ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ‘ರಾಬರ್ಟ್’ ಸಿನಿಮಾಗೆ ತೆಲುಗು ಸ್ಟಾರ್ ನಟ ಜಗಪತಿ ಬಾಬು ಕನ್ನಡದಲ್ಲಿ ಡಬ್ಬಿಂಗ್ ಮಾಡಿರುವುದು ಈಚೆಗಷ್ಟೇ ಗೊತ್ತಾಗಿತ್ತು.
ಇದೀಗ ಈ ವಿಷಯದ ಬಗ್ಗೆ ನಟ ಜಗಪತಿ ಬಾಬು ಅವರು ಟ್ವೀಟ್ ಮಾಡಿದ್ದು, ನಾನು ಕನ್ನಡದಲ್ಲಿ ಮೊದಲ ಬಾರಿಗೆ ‘ರಾಬರ್ಟ್’ ಚಿತ್ರಕ್ಕಾಗಿ ಧ್ವನಿ ನೀಡಿದ್ದೇನೆ ಎಂದು ಹೆಮ್ಮೆಯಿಂದ ಹೇಳಬಹುದು. ನಿರ್ದೇಶಕ ತರುಣ್ ಸುಧೀರ್ ಮತ್ತು ನಟ ದರ್ಶನ್ ಅವರು ಸಿಹಿಯಾದ ವ್ಯಕ್ತಿತ್ವವುಳ್ಳವರು. ನಿಮ್ಮೆಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ತರುಣ್ ಪ್ರತಿಕ್ರಿಯಿಸಿ ಧನ್ಯವಾದ ಹೇಳಿದ್ದಾರೆ.
ಇನ್ನು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ತೆರೆ ಮೇಲೆ ಬರಲು ಸಿದ್ದವಾಗಿದ್ದು, ಈ ಸಿನಿಮಾವನ್ನು ತರುಣ್ ಸುಧೀರ್ ನಿರ್ದೇಶನ ಮಾಡುತ್ತಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ನೀಡಿದ್ದಾರೆ.
ಈ ಸಿನಿಮಾದಲ್ಲಿ ದರ್ಶನ್ ಗೆ ನಾಯಕಿಯಾಗಿ ಆಶಾ ಭಟ್ ನಟಿಸುತ್ತಿದ್ದು, ಜಗಪತಿ ಬಾಬು, ವಿನೋದ್ ಪ್ರಭಾಕರ್ ಸೇರಿದಂತೆ ಹಲವು ನಟರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Proudly can say I gave my voice in Kannada for the first time for the film #Roberrt.. the director @TharunSudhir and hero @dasadarshan are very sweet people.
Wishing everyone a #HappyDussehra. pic.twitter.com/WCNlOAfdVr— Jaggu Bhai (@IamJagguBhai) October 25, 2020