ವಿಚ್ಛೆದಿತ ಖ್ಯಾತ ನಟನೊಂದಿಗೆ ಪತಿ ಕಳೆದುಕೊಂಡ ಖ್ಯಾತ ನಟಿಯ ಮದುವೆ: ಧನುಷ್,ಮೀನಾ ಮದುವೆ ಬಗ್ಗೆ ಸ್ಪೋಟಕ ಮಾಹಿತಿ..!

ಕನ್ನಡದ ಪುಟ್ನಂಜ, ಚೆಲುವ, ಗ್ರಾಮದೇವತೆ, ಸಿಂಹಾದ್ರಿಯ ಸಿಂಹ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ನಟಿ ಮೀನಾ (Meena) ಹಾಗು ಕಾಲಿವುಡ್ ಸ್ಟಾರ್ ನಟ ಧನುಷ್ (Dhanush) ಮತ್ತೆ ಮದುವೆಯಾಗುತ್ತಿದ್ದಾರೆ (marriage) ಎನ್ನುವ ಸುದ್ದಿ…

Dhanush and Meena

ಕನ್ನಡದ ಪುಟ್ನಂಜ, ಚೆಲುವ, ಗ್ರಾಮದೇವತೆ, ಸಿಂಹಾದ್ರಿಯ ಸಿಂಹ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ನಟಿ ಮೀನಾ (Meena) ಹಾಗು ಕಾಲಿವುಡ್ ಸ್ಟಾರ್ ನಟ ಧನುಷ್ (Dhanush) ಮತ್ತೆ ಮದುವೆಯಾಗುತ್ತಿದ್ದಾರೆ (marriage) ಎನ್ನುವ ಸುದ್ದಿ ವೈರಲ್ ಆಗಿದೆ.

ಇದನ್ನು ಓದಿ: ವೀಕೆಂಡ್ ವಿತ್ ರಮೇಶ್​ಗೆ ಇವರೇ ಮೊದಲ ಅತಿಥಿ, ರಾಜಕಾರಣಿಗಳಿಗಿಲ್ಲ ಪ್ರವೇಶ; ಇಲ್ಲಿದೆ ಸಾಧಕರ ಲಿಸ್ಟ್

ಹೌದು, ತಮಿಳು ಸ್ಟಾರ್ ನಟ ಧನುಷ್ ಹಾಗು ದಕ್ಷಿಣ ಭಾರತದ ಖ್ಯಾತ ನಟಿ ಮೀನಾ (Meena) ವಿವಾಹದ ಕುರಿತ ಸುದ್ದಿಯೊಂದು ಹೊರಬಿದ್ದಿದ್ದು, ಧನುಷ್‌ ದಕ್ಷಿಣ ಭಾರತ ನಟಿಯಾದ ಮೀನಾ ಅವರನ್ನು ಮದುವೆಯಾಗಲಿದ್ದಾರೆ ಎಂದು ನಟ, ಪತ್ರಕರ್ತ ಬೈಲ್ವಾನ್ ರಂಗನಾಥನ್ (Bailwan Ranganathan) ಸ್ಪೋಟಕ ಹೇಳಿಕೆ ನೀಡಿದ್ದಾರೆ.

Vijayaprabha Mobile App free

actor Dhanush and actress Meena

ಇಬ್ಬರು ನಲವತ್ತರ ಆಸುಪಾಸಿನವರು. ಅವರಿಬ್ಬರೂ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದಾರೆ. ಹಾಗಾಗಿ, ಇಬ್ಬರೂ ಹೊಸ ಬದುಕು ಕಟ್ಟಿಕೊಳ್ಳುವುದರಲ್ಲಿ ತಪ್ಪೇನಿಲ್ಲ ಎಂದು ಹೇಳಿದ್ದು, ಈ ಜೂನ್ ನಲ್ಲಿ ಅವರು ಮದುವೆಯಾಗಬಹುದು. ಅವರು ಮದುವೆಯಾಗದೇ ಒಟ್ಟಾಗಿರುವ ಸಾಧ್ಯತೆಯಿದೆ ಕೂಡ ಎಂದು ನಟ, ಪತ್ರಕರ್ತ ಬೈಲ್ವಾನ್ ರಂಗನಾಥನ್ ಹೇಳಿಕೆ ನೀಡಿದ್ದಾರೆ.

