ಎಮರ್ಜೆನ್ಸಿ ಚಿತ್ರದಲ್ಲಿ ಕಂಗನಾ ರಣಾವತ್ ಅವರು ಇಂದಿರಾ ಗಾಂಧಿ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ಚಿತ್ರದ ಬಗ್ಗೆ ಸಾಕಷ್ಟು ಕುತೂಹಲವಿದ್ದು, ಈ ಸಿನಿಮಾದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದೆ.
ಹೌದು, ‘ಎಮರ್ಜೆನ್ಸಿ’ ಸಿನಿಮಾ ಇಂದಿರಾಗಾಂಧಿ ಪ್ರಧಾನಿಯಾಗಿದ್ದಾಗ ಹೇರಲಾದ ತುರ್ತು ಪರಿಸ್ಥಿತಿಯನ್ನು ಆಧರಿಸಿದ ಸಿನಿಮಾವಾಗಿದ್ದು, ‘Emergency’ ಸಿನಿಮಾದ ಶೂಟಿಂಗ್ ಆರಂಭ ಆಗಿದೆ. ಅಷ್ಟೇ ಅಲ್ಲ, ಚಿಕ್ಕದೊಂದು ಟೀಸರ್ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾದಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪಾತ್ರವನ್ನು ಕಂಗನಾ ರಣಾವತ್ ನಿಭಾಯಿಸುವುದರ ಜೊತೆಗೆ ಸ್ವತಃ ನಿರ್ದೇಶನವನ್ನು ಮಾಡಿದ್ದಾರೆ.
‘ಎಮರ್ಜೆನ್ಸಿ’ ಸಿನಿಮಾದ ಫಸ್ಟ್ಲುಕ್ ಟೀಸರ್ ನೋಡಿ ಇದರಲ್ಲಿ ಕಂಗನಾ ರಣಾವತ್ ಅವರು ಥೇಟ್ ಇಂದಿರಾ ಗಾಂಧಿ ರೀತಿಯೇ ಕಾಣಿಸುತ್ತಿದ್ದಾರೆ. ಅಷ್ಟೇ ಅಲ್ಲದೇ, ಬಾಡಿ ಲಾಂಗ್ವೇಜ್,ಧ್ವನಿ ಏರಿಳಿತ ಕೂಡ ಇಂದಿರಾ ಗಾಂಧಿ ರೀತಿಯೇ ಇದೆ ಎಂದು ಎಲ್ಲರೂ ಅಚ್ಚರಿ ಹೊರಹಾಕುತ್ತಿದ್ದು, ಎಲ್ಲರೂ ಕಂಗನಾಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.
View this post on Instagram
View this post on Instagram