ಇತ್ತೀಚೆಗಷ್ಟೇ ಖ್ಯಾತ ನಟಿಯರಾದ ಸಮಂತಾ, ಮಮತಾ ಮೋಹನ್ ದಾಸ್ ಮತ್ತು ರೇಣುದೇಸಾಯಿ ತಮ್ಮ ಅನಾರೋಗ್ಯದ ಬಗ್ಗೆ ಹೇಳಿಕೊಂಡಿದ್ದು, ಈ ಪಟ್ಟಿಗೆ ಕನ್ನಡತಿ ನಟಿ ಅನುಷ್ಕಾ ಶೆಟ್ಟಿ ಸೇರ್ಪಡೆಯಾಗಿದ್ದಾರೆ.
ಹೌದು, ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ಅನುಷ್ಕಾ ಶೆಟ್ಟಿ, ತಮಗಿರುವ ವಿಚಿತ್ರ ಸಮಸ್ಯೆಯನ್ನು ಬಹಿರಂಗಪಡಿಸಿದ್ದು, “ನಾನು ನಗಲು ಪ್ರಾರಂಭಿಸಿದರೆ 15-30 ನಿಮಿಷಗಳ ಕಾಲ ನಗುತ್ತಲೇ ಇರುತ್ತೇನೆ. ಇದನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಇದರಿಂದ ನನಗೆ ಅನೇಕ ಬಾರಿ ತೊಂದರೆಯಾಗಿದೆ ಎಂದಿದ್ದಾರೆ. ಆದರೆ, ಕೆಲವರು ತಮಾಷೆಗಾಗಿ ಈ ರೀತಿ ಹೇಳುತ್ತಿರುವುದಾಗಿ ಭಾವಿಸಿದ್ದಾರೆ. ನಿಜವಾಗಿಯೂ ನನಗೆ ಸಮಸ್ಯೆ ಇದೆ ಎಂದು ಅನುಷ್ಕಾ ಹೇಳಿಕೊಂಡಿದ್ದಾರೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.



