ಭಾರತದ ಶ್ರೀಮಂತ ಸಿನೆಮಾ ಸ್ಟಾರ್‌ ಮಕ್ಕಳ ಲಿಸ್ಟಲ್ಲಿ ಹೃತಿಕ್‌ ರೋಷನ್ ಮೊದಲಿಗ

ಮುಂಬೈ: ಭಾರತದ ಸಿನೆಮಾ ರಂಗದ ಸ್ಟಾರ್‌ಗಳ ಮಕ್ಕಳ ಪೈಕಿ ಯಾರು ಅತ್ಯಂತ ಶ್ರೀಮಂತರು ಎಂಬ ವರದಿಯೊಂದು ಬಿಡುಗಡೆಯಾಗಿದ್ದು, ಖ್ಯಾತ ನಟ ಹೃತಿಕ್‌ ರೋಷನ್‌ ಅವರು ಭರ್ಜರಿ 3100 ಕೋಟಿ ರು. ಅಸ್ತಿಯ ಮೂಲಕ ಮೊದಲ…

ಮುಂಬೈ: ಭಾರತದ ಸಿನೆಮಾ ರಂಗದ ಸ್ಟಾರ್‌ಗಳ ಮಕ್ಕಳ ಪೈಕಿ ಯಾರು ಅತ್ಯಂತ ಶ್ರೀಮಂತರು ಎಂಬ ವರದಿಯೊಂದು ಬಿಡುಗಡೆಯಾಗಿದ್ದು, ಖ್ಯಾತ ನಟ ಹೃತಿಕ್‌ ರೋಷನ್‌ ಅವರು ಭರ್ಜರಿ 3100 ಕೋಟಿ ರು. ಅಸ್ತಿಯ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ.

ಹೃತಿಕ್ ಅವರು ತಮ್ಮದೇ ಆದ ನಿರ್ಮಾಣ ಸಂಸ್ಥೆ, ಎಚ್‌ಆರ್‌ಎಕ್ಸ್‌ ಎಂಬ ಕ್ರೀಡಾ ಉತ್ಪನ್ನಗಳ ಕಂಪನಿ, ಜಾಹೀರಾತು, ಸ್ಟಾರ್ಟಪ್‌ಗಳ ಹೂಡಿಕೆ ಮೂಲಕ ಹೃತಿಕ್‌ ರೋಷನ್‌ ಇಷ್ಟು ಸಂಪತ್ತು ಸಂಪಾದಿಸಿದ್ದಾರೆ. ಹೃತಿಕ್‌ ರೋಷನ್ ಅವರ ತಂದೆ ರಾಕೇಶ್‌ ರೋಷನ್‌ ಅವರು ಬಾಲಿವುಡ್‌ನಲ್ಲಿ ಖ್ಯಾತ ನಟ ಮತ್ತು ನಿರ್ಮಾಪಕರಾಗಿದ್ದಾರೆ.

ಹೃತಿಕ್‌ ನಂತರ ಯಾರ ಮಕ್ಕಳಿದ್ದಾರೆ:

3100 ಕೋಟಿ ರು. ಆಸ್ತಿ ಹೊಂದಿರುವ ಹೃತಿಕ್‌ ನಂತರದ ಖ್ಯಾತನಾಮ ನಟರ ಮಕ್ಕಳಲ್ಲಿ ಸಲ್ಮಾನ್‌ ಖಾನ್‌ (2900 ಕೋಟಿ ರು.), ಅಮೀರ್‌ ಖಾನ್‌ (1800 ಕೋಟಿ ರು.), ರಾಮ್‌ಚರಣ್‌ ತೇಜ (1340 ಕೋಟಿ ರು.), ಸೈಫ್‌ ಅಲಿ ಖಾನ್‌ (1200 ಕೋಟಿ ರು.), ಆಲಿಯಾ ಭಟ್‌ (550 ಕೋಟಿ ರು.), ಜೂನಿಯರ್ ಎಂಟಿಆರ್‌ (500 ಕೋಟಿ ರು.), ರಣಬೀರ್‌ ಕಪೂರ್‌ (400 ಕೋಟಿ ರು.) ಪ್ರಭಾಸ್‌ (300 ಕೋಟಿ ರು.) ಮೊದಲಾದವರು ಇದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.