ಬಾಲಿವುಡ್ ನಲ್ಲಿ ಸ್ಟಾರ್ ಹೀರೋಯಿನ್ ಆಗಿ ವೃತ್ತಿ ಜೀವನದ ಉತ್ತುಂಗದಲ್ಲಿರುವಾಗಲೇ ಪ್ರಿಯಾಂಕಾ ಚೋಪ್ರಾ(Priyanka Chopra) ಹಾಲಿವುಡ್ ಗೆ ಶಿಫ್ಟ್ ಆದರು. ಆದರೆ, ಪ್ರಿಯಾಂಕಾ ಚೋಪ್ರಾ ಅವರು ಆ ದಾರಿಯಲ್ಲಿ ಹೋಗಲು ಕಾರಣವನ್ನು ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ. ಕೆಲವರ ಕಾರಣದಿಂದ ಬಿಟೌನ್ ತೊರೆದು ಅಲ್ಲಿನ ರಾಜಕೀಯದಿಂದ ಬೇಸತ್ತು ಕೊನೆಗೆ ಅಮೇರಿಕಾಕ್ಕೆ ಶಿಫ್ಟ್ ಆಗಿದ್ದೇನೆ ಎಂದು ಹೇಳಿದ್ದರು.
ಇನ್ನು, ನಟ ಪ್ರಿಯಾಂಕಾ ಆರೋಪಕ್ಕೆ ಫೈರ್ ಬ್ರ್ಯಾಂಡ್ ಕಂಗನಾ ರಣಾವತ್ (Kangana Ranaut) ಪ್ರತಿಕ್ರಿಯಿಸಿದ್ದು, ನಿರ್ಮಾಪಕ ಕರಣ್ ಜೋಹರ್(Karan Johar) ಅವರ ವಿರುದ್ಧ ಆರೋಪಗಳ ಸುರಿಮಳೆ ಸುರಿಸಿದ್ದು, ಪ್ರಿಯಾಂಕಾ ಮೇಲೆ ಅನಧಿಕೃತ ನಿಷೇಧ ಹೇರಿದ್ದು ಚಿತ್ರ ನಿರ್ಮಾಪಕ ಕರಣ್ ಜೋಹರ್ ಎಂದು ಅವರು ಹೇಳಿದ್ದಾರೆ. 008ರಲ್ಲಿ ‘ಫ್ಯಾಶನ್’ ಚಿತ್ರದಲ್ಲಿ ಪ್ರಿಯಾಂಕಾ ಮತ್ತು ಕಂಗನಾ ಒಟ್ಟಿಗೆ ಕೆಲಸ ಮಾಡಿದ್ದು ಗೊತ್ತೇ ಇದೆ.
ಇದನ್ನು ಓದಿ: CRPF ನಲ್ಲಿ 9,212 ಕಾನ್ಸ್‌ಟೇಬಲ್ ಹುದ್ದೆಗಳು; SSLC ವಿದ್ಯಾರ್ಹತೆ, ಈಗಲೇ ಅರ್ಜಿ ಸಲ್ಲಿಸಿ
ಈ ಕುರಿತು ರೀಟ್ವೀಟ್ ಮಾಡಿರುವ ನಟಿ ಕಂಗನಾ ರಣಾವತ್, ಬಿಟೌನ್ ಗ್ಯಾಂಗ್ ಆಕೆಯನ್ನು ಬೆದರಿಸಿ ಬಾಲಿವುಡ್ ತೊರೆಯುವಂತೆ ಮಾಡಿತು. ಕರಣ್ ಜೋಹರ್ ಆಕೆಯನ್ನು ಬ್ಯಾನ್ ಮಾಡಿರುವುದು ಎಲ್ಲರಿಗೂ ಗೊತ್ತು,” ಎಂದು ಟ್ವೀಟ್ ಮಾಡಿದ್ದಾರೆ. ಬಾಲಿವುಡ್ ಬಗ್ಗೆ ಪ್ರಿಯಾಂಕಾ ಚೋಪ್ರಾ ಹೇಳುವುದು ಇದನ್ನೇ, ಜನರು ಗುಂಪುಗೂಡಿದರು, ಅವರನ್ನು ಬೆದರಿಸಿದರು, ಚಿತ್ರರಂಗದಿಂದ ಹೊರಹಾಕಿದರು. ಭಾರತವನ್ನು ತೊರೆಯುವಂತೆ ಮಾಡಲಾಯಿತು. ಕರಣ್ ಜೋಹರ್ ಅವರು ಪ್ರಿಯಾಂಕಾರನ್ನು ನಿಷೇಧಿಸಿದ್ದರು ಎಂದು ಎಲ್ಲರಿಗೂ ತಿಳಿದಿದೆ. ಪ್ರಿಯಾಂಕಾ ಅವರಿಗೆ ಕರಣ್ “ಕಿರುಕುಳ” ನೀಡಿದ್ದಾರೆ. ಹಾಗಾಗಿ ಅವರು ದೇಶ ತೊರೆಯಲು ಕಾರಣವಾಯಿತು ಎಂದು ಆರೋಪಿಸಿದ್ದಾರೆ.