ಇದನ್ನು ಓದಿ: ಖ್ಯಾತ ನಟಿಗೆ ಈ ಹೆಸರೇ ಸಮಸ್ಯೆ; ವಿಚ್ಛೇದನ ಬಳಿಕ ಎದುರಾದ ಸಮಸ್ಯೆ ಬಿಚ್ಚಿಟ್ಟ ಮಲೈಕಾ ಆರೋರ

ವಿಚ್ಛೇದನ ನೀಡಿರುವ ನಟ ಧನುಷ್ :

actor Dhanush and Aishwarya Rajinikanth

ಕಾಲಿವುಡ್​ನ ಸ್ಟಾರ್​ ದಂಪತಿಗಳೆಂದೇ ಖ್ಯಾತರಾಗಿದ್ದ ನಟ ಧನುಷ್​ (Dhanush) ಮತ್ತು ಸೂಪರ್​ಸ್ಟಾರ್​ ರಜಿನಿಕಾಂತ್​ ಹಿರಿಯ ಪುತ್ರಿ ಐಶ್ವರ್ಯಾ(Aishwarya Rajinikanth) ಬೇರೆ ಬೇರೆಯಾಗಿ ಅನೇಕ ತಿಂಗಳುಗಳೇ ಕಳೆದಿವೆ. ಸುಮಾರು 18 ವರ್ಷಗಳ ತಮ್ಮ ದಾಂಪತ್ಯ ಜೀವನಕ್ಕೆ 2022ರ ಜನವರಿ 17ರಂದು ಏಕಾಏಕಿ ಗುಡ್​ ಬೈ ಹೇಳುವ ಮೂಲಕ ಚಿತ್ರರಂಗಕ್ಕೆ ಮಾತ್ರವಲ್ಲದೇ ಅಸಂಖ್ಯಾತ ಅಭಿಮಾನಿಗಳಿಗೂ ಶಾಕ್​ ನೀಡಿದ್ದರು. ಸದ್ಯ ಇಬ್ಬರ ವಿಚ್ಛೇದನ (Divorce) ಪ್ರಕರಣ ಕೋರ್ಟ್‌ನಲ್ಲಿದ್ದು, ತಮ್ಮ ಮಕ್ಕಳಿಗಾಗಿ ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನು ಓದಿ: SSCಯಲ್ಲಿ 5,369 ಸರ್ಕಾರಿ ಹುದ್ದೆಗಳು: SSLC, ಪಿಯುಸಿ, ಡಿಗ್ರಿ ಪಾಸ್ ಆದವರು ಅರ್ಜಿ ಸಲ್ಲಿಸಿ, ಮಾರ್ಚ್ 27 ಕೊನೆಯ ದಿನ

ಪತಿಯನ್ನು ಕಳೆದುಕೊಂಡಿರುವ ಖ್ಯಾತ ನಟಿ ಮೀನಾ:

Meena and Vidyasagar

ಖ್ಯಾತ ನಟಿ ಮೀನಾ ಅವರು ವಿದ್ಯಾಸಾಗರ್​ (Vidyasagar) ಎಂಬುವರನ್ನು 2009ರ ಜುಲೈ 12ರಲ್ಲಿ ಮದುವೆಯಾದರು. ಅನಾರೋಗ್ಯದಿಂದ ಬಳಲುತ್ತಿದ್ದ ನಟಿ ಮೀನಾ ಅವರ ಪತಿ ವಿದ್ಯಾಸಾಗರ್​ 2022, ಜೂನ್​ 28ರ ರಾತ್ರಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾದರು.ಈ ದಂಪತಿಗೆ ಒಬ್ಬ ಹೆಣ್ಣು ಮಗಳು ಇದ್ದಾಳೆ. ಆದರೆ, ಪತಿಯನ್ನು ಕಳೆದುಕೊಂಡು ಏಕಾಂಗಿಯಾಗಿ ಜೀವನ ನಡೆಸುತ್ತಿರುವ ಮೀನಾ ತ್ತು ಧನುಷ್ ಮದುವೆ ಆಗ್ತಾರೆ ಎಂದು ನಟ ಬೈಲ್ವಾನ್ ರಂಗನಾಥನ್ ಹೇಳಿದ್ದು, ಬಾರಿ ಚರ್ಚೆಗೆ ಕಾರಣವಾಗಿದೆ.

