69 ವರ್ಷ.. 6 ಜನರ ಜೊತೆ ಸಂಬಂಧ.. ಆದರೂ ಜೀವನದಲ್ಲಿ ಒಬ್ಬಂಟಿ ಈ ಖ್ಯಾತ ನಟಿ ಈಕೆ!?

ಖ್ಯಾತ ಬಾಲಿವುಡ್ ನಟಿ ರೇಖಾ ಜೀವನ : ಜೀವನದಲ್ಲಿ ಅನೇಕ ಏಳುಬೀಳುಗಳನ್ನು ಕಂಡ ಈ ನಟಿ ತಂದೆ ದೊಡ್ಡ ಸಿನಿಮಾ ತಾರೆಯಾದರು ಬಾಲ್ಯದಲ್ಲಿ ಅಪ್ಪನ ಪ್ರೀತಿ ಸಿಗಲಿಲ್ಲ. ಆದರೂ, ಅವರ ಸಿನಿಮಾ ವೃತ್ತಿಜೀವನ ಎಷ್ಟು…

actress rekha

ಖ್ಯಾತ ಬಾಲಿವುಡ್ ನಟಿ ರೇಖಾ ಜೀವನ : ಜೀವನದಲ್ಲಿ ಅನೇಕ ಏಳುಬೀಳುಗಳನ್ನು ಕಂಡ ಈ ನಟಿ ತಂದೆ ದೊಡ್ಡ ಸಿನಿಮಾ ತಾರೆಯಾದರು ಬಾಲ್ಯದಲ್ಲಿ ಅಪ್ಪನ ಪ್ರೀತಿ ಸಿಗಲಿಲ್ಲ. ಆದರೂ, ಅವರ ಸಿನಿಮಾ ವೃತ್ತಿಜೀವನ ಎಷ್ಟು ಅದ್ಭುತವೋ, ಅವರ ವೈಯಕ್ತಿಕ ಜೀವನವೂ ಗೊಂದಲದಿಂದ ಕೂಡಿದ್ದು, ಈ ನಟಿ 6 ಮಂದಿ ಜೊತೆಗಿನ ಲವ್ ಅಫೇರ್ ಮೂಲಕ ಸುದ್ದಿಯಾಗಿದ್ದರು. ಸಿನಿಮಾ ಜಗತ್ತನ್ನು ಆಳಿದ ಈ ನಟಿಗೆ 69 ವರ್ಷ ವಯಸ್ಸಿನಲ್ಲೂ ಒಂಟಿಯಾಗಿ ಜೀವನ ಸಾಗಿಸುತ್ತಿದ್ದಾರೆ.

Rekha affairs1
Bollywood actress Rekha love affair with 6 people

ಒಂದು ಕಾಲದಲ್ಲಿ ಈಕೆ ತೆರೆ ಮೇಲೆ ಕಾಣಿಸಿಕೊಂಡರೆ ಯುವಕರು ಸಿಳ್ಳೆ ಹಾಕಿ ಸಂಭ್ರಮಿಸುವುದಲ್ಲದೆ, ಬಾಲಿವುಡ್‌ನ ಈ ತಾರೆಯ ಸೌಂದರ್ಯಕ್ಕೆ ಯುವಕರು ಫಿದಾ ಆಗಿದ್ದರು. ಹೌದು, ಅದು ಬೇರೆ ಯಾರು ಅಲ್ಲ, ಅವರೇ ಬಾಲಿವುಡ್ ನಟಿ ರೇಖಾ. 69 ವರ್ಷ ವಯಸ್ಸಿನಲ್ಲೂ ನಟಿ ರೇಖಾ ಆ ಸೌಂದರ್ಯವನ್ನು ಇಂದಿಗೂ ಕಾಪಾಡಿಕೊಂಡಿದ್ದಾರೆ. ಖ್ಯಾತ ನಟಿ ರೇಖಾ ಜೀವನದಲ್ಲಿ ಏಳು ಬೀಳುಗಳನ್ನು ಕಂಡಿದ್ದು, ಸಿನಿಮಾ ಹಿನ್ನಲೆಯಿಂದ ಬಂದರೂ ಕೂಡ ಯಶಸ್ಸನ್ನು ಪಡೆಯಲು ಕಷ್ಟ ಪಟ್ಟು ತನ್ನ ಸಿನಿಮಾಗಳಿಂದ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ಇದನ್ನು ಓದಿ: ಪ್ರಧಾನಿ ನರೇಂದ್ರ ಮೋದಿ ಆಸ್ತಿ ಎಷ್ಟು ಗೊತ್ತಾ?

Vijayaprabha Mobile App free

6 ಮಂದಿ ಜೊತೆಗಿನ ಲವ್ ಅಫೇರ್;

ನಟಿ ರೇಖಾ ವೃತ್ತಿಜೀವನ ಎಷ್ಟು ಅದ್ಭುತವೋ, ಅವರ ವೈಯಕ್ತಿಕ ಜೀವನವೂ ಗೊಂದಲದಿಂದ ಕೂಡಿದ್ದು, ಈ ನಟಿ 6 ಮಂದಿ ಜೊತೆಗಿನ ಲವ್ ಅಫೇರ್ ಮೂಲಕ ಸುದ್ದಿಯಾಗಿದ್ದರು. ಹೌದು, ಅಮಿತಾಬ್ ಬಚ್ಚನ್‌ಗಿಂತ ಮೊದಲು ನಟಿ ರೇಖಾ ಅವರ ಹೆಸರು ನಟ ಜೀತೇಂದ್ರ ಜೊತೆ ಸೇರಿಕೊಂಡಿತ್ತು. ಇಬ್ಬರು ಸಾಕಷ್ಟು ಸಿನಿಮಾ ಮಾಡಿದ್ದಾರೆ. ಜಿತೇಂದ್ರ ಆಗಾಗಲೇ ಮದುವೆಯಾಗಿದ್ದರಿಂದ ಆ ಸಂಬಂಧಕ್ಕೆ ಬ್ರೇಕ್ ಬಿದ್ದಿತ್ತು.