ಇದನ್ನು ಓದಿ: Pan Aadhaar link: ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್, ಪ್ಯಾನ್-ಆಧಾರ್ ಕಾರ್ಡ್ ಲಿಂಕ್ ಗಡುವು ಮತ್ತೆ ವಿಸ್ತರಣೆ
ಇಲ್ಲಿಗೆ ನಿಲ್ಲದ ಕಂಗನಾ ಮತ್ತೊಂದು ಟ್ವೀಟ್‌ನಲ್ಲಿ ಶಾರುಖ್ ಖಾನ್ ( (Shah Rukh Khan) ಜೊತೆಗಿನ ಪ್ರಿಯಾಂಕಾ ಸ್ನೇಹದ ಬಗ್ಗೆ ಬಹಿರಂಗಪಡಿಸಿದ್ದಾರೆ. ಎಸ್‌ಆರ್‌ಕೆ ಅವರೊಂದಿಗಿನ ಪ್ರಿಯಾಂಕಾ ಸ್ನೇಹದ ಕಾರಣದಿಂದ ಕರಣ್ ಜೋಹರ್ ಮತ್ತು ಸಿನಿಮಾ ಮಾಫಿಯಾದೊಂದಿಗೆ ವಿಭೇದಗಳ ಬಗ್ಗೆ ಮಾಧ್ಯಮಗಳು ವ್ಯಾಪಕವಾಗಿ ಬರೆದಿದ್ದವು. ಹೊರಗಿನವರು ಪ್ರಿಯಾಂಕಾಳಿಗೆ ಪಂಚಿಂಗ್ ಟ್ಯಾಗ್ ಗಳಿಂದ ಕಿರುಕುಳ ನೀಡಿದ್ದರಿಂದ, ಕೊನೆಗೆ ಆಕೆ ಭಾರತವನ್ನು ತೊರೆಯಬೇಕಾಯಿತು. ಅಮಿತಾಭ್ ಅಥವಾ ಶಾರುಖ್ ಕಾಲದಲ್ಲಿ ಯಾವತ್ತೂ ಹೊರಗಿನವರಿಗೆ ಹಗೆತನ ತೋರದ ಚಿತ್ರೋದ್ಯಮದ ಸಂಸ್ಕೃತಿಯನ್ನು ನಾಶಪಡಿಸುವುದಕ್ಕೆ ಈ ನೀಚ, ವಿಷಕಾರಿ ಮನುಷ್ಯ (ಕರಣ್) ಹೊಣೆಯಾಗಬೇಕು. “ಆತನ ಗ್ಯಾಂಗ್, ಮಾಫಿಯಾ PR.. ಹೊರಗಿನವರ ದಾಳಿ ಮತ್ತು ಕಿರುಕುಳಕ್ಕೆ ಹೊಣೆಯಾಗಬೇಕು” ಎಂದು ಹೇಳಿದ್ದಾರೆ.
ಇದನ್ನು ಓದಿ: ಉದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್; ಪಿಎಫ್ ಬಡ್ಡಿ ದರ ಹೆಚ್ಚಿಸಿದ ಕೇಂದ್ರ, ಶೇಕಡಾವಾರು ಎಷ್ಟು ಏರಿಕೆ?
To be true, and they succumb to what all undeserving, immature, entitled people succumb to in such a situation ( jealousy)They “ GANG UP” bully and harass even kill those who they see as gifted, Amadeus is a film about this, my most favourite film.
— Kangana Ranaut (@KanganaTeam) March 28, 2023