‘ಪುಟ್ಟಗೌರಿ ಮದುವೆ’ ಧಾರಾವಾಹಿಯಲ್ಲಿ ಬಾಲ್ಯದ ಗೌರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಸಾನ್ಯ ಅಯ್ಯರ್ ಅವರು ಇದೀಗ ಬಿಗ್ ಬಾಸ್ ಒಟಿಟಿ ಕನ್ನಡ’ ಸ್ಪರ್ಧಿ ಯಾಗಿದ್ದು, ಇಲ್ಲಿ ತಮ್ಮ ಖಾಸಗಿ ಬದುಕಿನ ಅನೇಕ ಸತ್ಯಗಳು ಹೊರಹಾಕಿದ್ದು, ಸಾನ್ಯಾ ಅಯ್ಯರ್ ಜೀವನದ ಅನೇಕ ಕಹಿ ಘಟನೆಗಳ ಬಗ್ಗೆ ಅವರ ತಾಯಿ ದೀಪಾ ಅಯ್ಯರ್ ಮಾತನಾಡಿದ್ದು, ಮಗಳು ಲವ್ ಮಾಡಿದ್ದ ಹುಡುಗ ದೈಹಿಕವಾಗಿ ಶೋಷಣೆ ಮಾಡುತ್ತಿದ್ದ ಎಂಬುದನ್ನು ಅವರು ಬಾಯ್ಬಿಟ್ಟಿದ್ದಾರೆ.
ಹೌದು, ಇನ್ನು ಸಾನ್ಯಾ ಅಯ್ಯರ್ ಅವರು ಬಿಗ್ ಬಾಸ್ ಮನೆಯಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದರು ಇದಕ್ಕೆ ಸಂಭಂದಿಸಿದಂತೆ ಮಾತನಾಡಿದ ಅವರ ತಾಯಿ ದೀಪಾ ಅಯ್ಯರ್ ಅವಳು ಎರಡು ವರ್ಷದವಳಾಗಿದ್ದಾಗ ನನಗೆ ಡಿವೋರ್ಸ್ ಆಯ್ತು. ಹಾಗಾಗಿ ಅಪ್ಪನ ಪ್ರೀತಿ ಆಕೆಗೆ ಸಿಕ್ಕಿರಲಿಲ್ಲ. ನಂತರ ನನ್ನ ಓರ್ವ ಸ್ನೇಹಿತನನ್ನು ನಾನು ಮದುವೆ ಆದೆ. ಅದು ನನ್ನ ತಪ್ಪು ನಿರ್ಧಾರ ಆಗಿತ್ತು. ಸ್ನೇಹಿತರಾಗಿದ್ದಾಗ ಇದ್ದಂತಹ ಸಂಬಂಧ ಮದುವೆ ಆದ ಬಳಿಕ ಹಾಳಾಯಿತು. ಇನ್ನು ಇವಳಿಗೆ ಅಪ್ಪನ ಪ್ರೀತಿಯೇ ದಕ್ಕದಾಗೆ ಆಗಿಹೋಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಎರಡನೇ ಗಂಡನಿಗೆ ಡಿವೋರ್ಸ್ ಮಾಡಬೇಕು ಅಂತ ನಾನು ನಿರ್ಧರಿಸಿದಾಗ ಬಿಟ್ಟುಕೊಡಲು ಆತ ರೆಡಿ ಇರಲಿಲ್ಲ. ಅವನ ಜೊತೆ ಸಾನ್ಯಾಗೆ ಕೆಲವೊಮ್ಮೆ ಅನ್ಕಂಫರ್ಟ್ ಆಗುತ್ತಿತ್ತು. ಆತ ನಮ್ಮ ಜೊತೆಯೇ ಇರುತ್ತಿದ್ದ. ಒಮ್ಮೆ ಸಾನ್ಯಾ ಮತ್ತು ಆಕೆಯ ಬಾಯ್ ಫ್ರೆಂಡ್ ಒಂದು ರೂಮ್ನಲ್ಲಿ ಇದ್ದಾಗ ಪಕ್ಕದ ಮನೆಯ ಕಿಟಕಿಯಿಂದ ಬಂದು ಮೊಬೈಲ್ನಲ್ಲಿ ರೆಕಾರ್ಡ್ ಮಾಡಿ, ಅದನ್ನು ಎಲ್ಲರಿಗೂ ತೋರಿಸಿಕೊಂಡು ಬಂದಿದ್ದಾನೆ ಎಂದು ಸಾನ್ಯಾ ತಾಯಿ ದೀಪಾ ಅಯ್ಯರ್ ಹೇಳಿದ್ದಾರೆ.