ಈ ವಾರ ಆರು ಕನ್ನಡ ಸಿನಿಮಾಗಳು ಮತ್ತು ಎರಡು ಕನ್ನಡಕ್ಕೆ ಡಬ್ ಆದ ಚಿತ್ರಗಳು ತೆರೆಗೆ ಬರುತ್ತಿದ್ದು,ಈ ಸಿನಿಮಾಗಳಲ್ಲಿ ಕೆಲವು ಭರವಸೆ ಮೂಡಿಸಿದ ಚಿತ್ರಗಳು ಇವೆ ಎನ್ನುವುದು ವಿಶೇಷ.
ಹೌದು, ನೀನಾಸಂ ಸತೀಶ್, ಹರಿಪ್ರಿಯಾ ನಟನೆಯ ಪೆಟ್ರೋಮ್ಯಾಕ್ಸ್, ಸ್ಮೈಲ್ ಶ್ರೀನು ನಿರ್ದೇಶನದಲ್ಲಿ ಮೂಡಿ ಬಂದ ‘ಓ ಮೈ ಲವ್’, ವಿಕ್ರಮ್ ಆರ್ಯ ನಟನೆಯ ಪದ್ಮಾವತಿ, ಅನೀಶ್ ಮುಖ್ಯಭೂಮಿಯ ಬೆಂಕಿ, ಹೊಸಬರ ಚೇಸ್, ಕರ್ಮಣ್ಯೆವಾಧಿಕಾರಸ್ತೆ ಹಾಗೂ ತೆಲುಗು ಮತ್ತು ತಮಿಳಿನಿಂದ ಕನ್ನಡಕ್ಕೆ ಡಬ್ ಆಗಿರುವ ಗಾರ್ಗಿ ಹಾಗೂ ಹುಡುಗಿ ಸಿನಿಮಾಗಳು ಕೂಡ ಇಂದು ಬಿಡುಗಡೆ ಆಗುತ್ತಿವೆ.
ಇನ್ನು, ತಮ್ಮದೇ ಆದ ಕಾರಣಗಳಿಂದಾಗಿ ಇವುಗಳಲ್ಲಿ ನೀನಸಂ ಸತೀಶ್ ಅಭಿನಯದ ಪೆಟ್ರೋಮ್ಯಾಕ್ಸ್, ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಹುಡುಗಿ ಸಿನಿಮಾ ಸೇರಿದಂತೆ ಕೆಲವು ಚಿತ್ರಗಳು ನಿರೀಕ್ಷೆ ಮೂಡಿಸಿವೆ.