ಕನ್ನಡದ ‘ಜೋಶ್’, ‘ರಾಧನ ಗಂಡ’ ಹಾಗೂ ‘100’ ಚಿತ್ರದಲ್ಲಿ ಅಭಿನಯಿಸಿರುವ ದಕ್ಷಿಣ ಭಾರತದ ಖ್ಯಾತ ನಟಿ ಪೂರ್ಣಾ ಅಲಿಯಾಸ್ ಶಮ್ನಾ ಕಾಸೀಮ್ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಹೌದು, ಚಿತ್ರರಂಗದಲ್ಲಿ ‘ಪೂರ್ಣಾ’ ಎಂದೇ ಚಿರಪರಿಚಿತರಾಗಿರುವ ಬಹುಭಾಷಾ ನಟಿ ಶಮ್ನಾ ಕಾಸಿಂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ದುಬೈನಲ್ಲಿ ಕಂಪನಿಯೊಂದರ ಮುಖ್ಯಸ್ಥರಾಗಿರುವ ಕೇರಳ ಮೂಲದ ಉದ್ಯಮಿ ಡಾ.ಶಾನಿದ್ ಆಸಿಫ್ ಅಲಿ ಅವರ ಜೊತೆ ಶಮ್ನಾ ಅವರ ವಿವಾಹ ನೆರವೇರಿದೆ.
ದುಬೈನಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಶಮ್ನಾ ಮತ್ತು ಶಾನಿದ್ ಅವರ ಕುಟುಂಬಸ್ಥರು ಮತ್ತು ಸಂಬಂಧಿಕರ ಸಮ್ಮುಖದಲ್ಲಿ ದಂಪತಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿವಾಹ ಸಮಾರಂಭದ ಫೋಟೋಗಳನ್ನು ನಟಿ ಪೂರ್ಣಾ ಅಲಿಯಾಸ್ ಶಮ್ನಾ ಕಾಸೀಮ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
❤️🧿 pic.twitter.com/uFOZLOTEbt
— Purnaa (@shamna_kkasim) October 24, 2022