ಮುಂಬೈ : ಕನ್ನಡ ಚಿತ್ರರಂಗದ ಚಿರು, ಬೆಳ್ಳಿ, ಪ್ರೇಮ್ ಅಡ್ಡಾ , ಸೂಪರ್ ರಂಗ , ಗೂಗ್ಲಿ ಸೇರಿದಂತೆ ಸೇರಿದಂತೆ ದಕ್ಷಿಣ ಭಾರತದ ಹಲವು ಸಿನಿಮಾಗಳಲ್ಲಿ ನಟಿಸಿ ಹೆಸರುವಾಸಿಯಾಗಿರುವ ನಟಿ ಕೃತಿ ಖರಬಂದಾ ಅವರು ಬಾಲಿವುಡ್ ನಲ್ಲಿ ಸಹ ನಟಿಸಿ ಮನ್ನಣೆ ಪಡೆದುಕೊಂಡಿದ್ದಾರೆ.
ಇನ್ನು ಇತ್ತೀಚಿಗೆ ಬಾಲಿವುಡ್ ನಟ ಪುಲ್ಕಿತ್ ಸಾಮ್ರಾಟ್ ಅವರನ್ನು ಪ್ರೀತಿಸುತ್ತಿರುವ ವಿಷಯ ಬೆಳಕಿಗೆ ಬಂದಿತ್ತು. ಮಾಧ್ಯಮ ವರದಿಗಳ ಪ್ರಕಾರ, ಇಬ್ಬರು ಸಹ ಜೀವನ ಮಾಡುತ್ತಿದ್ದು, ಶೀಘ್ರದಲ್ಲೇ ವಿವಾಹವಾಗಲಿದ್ದಾರೆ ಎಂದು ಸುದ್ದಿ ಹರಿದಾಡಿತ್ತು.
ಪ್ರೀತಿಯ ವಿಷಯದ ಬಗ್ಗೆ ನಟಿ ಕೃತಿ ಖರಬಂದಾ ಪ್ರತಿಕ್ರಿಯಿಸಿ ಸ್ಪಷ್ಟನೆ ನೀಡಿದ್ದು, ‘ಪುಲ್ಕಿಟ್ ತುಂಬಾ ಒಳ್ಳೆಯ ವ್ಯಕ್ತಿ, ಇಬ್ಬರ ಅಭಿಪ್ರಾಯಗಳೂ ಒಂದೇ ಆಗಿರುವುದರಿಂದ ಪ್ರೀತಿಯ ಸಂಬಂಧಲ್ಲಿದ್ದೇವೆ . ನಾವು ಒಂದೂವರೆ ವರ್ಷದಿಂದ ಡೇಟಿಂಗ್ ಮಾಡುತ್ತಿದ್ದೇವೆ. ಆದರೆ ಇಬ್ಬರ ಗಮನ ಈಗ ವೃತ್ತಿ ಮೇಲಿದೆ. ಆದ್ದರಿಂದ ಇದೀಗ ಮದುವೆಯಾಗುವ ಯೋಚನೆ ಇಲ್ಲ. ಗುರಿಗಳನ್ನು ಸಾಧಿಸಿದ ನಂತರವೇ ನಾವು ಮದುವೆಯಾಗುತ್ತೇವೆ ಎಂದು ನಟಿ ಕೃತಿ ಖರಬಂದಾ ಹೇಳಿದ್ದಾರೆ.
‘ಪಗಲ್ ಪಂಥಿ’ ಚಿತ್ರದಲ್ಲಿ ನಟಿ ಕೃತಿ ಖರಬಂದಾ ಮತ್ತು ಪುಲ್ಕಿತ್ ಸಾಮ್ರಾಟ್ ಇಬ್ಬರು ಜೊತೆಯಾಗಿ ನಟಿಸಿದ್ದಾರೆ.