Bollywood actress Rekha

ಅದರ ನಂತರ ನಟ ಕಿರಣ್ ಕುಮಾರ್ ಜೊತೆ ರೇಖಾ ಅವರ ಸಂಬಂಧದ ಕುರಿತು ಸುದ್ದಿ ಹಬ್ಬಿತು. ಕಿರಣ್ ಕುಮಾರ್ ಅವರು ವಿನೋದ್ ಮೆಹ್ರಾ ಅವರ ಆತ್ಮೀಯ ಸ್ನೇಹಿತರಾಗಿದ್ದು, 50 ರಿಂದ 80 ರ ದಶಕದವರೆಗೆ ಬಾಲಿವುಡ್ ಅನ್ನು ಆಳಿದ ಖ್ಯಾತ ಖಳನಟ.

ರೇಖಾ ಬಾಲಿವುಡ್‌ನ ಇನ್ನೊಬ್ಬ ನಾಯಕ ವಿನೋದ್ ಮೆಹ್ರಾ ಜೊತೆಗಿನ ಸಂಬಂಧದ ಬಗ್ಗೆ ಇವರಿಬ್ಬರೂ ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ಸುದ್ದಿಯೂ ಹರಿದಾಡಿತ್ತು. ಆದರೆ ಸಂದರ್ಶನದಲ್ಲಿ ರೇಖಾ ವಿನೋದ್ ಮೆಹ್ರಾ ಅವರೊಂದಿಗಿನ ವಿವಾಹದ ಸುದ್ದಿಯನ್ನು ತಳ್ಳಿಹಾಕಿದ್ದರೂ.

ಬಿಗ್ ಬಿ ಅಮಿತಾಬ್ ಬಚ್ಚನ್ ಜೊತೆಗಿನ ರೇಖಾ ಸಂಬಂಧ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತಾದರೂ, ರೇಖಾ ಅವರು ಅಮಿತಾಬ್ ಮೇಲಿನ ಪ್ರೀತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸುತ್ತಿದ್ದು, ಇವರಿಬ್ಬರ ಮದುವೆಯ ವದಂತಿಗಳು ಹಬ್ಬಿದ್ದವು. ಈ ವದಂತಿ ಬಳಿಕ ರೇಖಾ ಅವರೊಂದಿಗೆ ಕೆಲಸ ಮಾಡಲು ಜಯಾ ಬಚ್ಚನ್ ಅವರು ಅಮಿತಾಬ್‌ಗೆ ಬ್ರೇಕ್ ಹಾಕಿದರು ಎಂದು ಬಾಲಿವುಡ್ ಮೂಲಗಳು ಹೇಳುತ್ತವೆಯಾದರೂ, ಆಗ ಅಮಿತಾಬ್, ರೇಖಾ, ಜಯಾ ಬಚ್ಚನ್ ಅಭಿನಯದ ‘ಸಿಲ್ಸಿಲಾ’ ಸಿನಿಮಾ ದೊಡ್ಡ ಸಂಚಲನವನ್ನೇ ಸೃಷ್ಟಿಸಿತ್ತು.

ನಂತರ ರೇಖಾ ದೆಹಲಿಯ ಉದ್ಯಮಿ ಮುಖೇಶ್ ಅಗರ್ವಾಲ್ ಅವರನ್ನು ಮದುವೆಯಾದರಾದರೂ ಮುಕೇಶ್ ಅವರು ಖಿನ್ನತೆಯಿಂದ ಬಳಲುತ್ತಿದ್ದದ್ದು, ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಅವರ ಸಂಬಂಧವು ದುರಂತವಾಗಿ ಕೊನೆಗೊಂಡಿತು.

ನಂತರ ರೇಖಾ ಅವರ ಹೆಸರು ಮತ್ತೆ ಸಂಜಯ್ ದತ್ ಜೊತೆ ತಳುಕು ಹಾಕಿಕೊಂಡಿತ್ತಾದರೂ ಇಬ್ಬರೂ ನಮ್ಮ ನಡುವೆ ಅಂತಹದ್ದೇನೂ ಇಲ್ಲ ಎಂದು ನಿರಾಕರಿಸಿದರು. ಸದ್ಯ, ನಟಿ ರೇಖಾ ಅವರು 69 ವರ್ಷ ವಯಸ್ಸಿನಲ್ಲೂ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ.

ವಾಟ್ಸಾಪ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಫೇಸ್ ಬುಕ್ ಪೇಜ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ಇಲ್ಲಿ ಕ್ಲಿಕ್ ಮಾಡಿ
ಟ್ವಿಟ್ಟರ್ಇಲ್ಲಿ ಕ್ಲಿಕ್ಮಾಡಿ
ಶೇರ್ ಚಾಟ್ಇಲ್ಲಿಕ್ಲಿಕ್ಮಾಡಿ
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.