ಈ ವಿಚಾರದ ಬಗ್ಗೆ ನಟ ಧನುಷ್‌ ಅಥವಾ ನಟಿ ಮೀನಾ ದೃಢಪಡಿಸಿಲ್ಲ. ಇನ್ನು, ಈ ಬಗ್ಗೆ ಮೀನಾ ಅಥವಾ ಧನುಷ್ ಏನು ಪ್ರತಿಕ್ರಿಯೆ ನೀಡುತ್ತಾರೆ ಎಂದು ಕಾದುನೋಡಬೇಕಿದೆ.

ಇದನ್ನು ಓದಿ: ಗುಡ್ ನ್ಯೂಸ್: ಇಂದೇ ನಿಮ್ಮ ಖಾತೆಗೆ 2000ರೂ; ಖಾತೆಗೆ 2000ರೂ ಜಮಾ ಆಗಿಲ್ವಾ, ಹೀಗೆ ಮಾಡಿ

ರಂಗನಾಥ್ ವಿರುದ್ಧ ಮುಗಿಬಿದ್ದ ಅಭಿಮಾನಿಗಳು:

ಧನುಷ್ ಅಭಿಮಾನಿಗಳು ರಂಗನಾಥನ್ ವಿರುದ್ಧ ಮುಗಿಬಿದ್ದಿದ್ದಾರೆ. ಯಾವಾಗಲೂ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಸುದ್ದಿಯಲ್ಲಿರುವ ನಟ, ಪತ್ರಕರ್ತ ರಂಗನಾಥನ್ ಈಗ ಮೀನಾ ಮತ್ತು ಧನುಷ್ ಬಗ್ಗೆ ಹೇಳಿಕೆ ನೀಡಿ ಮತ್ತೆ ಅವಾಂತರ ಸೃಷ್ಟಿಸಿಕೊಂಡಿದ್ದು, ವ್ಯಾಪಕ ಟೀಕೆ ವ್ಯಕ್ತವಾಗಿದೆ. ಹೌದು, ನಟ ಧನುಷ್ ಅಭಿಮಾನಿಗಳು ರಂಗನಾಥ್ ವಿರುದ್ಧ ಮುಗಿಬಿದ್ದಿದ್ದು, ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ.

ಬೈಲ್ವಾನ್ ರಂಗನಾಥನ್ ಸಿನಿಮಾ ಸ್ಟಾರ್‌ಗಳ ವಿರುದ್ಧ ಈ ರೀತಿ ಮಾಡುವುದು ಇದೆ ಮೊದಲಲ್ಲ. ಅನೇಕ ಬಾರಿ ರಂಗನಾಥನ್ ಇಂಥ ಹೇಳಿಕೆಗಳನ್ನು ನೀಡಿ ವಿವಾದಕ್ಕೆ ಸಿಲುಕಿದ್ದು, ಕಲಾವಿದರ ಆಕ್ರೋಶಕ್ಕೂ ಕಾರಣವಾಗಿದ್ದಾರೆ.

ಇದನ್ನು ಓದಿ: ಸ್ವಸಹಾಯ ಗುಂಪುಗಳಿಗೆ 10,000 ರೂ ಮತ್ತು 5 ಲಕ್ಷ ರೂ ಸಾಲ ಸೌಲಭ್ಯ; ಏನಿದು ಯುವಶಕ್ತಿ ಯೋಜನೆ, ಈ ಗುಂಪಿಗೆ ಸಿಗುವ ಸೌಲಭ್ಯಗಳೇನು?

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.