ಮತ್ತೆ ಖ್ಯಾತ ನಟಿ ಸಿಲ್ಕ್ ಸ್ಮಿತಾ ಜೀವನಾಧಾರಿತ ಸಿನಿಮಾ; ಈ ಬಾರಿ ಶೃಂಗಾರ ನಟಿಯ ಸಾವಿನ ರಹಸ್ಯದ ಬಗ್ಗೆ ವಿಶೇಷ ಗಮನ…?

ಚೆನ್ನೈ: ಭಾರತೀಯ ಚಿತ್ರರಂಗದಲ್ಲಿ ಅಚ್ಚಳಿಯದೆ ಉಳಿದಿರುವ ಖ್ಯಾತ ನಟಿ, ಮಾದಕ ಕಾಲುವೆ ಸಿಲ್ಕ್ ಸ್ಮಿತಾ ಅವರ ಮತ್ತೊಂದು ಜೀವನಾಧಾರಿತ ಸಿನಿಮಾ ತೆರೆಮೇಲೆ ಬರಲು ಸಿದ್ದವಾಗುತ್ತಿದೆ. ಒಂದು ಕಾಲದಲ್ಲಿ ಇಡೀ ಭಾರತೀಯ ಚಿತ್ರರಂಗದಲ್ಲಿ ನಟಿ ಸಿಲ್ಕ್…

Silk smitha vijayaprabha

ಚೆನ್ನೈ: ಭಾರತೀಯ ಚಿತ್ರರಂಗದಲ್ಲಿ ಅಚ್ಚಳಿಯದೆ ಉಳಿದಿರುವ ಖ್ಯಾತ ನಟಿ, ಮಾದಕ ಕಾಲುವೆ ಸಿಲ್ಕ್ ಸ್ಮಿತಾ ಅವರ ಮತ್ತೊಂದು ಜೀವನಾಧಾರಿತ ಸಿನಿಮಾ ತೆರೆಮೇಲೆ ಬರಲು ಸಿದ್ದವಾಗುತ್ತಿದೆ. ಒಂದು ಕಾಲದಲ್ಲಿ ಇಡೀ ಭಾರತೀಯ ಚಿತ್ರರಂಗದಲ್ಲಿ ನಟಿ ಸಿಲ್ಕ್ ಸ್ಮಿತಾ ಹೆಸರು ಕೇಳದವರು ಯಾರು ಇರಲಿಲ್ಲ. ನಟಿ ಸಿಲ್ಕ್ ಸ್ಮಿತಾ ಬೆಳ್ಳಿ ಪರದೆಯ ಮೇಲೆ ತನ್ನ ಮಾದಕ ಮೈಮಾಟ, ನೋಟದಿಂದ ಕಾಮುಕ ಚಿತ್ರ ಪ್ರೇಮಿಗಳನ್ನು ಹುಚ್ಚಬ್ಬಿಸುವಂತೆ ಮಾಡಿದ್ದರು.

ಆ ದಿನಗಳಲ್ಲಿ ಹಾಟ್ ಮತ್ತು ಬೋಲ್ಡ್ ಪಾತ್ರಗಳನ್ನು ನಿರ್ವಹಿಸುವ ಮೂಲಕ ಸೈ ಎನಿಸಿಕೊಂಡಿದ್ದ, ನಟಿ ಸಿಲ್ಕ್ ಸ್ಮಿತಾ ಅವರ ಜೀವನ ಬಹುತೇಕ ಮಧ್ಯವಯಸ್ಸಿನಲ್ಲಿ ಕೊನೆಗೊಂಡಿತು. ಸಿಲ್ಕ್ ಸ್ಮಿತಾ ಅವರು ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ 200 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು.

ನಟಿ ಸಿಲ್ಕ್ ಸ್ಮಿತಾ ಅವರ ಸಾವು ಇಂದಿಗೂ ಉತ್ತರಿಸಲಾಗದ ಪ್ರಶ್ನೆಯಾಗಿದೆ. ಸಿಲ್ಕ್ ಸ್ಮಿತಾಳನ್ನು ಕೊಲೆ ಮಾಡಲಾಗಿದೆಯೇ? ಅಥವಾ ಅವಳೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ? ಈ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಸಿಲ್ಕ್ ಸ್ಮಿತಾ ಅವರ ಸಾವು ಒಂದು ಅಸ್ಪಷ್ಟ ರಹಸ್ಯವವಾಗಿ ಉಳಿದಿದೆ.

