಿ ವಿವಾಹವಾಗಿದ್ದರು. ನಟಿ ಅನುಷ್ಕಾ ಶೆಟ್ಟಿ ಅವರ ಸಿನಿಮಾ ವೃತ್ತಿಜೀವನದ ಅತಿದೊಡ್ಡ ಪ್ಲಾಪ್ ಸಿನಿಮಾವಾಗಿ ಉಳಿದಿರುವ ‘ಸೈಜ್ ಜೀರೋ’ ಸಿನಿಮಾದಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದರು. ಈ ಸಿನಿಮಾಕ್ಕೆ ಕನಿಕಾ ಕಥೆ ಬರೆದಿದ್ದರೆ, ಪ್ರಕಾಶ್ ನಿರ್ದೇಶನ ಮಾಡಿದ್ದರು. ಆದರೆ ಈ ದಂಪತಿಗಳ ನಡುವೆ ಭಿನ್ನಾಭಿಪ್ರಾಯಗಳು ತಲೆದೂರಿದ್ದರಿಂದ ವಿಚ್ಛೇಧನ ಪಡೆದುಕೊಂಡಿದ್ದರು ಎಂದು ವದಂತಿ ಹರಡಿತ್ತು. ಆದರೆ ದಂಪತಿಗಳು ಈ ವಿಷಯವನ್ನು ಎಲ್ಲೂ ಬಹಿರಂಗಪಡಿಸಿರಲಿಲ್ಲ. ಈ ಕ್ರಮದಲ್ಲಿಯೇ ಕನಿಕಾ ಧಿಲ್ಲೋನ್ ಈಗ ತನ್ನ ಎರಡನೇ ಮದುವೆಗೆ ತಯಾರಿ ನಡೆಸಿದ್ದಾರೆ.

ಬಾಲಿವುಡ್‌ನಲ್ಲಿ ಅನೇಕ ಚಿತ್ರಗಳಿಗೆ ಬರಹಗಾರರಾಗಿ ಕೆಲಸ ಮಾಡಿದ ಕನಿಕಾ, ಇದುವರೆಗೆ ನಿರೀಕ್ಷಿತ ಯಶಸ್ಸನ್ನು ಗಳಿಸಿಲ್ಲ. ಆದರೆ ಅವರ ಪ್ರತಿಭೆಯನ್ನು ಪ್ರಶಂಸಿಸಲಾಯಿತು. ಈಗ ಬಾಲಿವುಡ್ ನಿರ್ಮಾಪಕ ಕಮ್ ರೈಟರ್ ಹಿಮಾಂಶು ಅವರನ್ನು ಮದುವೆಯಾಗುತ್ತಿದ್ದು, ಇಬ್ಬರೂ ಒಟ್ಟಿಗೆ ಸೇರಿ ಹೊಸ ಯೋಜನೆಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

Vijayaprabha Mobile App free

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.