Vijayaprabha Mobile App free

ಈ ವಿಷಯದ ಬಗ್ಗೆ ತಮಿಳಿನ ಖ್ಯಾತ ನಿರ್ದೇಶಕ ಕೆ.ಎಸ್.ಮಣಿಕಂದನ್ ಅವರು ನಟಿ ಸಿಲ್ಕ್ ಸ್ಮಿತಾ ಅವರ ಜೀವನದ ಬಗ್ಗೆ ಸಿನಿಮಾ ಮಾಡುವುದಾಗಿ ಘೋಷಿಸುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಕೆ.ಎಸ್.ಮಣಿಕಂದನ್ ಅವರು, ಇದುವರೆಗೂ ಸಿಲ್ಕ್ ಸ್ಮಿತಾ ಅವರಲ್ಲಿದ್ದ ಹಾಟ್‌ನೆಸ್‌ ಮತ್ತು ಬೋಲ್ಡ್ ನೆಸ್ ಗೆ ಹೋಲುವರು ಜನಿಸಿಲ್ಲ. ಆದರೆ, ಸಿಲ್ಕ್ ಸ್ಮಿತಾ ಜೀವನಾಧಾರಿತ ಪಾತ್ರವನ್ನು ನಿರ್ವಹಿಸಲು ಮತ್ತು ನ್ಯಾಯ ಒದಗಿಸಲು ಸೂಕ್ತ ನಟಿಯನ್ನು ಹುಡುಕುತ್ತಿದ್ದೇನೆ ಎಂದು ನಿರ್ದೇಶಕ ಕೆ.ಎಸ್.ಮಣಿಕಂದನ್ ಅವರು ಹೇಳಿದ್ದಾರೆ.

ನಿರ್ದೇಶಕ ಕೆ.ಎಸ್.ಮಣಿಕಂದನ್ ಅವರು ನಟಿ ಸಿಲ್ಕ್ ಸ್ಮಿತಾ ಜೀವನಾಧಾರಿತ ಚಿತ್ರಕ್ಕೆ ‘ಅವಲ್ ಅಪ್ಪಾದಿತನ್’ ಶೀರ್ಷಿಕೆಯನ್ನು ಆಯ್ಕೆ ಮಾಡಿದ್ದಾರೆ. ಅದರಲ್ಲಿ ಸಿಲ್ಕ್ ಸ್ಮಿತಾ ಸಾವಿನ ರಹಸ್ಯದ ಬಗ್ಗೆ ವಿಶೇಷ ಗಮನ ಹರಿಸುತ್ತಾರೆ ಎನ್ನಲಾಗಿದ್ದು, ಚಿತ್ರಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.

ಸಿಲ್ಕ್ ಸ್ಮಿತಾ ಅವರ ಜೀವನವನ್ನು ಆಧರಿಸಿದ ಸಿನಿಮಾ ಬಾಲಿವುಡ್ ನಲ್ಲಿ ‘ಡರ್ಟಿ ಪಿಕ್ಚರ್’ ಹೆಸರಿನಲ್ಲಿ ತೆರೆಕಂಡಿತ್ತು. ಈ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ಭಾರಿ ಯಶಸ್ಸನ್ನು ಕಂಡಿತ್ತು. ಈ ಸಿನಿಮಾದಲ್ಲಿ ನಟಿ ಸಿಲ್ಕ್ ಸ್ಮಿತಾ ಪಾತ್ರದಲ್ಲಿ ಬಾಲಿವುಡ್ ನಟಿ ವಿದ್ಯಾ ಬಾಲನ್ ನಟಿಸಿದ್ದರು. ಈ ಪಾತ್ರದಲ್ಲಿ ನಟಿಸಿದ ನಟಿ ವಿದ್ಯಾ ಬಾಲನ್ ಅವರಿಗೆ ದೊಡ್ಡ ಹೆಸರು ತಂದು ಕೊಟ್ಟಿತ್ತು.

ಇದನ್ನು ಓದಿ: ಅರೆನಗ್ನ ಫೋಟೋ ಪೋಸ್ಟ್ ಮಾಡಿ ತನ್ನ ದೇಹದ ಭಾಗಗಳನ್ನು ವರ್ಣಿಸಿ ಸಂಚಲನ ಮೂಡಿಸಿದ ಹಾಟ್ ಬ್ಯುಟಿ ಇಲಿಯಾನ…?

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.